ಶುಕ್ರವಾರ, ಫೆಬ್ರವರಿ 3, 2023
15 °C
ಚಿತ್ರದುರ್ಗ ಜಿಲ್ಲೆಯ ಹೊಸಹಳ್ಳಿಯಲ್ಲಿ ಘಟನೆ

ಚಿತ್ರದುರ್ಗ: ಸರಪಳಿ ಬಿಗಿದು ಕುಡುಕ ಗಂಡನ ಕಟ್ಟಿ ಹಾಕಿದ ಪತ್ನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ (ಚಿತ್ರದುರ್ಗ ಜಿಲ್ಲೆ): ಕುಡಿತಕ್ಕೆ ದಾಸನಾಗಿ ಕುಟುಂಬವನ್ನು ನಿರ್ಲಕ್ಷಿಸಿದ್ದ ಪತಿಯನ್ನು ಪತ್ನಿ ತನ್ನ ತವರು ಮನೆಯಲ್ಲಿ ಸರಪಳಿ ಬಿಗಿದು ಕಂಬಕ್ಕೆ ಕಟ್ಟಿ ಹಾಕಿದ್ದ ಘಟನೆ ಸಮೀಪದ ಹೊಸಹಳ್ಳಿಯಲ್ಲಿ ನಡೆದಿದೆ.

ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ರಂಗನಾಥ್ ಹೊಸಹಳ್ಳಿಯ ಅಮೃತಾ ಅವರೊಡನೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕುಡಿತದ ಚಟ ಅಂಟಿಸಿಕೊಂಡಿದ್ದ ರಂಗನಾಥ್‌ ಸಂಸಾರದ ಬಗ್ಗೆ ಗಮನ ನೀಡುತ್ತಿರಲಿಲ್ಲ. ಕುಡಿತದ ನಶೆಯಲ್ಲಿ ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಅಮೃತಾ ಗಂಡನನ್ನು ಮನೆಯಿಂದ ಹೊರಹೋಗದಂತೆ ತಡೆಯಲು ಕಾಲಿಗೆ ಸರಪಳಿ ಬಿಗಿದು, ಮನೆಯಲ್ಲಿನ ಕಂಬಕ್ಕೆ ಕಟ್ಟಿ ಬೀಗ ಜಡಿದು ಕೂಡಿ ಹಾಕಿದ್ದರು.

ಬುಧವಾರ ಹೊಸಹಳ್ಳಿಗೆ ತೆರಳಿದ್ದ ರಂಗನಾಥ್‌ನ ಪಾಲಕರಿಗೆ ಕೂಡಿ ಹಾಕಿರುವ ವಿಷಯ ತಿಳಿದಿದೆ. ಪಿಎಸ್ಐ ಪರಶುರಾಮ್ ಎನ್.ಲಮಾಣಿ ತನಿಖೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು