ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮ್ ಶೃಂಗ ಸಭೆಗೆ ತರಳಬಾಳು ಶ್ರೀ ಗೈರು

Last Updated 3 ಅಕ್ಟೋಬರ್ 2021, 18:59 IST
ಅಕ್ಷರ ಗಾತ್ರ

ಸಿರಿಗೆರೆ: ಹವಾಮಾನ ವೈಪರೀತ್ಯ ಕುರಿತು ಅ.4ರಂದು ರೋಮ್‌ನಲ್ಲಿ ನಡೆಯುವ ಶೃಂಗಸಭೆಗೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗೈರಾಗಲಿದ್ದಾರೆ.ಆದರೆ, ವರ್ಚ್ಯುವಲ್ ಸಭೆಯಲ್ಲಿ ಭಾಗವಹಿಸುವುದಾಗಿ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕಿನ ಕಾರಣಕ್ಕೆ ವಿದೇಶದಿಂದ ಬರುವವರು ಹತ್ತು ದಿನ ಕ್ವಾರಂಟೈನ್ ಆಗಬೇಕೆಂಬ ಬಿಗಿ ನಿಯಮ ಇಟಲಿಯಲ್ಲಿದೆ. ಕಾರ್ಯ ಗೌರವದ ನಿಮಿತ್ತ ಅಷ್ಟು ದಿನ ಮುಂಚಿತವಾಗಿ ಶ್ರೀಗಳು ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಸಂಯೋಜಕರಿಗೆ ವಿಷಾದ ವ್ಯಕ್ತಪಡಿಸಿ ವಿದೇಶ ಪ್ರವಾಸವನ್ನು ರದ್ದುಪಡಿಸಲಾಗಿದೆ.

ಶೃಂಗಸಭೆಯ ಸಂಯೋಜಕರ ಕೋರಿಕೆ ಮೇರೆಗೆ ತಮ್ಮ ವಿಚಾರಗಳನ್ನು ಸಂಕ್ಷಿಪ್ತವಾಗಿ ವಿಡಿಯೊದಲ್ಲಿ ದಾಖಲಿಸಿ ಕಳುಹಿಸಿದ್ದಾರೆ. ಸ್ವಾಮೀಜಿಯವರ ವಿಚಾರಗಳನ್ನು ಜಗತ್ತಿನ ಅನೇಕ ಭಾಷೆಗಳಲ್ಲಿ ಭಾಷಾಂತರಿಸಿ ಪ್ರಸಾರ ಮಾಡುವುದಾಗಿ ಸಂಯೋಜಕರು ಮಾಹಿತಿ ನೀಡಿದ್ದಾರೆ. ಸ್ಕಾಟ್‌ಲೆಂಡ್‌ನ ಗ್ಲಾಸ್ಗೋದಲ್ಲಿ ಅ.31ರಿಂದ ನ.12ರವರೆಗೆ ನಡೆಯುವ ವಿಶ್ವ ರಾಷ್ಟ್ರೀಯ ಸಂಸ್ಥೆಯ 26ನೇ ಅಂತರರಾಷ್ಟ್ರೀಯ ಸಮ್ಮೇಳ
ನಕ್ಕೆ ಪೂರಕವಾಗಿ ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಶೃಂಗಸಭೆಯನ್ನು ಆಯೋಜಿಸಿದ್ದರು.
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಸಾಮಾಜಿಕ ಕಳಕಳಿ ಹಾಗೂ ಸೇವೆಯನ್ನು ಗುರುತಿಸಿ ಪೋಪ್ ಫ್ರಾನ್ಸಿಸ್ ಅವರು ಆಹ್ವಾನ ನೀಡಿದ್ದಾರೆ. ಆದರೆ ಆ ಸಭೆಗೂ ಶ್ರೀಗಳು ಗೈರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT