ಚಳ್ಳಕೆರೆ: ವೃದ್ಧರನ್ನು ಮಕ್ಕಳ ರೀತಿಯಲ್ಲಿ ಪೋಷಣೆ ಮಾಡಬೇಕು ಎಂದು ಇನ್ನರ್ ವ್ಹೀಲ್ ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಪ್ರಹ್ಲಾದ್ ಹೇಳಿದರು.

ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ವೃದ್ಧ ಮಹಿಳೆಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಕಿ, ಸಲುಹಿದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳದೇ, ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಯುವಜನತೆಗೆ ಕಿವಿಮಾತು ಹೇಳಿದರು.

ಸಂಘ-ಸಂಸ್ಥೆಗಳು ಸಮಾಜ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕಿ ನಾಗಶ್ರೀ ಹೇಳಿದರು.

ಸಂಸ್ಥೆಯ ನಿರ್ದೇಶಕಿ ಶ್ರೀನಿಧಿ, ಅರುಣ ಸುಬ್ಬುರಾಜ್, ವೈದ್ಯೆ ವಿದ್ಯಾ ಮಾತನಾಡಿದರು. ಸೂಲಗಿತ್ತಿ ಶತಾಯುಷಿ ತಳಕು ತಿಮ್ಮಜ್ಜಿ ಅವರನ್ನು ಸನ್ಮಾನಿಸಿ ಉಡುಪು, ಹೊದಿಕೆ ಹಾಗೂ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.

ಚಂದ್ರಕಲಾ, ಹನುಮಂತಪ್ಪ, ಮೀರಾ ರಮೇಶ್, ಸುಜಾತಾ, ಅನಿತಾ, ಶಶಿಧರ್, ಸುರಭಿ, ಮಲ್ಲಿಕಾರ್ಜುನ, ಮಂಜುಳಾ ಜಯಪಾಲಯ್ಯ, ಗೌತಮಿ, ಮೌನಶ್ರೀ, ಬೋರಣ್ಣ, ಯತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.