ಚಿತ್ರದುರ್ಗ: ಯುವಜನರ ದೈಹಿಕ ಹಾಗೂ ಮಾನಸಿಕ ಬಲವರ್ಧನೆಗೆ ಕಬಡ್ಡಿಯಂತಹ ದೇಶೀಯ ಕ್ರೀಡೆಗಳು ಸಹಕಾರಿಯಾಗಲಿವೆ ಎಂದು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಭಾನುವಾರ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ 2012-13ನೇ ಸಾಲಿನ ಜಿಲ್ಲಾಮಟ್ಟದ `ಅಸೋಸಿಯೇಷನ್ ಕಪ್~ ಪುರುಷರ ಕಬಡ್ಡಿ ಪಂದ್ಯಾವಳಿ ಸಮಾರೋಪದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪಂದ್ಯಗಳಲ್ಲಿ ಸೋಲಿನಿಂದ ಗೆಲುವಿನ ಕಡೆ ಕರೆದ್ಯೊಯುವ ಅಂಶ ಇರುತ್ತದೆ. ಆದ್ದರಿಂದ, ಎರಡು ಕಡೆಯವರು ಪಂದ್ಯಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಕಬಡ್ಡಿ ಕೆಲವೇ ಭಾಗಗಳಲ್ಲಿ ಉಳಿದುಕೊಂಡಿದ್ದು, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದವರೆಗೂ ಹೋಗುತ್ತಿದೆ. ಉನ್ನತ ಮಟ್ಟಕ್ಕೆ ಕಬಡ್ಡಿಯನ್ನು ತೆಗೆದುಕೊಂಡು ಹೋಗುವ ಅಗತ್ಯವಿದೆ ಎಂದು ನುಡಿದರು.

ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಕಬಡ್ಡಿ ಪಂದ್ಯಾವಳಿ ಆಯೋಜಿಸಲು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಫ್ರೆಡ್ ಲೈಟ್ ಅಳವಡಿಸಲು ಮುಂದಾಗುವ ಮೂಲಕ ದೇಶಿಯ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಅಂತಿಮ ಪಂದ್ಯದಲ್ಲಿ ನಗರದ ಮದಕರಿ ತಂಡ ಪ್ರಥಮ ಸ್ಥಾನಗಳಿಸುವ ಮೂಲಕ ಟ್ರೋಫಿ ಪಡೆದುಕೊಂಡರು. ಚಿತ್ರದುರ್ಗ ಸ್ಪೋಟ್ಸ್ ಕ್ಲಬ್ ತಂಡ ದ್ವಿತೀಯ ಬಹುಮಾನ ಪಡೆದರು. ವಿಜೇತ ತಂಡಕ್ಕೆ ಶಾಸಕ ಎಸ್.ಕೆ. ಬಸವರಾಜನ್ ಬಹುಮಾನ ವಿತರಿಸಿದರು.

ಜಿ.ಪಂ. ಅಧ್ಯಕ್ಷ ಟಿ. ರವಿಕುಮಾರ್, ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್, ವರ್ತಕ ಡಿ.ಎಸ್. ಸುರೇಶ್ಬಾಬು, ಜ್ಞಾನವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ. ಮಲ್ಲಿಕಾರ್ಜುನ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಚ್. ಜಯಣ್ಣ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್.ಕೆ. ಮುರುಗೇಶ್, ಕಬಡ್ಡಿ ತರಬೇತುದಾರ ಜಗದೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.