ಸೋಮವಾರ, ಮೇ 23, 2022
30 °C
40 ಹಳ್ಳಿಗಳ ಜನರಿಗೆ ಅನುಕೂಲ: ಶಾಸಕ ಚಂದ್ರಪ್ಪ

ಮೇಲ್ದರ್ಜೆಗೆ ಎಚ್.ಡಿ. ಪುರ ಆರೋಗ್ಯ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಎಚ್.ಡಿ. ಪುರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಎಚ್.ಡಿ.ಪುರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲ್ಲಿನ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವಾಗ ಮೇಲ್ದರ್ಜೆಗೆ ಏರಿರುವುದರಿಂದ ಸುತ್ತಲಿನ 40 ಹಳ್ಳಿಗಳ ಜನರಿಗೆ ಅನುಕೂಲ ಆಗಲಿದೆ. ಪ್ರಸೂತಿ, ಹೆರಿಗೆ, ಮಕ್ಕಳ ತಜ್ಞರು, ಅನಸ್ತೇಶಿಯಾ, ದಂತವೈದ್ಯರು, ಫಿಜಿಷಿಯನ್ ಸೇರಿ ಐವರು ವೈದ್ಯರು ಇಲ್ಲಿ ಕರ್ತವ್ಯ ನಿರ್ವಹಿಸುವರು. ಆಸ್ಪತ್ರೆ 30 ಹಾಸಿಗೆ ಸೌಕರ್ಯ ಪಡೆಯಲಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. 6 ಜನ ಸ್ಟಾಫ್ ನರ್ಸ್, 10 ಡಿ ದರ್ಜೆ ನೌಕರರು, ಲ್ಯಾಬ್ ಟೆಕ್ನೀಷಿಯನ್, ಎಕ್ಸ್ ರೇ ತಜ್ಞರು, ಐಸಿಟಿಸಿ, ಅಂಬುಲೆನ್ಸ್, ಐಸಿಯು ಸೌಲಭ್ಯಗಳು ದೊರೆಯಲಿದ್ದು, ಇನ್ನೂ ದೊಡ್ಡ ಕಟ್ಟಡ ನಿರ್ಮಾಣ ಆಗಲಿದೆ ಎಂದರು.

ಈ ಭಾಗ ಸಾರಿಗೆ ಸೌಲಭ್ಯದಿಂದ ವಂಚಿತವಾಗಿದೆ. ಇಲ್ಲಿ ರೈತರೇ ಹೆಚ್ಚಿದ್ದು, ಹೆರಿಗೆ ಮತ್ತಿತರ ಚಿಕಿತ್ಸೆಗಾಗಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದ ಆಸ್ಪತ್ರೆಗಳಿಗೆ ಹೋಗಬೇಕಾಗಿತ್ತು. ಈಗ ಆರೋಗ್ಯ ಕೇಂದ್ರ ಮಂಜೂರಾಗಿರುವುದರಿಂದ ಅನುಕೂಲ ಆಗಿದೆ ಎಂದರು.

ಬೋರನಹಳ್ಳಿಯಲ್ಲಿ ₹30 ಲಕ್ಷ ವೆಚ್ಚದ ಸಿಸಿ ರಸ್ತೆ, ಎಚ್.ಡಿ. ಪುರದಲ್ಲಿ ₹ 25 ಲಕ್ಷದ ಕಾಂಕ್ರೀಟ್‌ ರಸ್ತೆ, ₹ 10 ಲಕ್ಷ ವೆಚ್ಚದ ಉಪ್ಪರಿಗೇನಹಳ್ಳಿ ಮಾಡದಕೆರೆ ರಸ್ತೆ, ಗೂಳಿಹೊಸಹಳ್ಳಿಯಲ್ಲಿ ₹ 1 ಕೋಟಿ ವೆಚ್ಚದ ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುಗ್ಗಮ್ಮ ನಾಗರಾಜ್, ಉಪಾಧ್ಯಕ್ಷ ಅಜ್ಜಪ್ಪ, ಚಿತ್ರಹಳ್ಳಿ ದೇವರಾಜು, ಎಲ್.ಬಿ. ರಾಜಶೇಖರ್, ಪರಮೇಶ್ವರಪ್ಪ, ಯತೀಶ್, ಡಾ. ಅಭಿಷೇಕ್, ಡಾ. ಜ್ಯೋತಿ, ಸತೀಶ್, ಎಂ.ಪಿ. ಪ್ರವೀಣ್, ನಾಗರಾಜ್, ಪ್ರಸನ್ನ, ಮಾಲತಿ, ರಾಜಪ್ಪ, ಎಸ್.ಎನ್.ಆರ್. ರಾಜಪ್ಪ, ಶೇಷಣ್ಣ, ಸಣ್ಣಸಿದ್ದಪ್ಪ, ಬೋರನಹಳ್ಳಿ ರಂಗಣ್ಣ, ಗೂಳಿಹೊಸಹಳ್ಳಿ ರಾಜಣ್ಣ, ದ್ಯಾಮಣ್ಣ, ಈಶ್ವರಪ್ಪ, ಚಂದ್ರಣ್ಣ, ಮರುಳಸಿದ್ದಪ್ಪ, ಪಣಿಯಪ್ಪ, ಗಂಗಪ್ಪ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.