ಹಿರಿಯೂರು: ‘ಮುಕ್ತವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿ’ ಎಂದು ಬಿಬಿಎಂಪಿ ನಿವೃತ್ತ ಉಪ ಆಯುಕ್ತ ಬೇತೂರು ಪಾಳ್ಯ ಜೆ ರಾಜು ಅವರಿಗೆ ಎಲೆ ರಾಮಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಸೂಚಿಸಿದರು.

ನಗರದ ರಾಷ್ಟ್ರೀಯ ಹೆದ್ದಾರಿ 48ರ ಬೈಪಾಸ್ ರಸ್ತೆಯಲ್ಲಿರುವ ವೈಟ್ವಾಲ್ ಆವರಣದಲ್ಲಿ ಗುರುವಾರ ಬಿಬಿಎಂಪಿ ಉಪ ಆಯುಕ್ತ ಬೇತೂರು ಪಾಳ್ಯ ಜೆ ರಾಜು ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ರಾಜು ಅವರು ನಿವೃತ್ತರಾಗಿದ್ದರು, ಆರೋಗ್ಯ ಗಟ್ಟಿ ಇರುವವರೆಗೆ ನಿವೃತ್ತಿ ಇರದು. ರಾಜಕೀಯ ಕ್ಷೇತ್ರಕ್ಕೆ ರಾಜು ಅವರಂತಹ ಸಮಾಜಸೇವಕರ ಅಗತ್ಯವಿದೆ. ಅವರ ಸೇವೆ ಕುಂಚಿಟಿಗ ಸಮಾಜವೂ ಒಳಗೊಂಡು ಎಲ್ಲ ಸಮುದಾಯಗಳ ಬಡವರಿಗೆ ದೊರೆಯಲಿ’ ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ ರಾಜು, ‘ಸರ್ಕಾರಿ ಅಧಿಕಾರಿಯಾಗಿ ಜನರಿಗೆ ಕೈಲಾದಷ್ಟು ಸೇವೆ ಮಾಡಿದ್ದೇನೆ ಎಂಬ ತೃಪ್ತಿ ಇದೆ. ಇಷ್ಟೊಂದು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದು ಸನ್ಮಾನಿಸಿರುವುದು ಭವಿಷ್ಯದಲ್ಲಿ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಪ್ರೇರಣೆ ನೀಡಿದೆ’ ಎಂದರು.

ಕಾರ್ಯಕ್ರಮದಲ್ಲಿ ರೈತ ಮುಖಂಡ ಕಸವನಹಳ್ಳಿ ರಮೇಶ್, ಮುಖಂಡರಾದ ಬಿ.ಎಸ್. ರಘುನಾಥ್, ಕೆ.ಟಿ. ರುದ್ರಮುನಿ, ಎಚ್.ಆರ್. ತಿಮ್ಮಯ್ಯ, ನಿವೃತ್ತ ಪ್ರೊ.ಮೈಸೂರು ಶಿವಣ್ಣ, ಬಿ. ರಾಮಚಂದ್ರಪ್ಪ, ಪ್ರಾಂಶುಪಾಲ ವಸಂತ್ ಕುಮಾರ್, ಕೆ.ಜಿ.ಹನುಮಂತರಾಯ, ಕುಬೇರಪ್ಪ, ನಿವೃತ್ತ ಪ್ರಾಂಶುಪಾಲ ಬಿ. ರಾಜಶೇಖರ್, ಮಹಮದ್ ರಫೀಕ್, ಮೈಕೆಲ್, ರಮೇಶ್ ಬಾಬು, ತಿಮ್ಮನಹಳ್ಳಿ ರಾಜು, ಬಬ್ಬೂರ್ ಕುಮಾರ್, ಕುಸುಮಾ, ವಾಣಿ ಮಹಲಿಂಗಪ್ಪ, ಭೈರೇಶ್ ಪಟೇಲ್, ಸುಧಾ, ವಿಜಯನಗರ ಜಿಲ್ಲೆಯ ತೋಟೇಶ್ ಹಾಗೂ ನೂರಾರು ಸಂಖ್ಯೆಯ ರಾಜು ಅಭಿಮಾನಿಗಳು ಪಾಲ್ಗೊಂಡಿದ್ದರು.