ನಾಯಕನಹಟ್ಟಿ: ‘ತುರುವನೂರು ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವತೆ ಮಾರಿಕಾಂಬ ದೇವಿ ಜಾತ್ರೆಯಲ್ಲಿ ಮೌಢ್ಯಾಚರಣೆಗಳು ನಡೆಯದಂತೆ ತಡೆ ಹಿಡಿಯಲಾಗಿದೆ’ ಎಂದು ಚಿತ್ರದುರ್ಗ ನಾಗರಿಕ ಹಕ್ಕು ಜಾರಿನಿರ್ದೇಶನಾಲಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಎಲ್.ಜಯಪ್ಪನಾಯಕ ಹೇಳಿದ್ದಾರೆ.

ಚಿತ್ರದುರ್ಗದ ನಾಗರಿಕ ಹಕ್ಕು ಜಾರಿನಿರ್ದೇಶನಾಲಯ ಪೊಲೀಸ್ ಠಾಣೆಯಿಂದ ಬುಧವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಜ. 6ರಿಂದ ಆರಂಭವಾದ ತುರವನೂರು ಮಾರಿಕಾಂಬ ಜಾತ್ರೆಯು ಜ. 8ರವರೆಗೆ ನಡೆಯಲಿದೆ. ಜ. 2ರಂದು ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರ್ ಗೋವಿಂದರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಗ್ರಾಮದಲ್ಲಿ ಸಭೆ ನಡೆಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

‘ಮಾರಿಕಾಂಬ ಜಾತ್ರೆಯಲ್ಲಿ ದಲಿತ ಸಮುದಾಯದಿಂದ ಬೆತ್ತಲೆ ಸೇವೆ, ಪ್ರಾಣಿ ಬಲಿ, ಪ್ರತಿ ಬೀದಿಗಳಲ್ಲಿ ಚರಗ ಆಚರಣೆಗೆ ಒತ್ತಾಯಿಸಿರುವ ಕುರಿತು ದೂರುಗಳು ಕೇಳಿ ಬಂದಿದ್ದವು. ಕರ್ನಾಟಕ ಸಾಮಾಜಿಕ ಮೌಢ್ಯ ನಿಷೇಧ ಕಾಯ್ದೆ– 2025ರ ಪ್ರಕಾರ ಬೆತ್ತಲೆ ಸೇವೆ, ಮಡೆಸ್ನಾನ, ಮಾಟಮಂತ್ರ, ಮೈಲಿಗೆ ನೆಪದಲ್ಲಿ ಬಹಿಷ್ಕಾರ ಹಾಕುವುದು ಶಿಕ್ಷಾರ್ಹ ಅಪರಾಧಗಳಾಗಿವೆ. ಗ್ರಾಮಸ್ಥರು ಈ ಪದ್ಧತಿಗಳನ್ನು ಬಿಟ್ಟು ಸೌಹಾರ್ದಯುತವಾಗಿ ಜಾತ್ರಾ ಮಹೋತ್ಸವ ನಡೆಸಬೇಕು. ಕಾನೂನು ಬಾಹಿರವಾಗಿ ಸಾಮಾಜಿಕ ಅನಿಷ್ಠ ಪದ್ಧತಿಗಳನ್ನು ನಡೆಸುವಂತೆ ತಳ ಸಮುದಾಯದವರಿಗೆ ಒತ್ತಾಯಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಅವರು ತಿಳಿಸಿದ್ದಾರೆ.

‘ತುರುವನೂರು ಗ್ರಾಮದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯಿಂದ ಕಣ್ಗಾವಲು ಇರಿಸಲಾಗಿದೆ. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟು ಯಾವುದೇ ಮೌಢ್ಯಾಚರಣೆಗಳು ನಡೆಯದಂತೆ ತಡೆ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.