ಹಿರಿಯೂರು: ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮನವಿ ಮೇರೆಗೆ ಹಿರಿಯೂರು ತಾಲ್ಲೂಕಿನಲ್ಲಿ ₹ 22 ಕೋಟಿ ವೆಚ್ಚದಲ್ಲಿ ಎರಡು ರಾಜ್ಯ ಹೆದ್ದಾರಿಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವಂತೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಮರಡಿಹಳ್ಳಿಯಿಂದ ಕಂದಿಕೆರೆ ಮಾರ್ಗವಾಗಿ ಹರಿಯಬ್ಬೆ ಗ್ರಾಮವನ್ನು ಸೇರುವ ಒಂದು ರಸ್ತೆ, ಮೇಟಿಕುರ್ಕೆ ಗ್ರಾಮದಿಂದ ರಂಗೇನಹಳ್ಳಿ ಮಾರ್ಗವಾಗಿ ಶಿಡ್ಲಯ್ಯನಕೋಟೆ ಗ್ರಾಮವನ್ನು ಸೇರುವ 60 ರಿಂದ 70 ಕಿ.ಮೀ. ವಿಸ್ತೀರ್ಣದ ರಸ್ತೆ ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಸಚಿವ ಡಿ. ಸುಧಾಕರ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರು ರಸ್ತೆ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಟೆಂಡರ್ ಕರೆಯಲು ಸೂಚಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಗಣೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್, ಸಹಾಯಕ ಎಂಜಿನಿಯರ್‌ಗಳಾದ ಅನಂತರಾಜ್, ರವಿಶಂಕರ್, ಮುಖಂಡರಾದ ಖಾದಿ ರಮೇಶ್, ಈರಲಿಂಗೇಗೌಡ, ಪೃಥ್ವಿ, ಅವಿನಾಶ್, ವಿ.ಶಿವಕುಮಾರ್, ಜ್ಞಾನೇಶ್ ಉಪಸ್ಥಿತರಿದ್ದರು.