ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಕೊರೊನಾ ಯೋಧರಿಗೆ ‘ಹರಿದ್ರಾಕಾಂಡ’ ಆಯುರ್ವೇದ ಉತ್ಪನ್ನ

ಎ.ವಿ.ಎಸ್. ಆಯುರ್ವೇದ ಕಾಲೇಜು ತಯಾರಿಸಿದ ಉತ್ಪನ್ನ
Last Updated 7 ಮೇ 2020, 5:26 IST
ಅಕ್ಷರ ಗಾತ್ರ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜಿನ ಫಾರ್ಮಸಿಯಲ್ಲಿ ತಯಾರಿಸಿದ ಕೊರೊನಾ ರೋಗ ನಿರೋಧಕ ಉತ್ಪನ್ನಗಳನ್ನು ಕೊರೊನಾ ವಾರಿಯರ್ಸ್ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳ ಮುಖಾಂತರ ನೀಡಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯುಷ್ ಮಂತ್ರಾಲಯದಿಂದ ನಿಗದಿಪಡಿಸಿದ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಆಯುರ್ವೇದ ಕಾಲೇಜು ಫಾರ್ಮಸಿಯಲ್ಲಿ, ಔಷಧ ತಜ್ಞರ ನೆರವಿನಿಂದ ಹರಿದ್ರಾಕಾಂಡ ಹಾಗೂ ಹರ್ಬಲ್ ಟೀ ಉತ್ಪನ್ನಗಳನ್ನು ತಯಾರಿಸಲಾಗಿದೆ ಎಂದು ಬಿ.ಎಲ್.ಡಿ.ಇ ನಿರ್ದೇಶಕ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹೇಳಿದರು.

ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ₹ 1ಲಕ್ಷ ಕಾಲೇಜಿಗೆ ನೀಡಿ, ಈ ಔಷಧ ಉತ್ಪನ್ನಗಳನ್ನು ಖರೀದಿಸಿ, ಜಿಲ್ಲಾಡಳಿತಕ್ಕೆ ನೀಡಿದ್ದಾರೆ ಎಂದರು.

ಹರಿದ್ರಾಕಾಂಡ ‘ಗೊಲ್ಡನ್ ಮಿಲ್ಕ್’ ಎಂದು ಹಾಗೂ ನಿತ್ಯ ಕುಡಿಯುವ ಚಹಾದಲ್ಲಿ ಹರ್ಬಲ್ ಟೀ ಬೆರೆಸಿ, ಕುಡಿಯಬಹುದಾಗಿದೆ ಎಂದು ತಿಳಿಸಿದರು.

ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ಕೊರೊನಾ ವಿರುದ್ಧ ಸೆಣಸಾಡಲು ಇನ್ನು ಲಸಿಕೆಗಳು ಲಭ್ಯವಿಲ್ಲ. ಇಸ್ರೆಲ್ ಲಸಿಕೆ ತಯಾರಿಸಿದ ಎಂಬ ಸುದ್ದಿ ಬಂದಿದ್ದು, ಇದು ಮಾರುಕಟ್ಟೆಗೆ ಬರಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ನಮ್ಮ ಮನೆ ಮದ್ದು ಸದ್ಯಕ್ಕೆ ದಿವ್ಯ ಔಷಧವಾಗಿದ್ದು, ನಮ್ಮ ಅಡಿಗೆ ಮನೆಗಳಲ್ಲಿ ಸಿಗುವ, ದಿನನಿತ್ಯ ಬಳಸುವ ಪದಾರ್ಥಗಳನ್ನು ನಾವು ರೋಗ ಪ್ರತಿನಿರೋಧಕ ಶಕ್ತಿಯನ್ನು ಬೆಳೆಸಲು ಬಳಸಬಹುದಾಗಿದೆ ಎಂದರು.

ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಇಂಗ್ಲೆಂಡ್ ಪ್ರಧಾನಿ ಸೇರಿದಂತೆ ಜಗತ್ತಿನ ಅನೇಕ ಗಣ್ಯರು, ರಾಜಮನೆತನದವರು ಕೊರೊನಾ ಕಾಯಿಲೆಗಿಡಾದಾಗ ಪರ್ಯಾಯ ಔಷಧ ಪದ್ಧತಿಗಳನ್ನು ಬಳಸಿಯೇ ಗುಣಮುಖರಾಗಿದ್ದಾರೆ ಎಂದು ಹೇಳಿದರು.

ಆಯುರ್ವೇದ, ಹೋಮಿಯೊಪತಿ, ಯೋಗ ಪದ್ಧತಿಗಳಿಗೆ ಬೆಲೆ ಬಂದಿದೆ. ಬಿ.ಎಲ್.ಡಿ.ಇ ಆಯುರ್ವೇದ ಫಾರ್ಮಸಿಯಲ್ಲಿ ತಯಾರಿಸಿರುವ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಅನುಮತಿ ಕೇಳಿದ್ದು, ದೊರೆತ ನಂತರ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ಸಾರ್ವಜನಿಕರಿಗೆ ನಿಗದಿತ ದರದಲ್ಲಿ ನೀಡಲಾಗುವದು ಎಂದರು.

ಕಾಲೇಜು ಉಪಪ್ರಾಚಾರ್ಯ ಡಾ.ಶಶಿಧರ ನಾಯಕ, ಡಾ.ಪ್ರಮೋದ ಬರಗಿ, ಮಾರುಕಟ್ಟೆ ಅಧಿಕಾರಿ ಸಿದ್ದಾರ್ಥ ಪಾಟೀಲ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಔಷಧ ಉತ್ಪನ್ನಗಳನ್ನು ಸ್ವೀಕರಿಸಿ, ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT