ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ವರುಣನ ಆರ್ಭಟ

Last Updated 19 ಮೇ 2022, 3:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಬುಧವಾರ ಸಂಜೆಗೆ ಮಳೆ ಪುನಃ ಬಿರುಸು ಪಡೆಯಿತು. ಮಂಗಳವಾರ ತಡರಾತ್ರಿಯಿಂದ ಮುಂಜಾನೆವರೆಗೂ ಮಳೆ ಸುರಿದ ಕಾರಣ ಬೆಳಿಗ್ಗೆ ಜಿಟಿಜಿಟಿ ಹನಿಯ ಮೋಡಕವಿದ ವಾತಾವರಣ ಇತ್ತು.

ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ನಗರದ ಹೊಂಡಗಳು ಬಹುತೇಕ ತುಂಬುವ ಹಂತಕ್ಕೆ ತಲುಪಿವೆ. ತಗ್ಗು ಪ್ರದೇಶಕ್ಕೆ ನೀರು ನುಗ್ಗುತ್ತಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರಿಯೂರು ತಾಲ್ಲೂಕಿನ
ಇಕ್ಕನೂರಿನಲ್ಲಿ 88 ಮಿ.ಮೀ ಅತ್ಯಧಿಕ ಮಳೆ ದಾಖಲಾಗಿದೆ.

ಚಿತ್ರದುರ್ಗ 33, ಭರಮಸಾಗರ 19, ಸಿರಿಗೆರೆ 12, ತುರುವನೂರು 14, ಐನಹಳ್ಳಿ 13, ಹಿರಿಯೂರು 21, ಬಬ್ಬೂರು 28, ಈಶ್ವರಗೆರೆ 68, ಸುಗೂರು 39, ತಳುಕು 18, ಡಿ.ಮರಿಕುಂಟೆ 23, ನಾಯಕನಹಟ್ಟಿ 16 ಹಾಗೂ ಪರಶುರಾಮಪುರ 21 ಮಿ.ಮೀ ಮಳೆಯಾಗಿದೆ.

ಹೊಸದುರ್ಗ 23, ಮತ್ತೋಡು 25, ಶ್ರೀರಾಂಪುರ 55, ಮಾಡದಕೆರೆ 18, ಹೊಳಲ್ಕೆರೆ 17, ಬಿ.ದುರ್ಗ 11, ಎಚ್‌.ಡಿ.ಪುರ 36, ರಾಮಗಿರಿ 17, ಮೊಳಕಾಲ್ಮುರು 34, ಬಿ.ಜಿ ಕೆರೆ, ರಾಂಪುರ ತಲಾ 19, ದೇವಸಮುದ್ರ 78, ರಾಯಾಪುರ 14 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT