ಚಿತ್ರದುರ್ಗ: ಕೋಟೆನಾಡಿನ ಶಕ್ತಿದೇವತೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಸಂಪ್ರದಾಯದಂತೆ ಶನಿವಾರ ದೇವಿಗೆ ಕಂಕಣಧಾರಣೆ ನಡೆಸಲಾಯಿತು. ಭಾನುವಾರ ಬೆಳಿಗ್ಗೆ 8ಗಂಟೆಗೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. ಉಗ್ರಾಣದ ವಂಶಸ್ಥರಿಂದ ದೇವಿಗೆ ಹೂವಿನ ವಿಶೇಷ ಅಲಂಕಾರ ಹಾಗೂ ರಾತ್ರಿ 8.30ಕ್ಕೆ ಭಕ್ತರ ಸಮ್ಮುಖದಲ್ಲಿ ಸರ್ಪೋತ್ಸವ ನಡೆಯಿತು.

ನಗರದ ಬುರುಜನಹಟ್ಟಿ ಸೇರಿದಂತೆ ಮತ್ತಿತರ ಬಡಾವಣೆಗಳ ಕೆಲ ಭಕ್ತರ ಮನೆಗಳಲ್ಲಿ ದೇವಿಗೆ ಪೂಜೆ ಸಲ್ಲಿಸಲಾಯಿತು. ನೆರೆದಿದ್ದವರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ದೇವಿಯನ್ನು ಪುನಃ ದೇಗುಲಕ್ಕೆ ಕರೆದೊಯ್ಯಲಾಯಿತು.

ಅಮ್ಮನವರ ದೇಗುಲದಲ್ಲಿ ಮುಂಜಾನೆಯಿಂದ ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯಗಳು ಜರುಗಿದವು. ಈ ವೇಳೆ ನೆರೆದಿದ್ದ ಭಕ್ತರು ಉದೋ..ಉದೋ...ಎಂಬ ಉದ್ಘಾರ ಘೋಷ ಮೊಳಗಿಸಿದರು. ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳನ್ನು ಹೊಂಬಾಳೆ, ಗುಲಾಬಿ, ಸಂಪಿಗೆ, ಮಲ್ಲಿಗೆ, ಕನಕಾಂಬರ, ಚೆಂಡು, ಪತ್ರೆ ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ನಿಂಬೆಹಣ್ಣಿನ ಹಾರ, ದ್ರಾಕ್ಷಿ ಸೇರಿದಂತೆ ಮತ್ತಿತರ ಹಣ್ಣುಗಳಿಂದ ಸಿಂಗಾರ ಮಾಡಲಾಗಿತ್ತು. ಪೂಜಾ ಕಾರ್ಯದ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಮೇ 5ರ ಬೆಳಿಗ್ಗೆ 8ಗಂಟೆಗೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ರಾತ್ರಿ 8.30ಕ್ಕೆ ನವಿಲು ಉತ್ಸವ, 7ರ ಬೆಳಗ್ಗೆ ಅಭಿಷೇಕ, ಮಹಾಮಂಗಳಾರತಿ ಹಾಗೂ 9ಗಂಟೆಗೆ ದೇವಿ ಕೆಳಗಿಳಿದು ರಾಜ ಬೀದಿಗಳಲ್ಲಿ ಕುದುರೆ ಉತ್ಸವ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. 8ರಂದು ಅಭಿಷೇಕ, ಮಹಾಮಂಗಳಾರತಿ, 9ರಂದು ಬೆಳಿಗ್ಗೆ ಪೂಜಾ ಕಾರ್ಯದ ಬಳಿಕ ನಗರದ ರಾಜ ಬೀದಿಗಳಲ್ಲಿ ನಾನಾ ಜಾನಪದ ಕಲಾ ಮೇಳಗಳೊಂದಿಗೆ ಹೂವಿನ ಉಚ್ಚಾಯ ರಥೋತ್ಸವ ನೆರವೇರಲಿದೆ.

10ರ ಮಧ್ಯಾಹ್ನ 12ಗಂಟೆಗೆ ದೇವಿಗೆ ವಿಶೇಷ ಭಂಡಾರದ ಪೂಜೆ ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 6ಗಂಟೆಗೆ ದೇವಸ್ಥಾನದ ಮುಂಭಾಗ ಸಿಡಿ ಉತ್ಸವ ಜರುಗಲಿದ್ದು, ಹರಕೆ ಹೊತ್ತ ಮಹಾ ಭಕ್ತರಿಂದ ಸಿಡಿ ಸೇವೆ ನಡೆಯಲಿದೆ. 11ರ ಬೆಳಿಗ್ಗೆ ಅಭಿಷೇಕ, ಮಹಾಮಂಗಳಾರತಿ ಬಳಿಕ ರಾತ್ರಿ 9ಗಂಟೆಗೆ ದೇವಿಯ ಮಹಾ ಭಕ್ತರಾದ ಜೋಗಪ್ಪ ಮತ್ತು ಜೋಗಮ್ಮನವರಿಂದ ಓಕುಳಿ ಸೇವೆ ಜರುಗಲಿದೆ. 3ರ ಬೆಳಗ್ಗೆ ಅಭಿಷೇಕ ನಡೆದ ಬಳಿ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.