‘ಸಂಘಟನಾತ್ಮ ಚಟುವಟಿಕೆಯಿಂದ ಸಂಸ್ಥೆಗಳ ಅಭಿವೃದ್ಧಿ ಸಾಧ್ಯ’

ಶ್ರೀರಾಂಪುರ: ಸಂಘ–ಸಂಸ್ಥೆಗಳು ಅಭಿವೃದ್ಧಿಯಾಗಬೇಕಾದರೆ ಸರ್ವ ಸದಸ್ಯರ ಸಂಘಟನಾತ್ಮಕ ಕಾರ್ಯ ಚಟುವಟಿಕೆ ಬಹಳ ಮುಖ್ಯ ಎಂದು ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಸದಸ್ಯ ಮಾವಿನಕಟ್ಟೆ ಗುರುಸ್ವಾಮಿ ಹೇಳಿದರು.
ಮಂಗಳವಾರ ಇಲ್ಲಿಗೆ ಸಮೀಪದ ಹೆಗ್ಗೆರೆ ಗ್ರಾಮದ ಕಲ್ಪವೃತ್ತ ಕೊಕೊನಟ್ ಪ್ರೊಡ್ಯೂಸರ್ಸ್ ಕಂಪನಿಯಿಂದ ಪ್ರಾರಂಭವಾದ ತೆಂಗು ಉತ್ಪನ್ನ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿ 1,627 ತೆಂಗು ಬೆಳೆಗಾರರ ಫೆಡರೇಷನ್‌ಗಳಿವೆ. ಆದರೆ, ಕರ್ನಾಟಕದಲ್ಲಿ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ. ತೆಂಗು ಬೆಳೆಗಾರರು ಹೆಚ್ಚು ಹೆಚ್ಚು ಸಂಘಟಿತ ರಾಗಬೇಕು. ಆ ಮೂಲಕ ತಮ್ಮ ಅಭಿವೃದ್ಧಿಗಾಗಿ ಹೋರಾಟ ನಡಸಬೇಕು. ಈ ಕಂಪನಿಯು ತಾಲ್ಲೂಕಿನಾದ್ಯಂತ ಷೇರುದಾರರನ್ನು ಹೊಂದಿದ್ದು, ಕಂಪನಿ ಅಭಿವೃದ್ಧಿಯಾದರೆ ತಾಲ್ಲೂಕಿನ ತೆಂಗು ಬೆಳೆಗಾರರು ಅಭಿವೃದ್ಧಿ ಹೊಂದುವು ದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
‘ದೊರೆತಿರುವ ಅವಕಾಶದಲ್ಲಿ ತಾಲ್ಲೂಕಿನ ತೆಂಗು ಬೆಳೆಗಾರರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸ ಲಾಗುವುದು. ಬೇರೆ ರಾಜ್ಯಗಳಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಯೋಜನೆಗಳನ್ನು ಕಂಪನಿಗಳ ಮೂಲಕ ಅನುಷ್ಠಾನಗೊಳಿಸ ಲಾಗುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಮೊದಲಿನಿಂದಲೂ ತೋಟಗಾ ರಿಕೆ ಇಲಾಖೆ ಮುಖಾಂತರ ಅನುಷ್ಠಾನ ಗೊಳಿಸಲಾಗುತ್ತಿದೆ. ಇದರಿಂದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ರೈತರಿಂದ ಪ್ರಾರಂಭವಾಗಿರುವ ಕಂಪನಿಗಳಿಗೆ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ವಹಿಸಿದರೆ ನೇರವಾಗಿ ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಪಿ.ರಂಗನಾಥ್ ಮಾತನಾಡಿ, ‘2014ರಲ್ಲಿ ಪ್ರಾರಂಭವಾದ ಈ ಕಂಪನಿಯಲ್ಲಿ 1,016 ಷೇರುದಾರರಿದ್ದು ₹1.07 ಕೋಟಿ ಷೇರು ಹಣ ಸಂಗ್ರಹಿಸಲಾಗಿದೆ. ಒಟ್ಟು ₹2.5 ಕೋಟಿ ಆಸ್ತಿಯನ್ನು ಹೊಂದಿದೆ. ಎರಡು ಎಕರೆ ಜಮೀನಿನಲ್ಲಿ ತೆಂಗು ಅಭಿವೃದ್ಧಿಗೆ ಸಂಬಂಧಿಸಿದಂತೆ ತರಬೇತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ’ ಎಂದು ನೂತನ ಸದಸ್ಯರಲ್ಲಿ ಮನವಿ ಮಾಡಿದರು.
ಕಂಪನಿಯ ಉಪಾಧ್ಯಕ್ಷ ವಿಜಯಕುಮಾರ್, ನರಸಿಂಹಮೂರ್ತಿ, ಕಂಪನಿಯ ನಿರ್ದೇಶಕರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.