ಭಾನುವಾರ, ಆಗಸ್ಟ್ 1, 2021
27 °C
ಸ್ವಗ್ರಾಮಕ್ಕೆ ಮರಳಿದ್ದ ಬೆಂಗಳೂರಿನ ವಿಕಾಸಸೌಧದಲ್ಲಿ ನರೇಗಾ ಕೇಸ್‌ ವರ್ಕರ್‌

ಗೊಲ್ಲಹಳ್ಳಿಯ ವ್ಯಕ್ತಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕಿನ ಗೊಲ್ಲಹಳ್ಳಿಯ ನಿವಾಸಿ, ಬೆಂಗಳೂರಿನ ವಿಕಾಸಸೌಧದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ವಿಭಾಗದ ಕೇಸ್ ವರ್ಕರ್ ಆಗಿರುವ 44 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ಬುಧವಾರ ದೃಢಪಟ್ಟಿದೆ. ಇದರೊಂದಿಗೆ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 26ಕ್ಕೇರಿದೆ.

ಜುಲೈ 7ರಂದು ಬೆಂಗಳೂರಿನಿಂದ ಗೊಲ್ಲಹಳ್ಳಿಗೆ ಬಂದಿದ್ದ ಸೋಂಕಿತ, ಕೋವಿಡ್–19 ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅಂದು ಸಂಜೆಯೇ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಬೆಳಿಗ್ಗೆ ಬಂದಿರುವ ವರದಿಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.

‘ಸೋಂಕಿತರ 62 ವರ್ಷದ ತಾಯಿ, 12 ಮತ್ತು 8 ವರ್ಷದ ಮಕ್ಕಳಿಬ್ಬರ ಸ್ವ್ಯಾಬ್ ಅನ್ನು ಸಂಗ್ರಹಿಸಲಾಗಿದ್ದು, ವರದಿ ಬರಬೇಕಿದೆ. ಬುಧವಾರ 31 ವರ್ಷದ ಪತ್ನಿ, 36 ವರ್ಷದ ಸಹೋದರ, 35 ವರ್ಷದ ಸಹೋದರನ ಪತ್ನಿ ಹಾಗೂ 10 ವರ್ಷದ ಅವರ ಮಗನ ಸ್ವ್ಯಾಬ್ ಸಂಗ್ರಹಿಸಿದ್ದೇವೆ’ ಎಂದು ಡಾ. ವೆಂಕಟೇಶ್ ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿ ಬೆಂಗಳೂರಿನ ಯಲಹಂಕ ಸಮೀಪದ ಲಕ್ಷ್ಮಯ್ಯ ಗಾರ್ಡನ್ ಬಡಾವಣೆಯಲ್ಲಿ ನೆಲೆಸಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು