ಗುರುವಾರ , ಫೆಬ್ರವರಿ 20, 2020
19 °C

ಬಿದರೆ ದೇವಸ್ಥಾನ ಕಳವು: ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಮೀಪದ ಬಿದರೆಯ ಸಾಯಿಬಾಬ ಮಂದಿರದ ಹುಂಡಿ ಹೊಡೆದು ಹಣ ದೋಚಿದ್ದ ಆರೋಪಿಗಳನ್ನು 10 ದಿನಗಳಲ್ಲೇ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.‌

ದಕ್ಷಿಣ ಕನ್ನಡದ ಭಂಟ್ವಾಳದ ಇಸ್ಮಾಯಿಲ್ (49), ಮಹಮದ್ ಗೌಸ್‌ (34), ಉಡುಪಿಯ ಪ್ರೇಮನಾಥ್ (18) ಮೂಡಬಿದರೆ ತೌಸಿಫ್ ಆಹಮದ್ (30) ಹಾಗೂ ಕಡೂರಿನ ತಿಮ್ಮಯ್ಯ (58) ಬಂಧಿತ ಆರೋಪಿಗಳು.

ಆರೋಪಿಗಳಿಂದ 24,500 ನಗದು, ಒಂದು ಪಿಸ್ತೂಲ್, ಕಾರು ಹಾಗೂ ಕಬ್ಬಿಣದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. 

ನವೆಂಬರ್ 25ರಂದು ಬೆಳಿಗಿನ ಜಾವ ದೇವಸ್ಥಾನಕ್ಕೆ ನುಗ್ಗಿದ್ದ ಆರೋಪಿಗಳು ಹುಂಡಿ ಹೊಡೆದು ಸುಮಾರು ₨ 50 ಸಾವಿರ ನಗದು ದೋಚಿದ್ದರು. ಆರೋಪಿಗಳ ಪತ್ತೆಗೆ ಡಿವೈಎಸ್‌ಪಿ ಉಮೇಶ ಈಶ್ವರ ನಾಯ್ಕ, ಸಿಪಿಐ ಲೋಕೇಶ್, ಪಿಎಸ್‌ಐ ಮಂಜು ಕುಪ್ಪಲೂರು ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಶುಕ್ರವಾರ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು