ಮೊಳಕಾಲ್ಮುರು: ಸ್ಥಗಿತವಾಗಿರುವ ಸಾಮಾಜಿಕ ಪಿಂಚಣಿ ಯೋಜನೆ ಹಣ ವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ತಾಲ್ಲೂಕಿನ ಮರ್ಲಹಳ್ಳಿ ಗ್ರಾಮದ ಸಾಮಾಜಿಕ ಪಿಂಚಣಿ ಯೋಜನೆ ಫಲಾನುಭವಿಗಳು ಸ್ಥಳೀಯ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘4–5 ತಿಂಗಳಿಂದ ಪಿಂಚಣಿ ಸ್ಥಗಿತ ಮಾಡಿರುವ ಪರಿಣಾಮ ಯೋಜನೆ ಫಲಾನುವಿಗಳಾದ ವೃದ್ಧರು, ಅಂಗವಿಕಲ ರಿಗೆ ತೀವ್ರ ತೊಂದರೆ ಯಾಗಿದೆ. ಪಿಂಚಣಿ ಹಣದಲ್ಲಿ ಔಷಧಿ ಕೊಂಡುಕೊಳ್ಳುತ್ತಿ ದ್ದೆವು ಹಾಗೂ ತುರ್ತು ಕಾರ್ಯಗಳಿಗೆ ಬಳಸುತ್ತಿದ್ದೆವು. ಪಿಂಚಣಿ ಸ್ಥಗಿತ ಪರಿಣಾಮ ಜೀವನ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ’ ಎಂದು ದೂರಿದರು.

ಖಜಾನೆ ಅಧಿಕಾರಿ ಚೌಡಪ್ಪ ಮಾತನಾಡಿ, ತಾಂತ್ರಿಕ ಕಾರಣಗಳಿಂದ ಪಿಂಚಣಿ ನೀಡುವಲ್ಲಿ ವಿಳಂಬವಾಗಿದೆ. ಸಮಸ್ಯೆ ಸರಿಪಡಿಸಿ 15 ದಿನಗಳಲ್ಲಿ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಿಪಿಐ ಕಾರ್ಯದರ್ಶಿ ಪಟೇಲ್ ಪಾಪನಾಯಕ, ಗ್ರಾಮ ಪಂಚಾಯ್ತಿ ಸದಸ್ಯ ದಾನಸೂರನಾಯಕ, ಜಯಣ್ಣ, ನಾಗರಾಜ್, ಸಣ್ಣ ಬೋರಮ್ಮ, ಲಕ್ಷ್ಮಮ್ಮ, ಗುಂಡಮ್ಮ, ಪಾಪಮ್ಮ, ತಿಪ್ಪಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.