ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ಜಾಲವನ್ನು ಮೇಲ್ದೆರ್ಜೆಗೇರಿಸಲು ₹ 1,200 ಕೋಟಿಯ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪಾಲಿಕೆಯ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ಪಾಲಿಕೆ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಫೋನ್–ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಅಪಾರ್ಟ್ಮೆಂಟ್ ಸಮುಚ್ಚಯಗಳ ಶೌಚಯುಕ್ತ ಕೊಳಚೆ ನೀರನ್ನು ಸಂಸ್ಕರಿಸದೆಯೇ ಮಳೆ ನೀರು ಹರಿಯುವ ಚರಂಡಿಗೆ ಬಿಡುವುದರಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಅನೇಕ ಸಾರ್ವಜನಿಕರು ಫೋನ್ ಇನ್ ಕಾರ್ಯಕ್ರಮದಲ್ಲಿ ಅಳಲು ತೋಡಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕೆಲವು ಹಳೆ ಅಪಾರ್ಟ್ಮೆಂಟ್ ಸಮುಚ್ಚಯಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್ಟಿಪಿ) ಇಲ್ಲ. ಎಸ್ಟಿಪಿ ಹೊಂದಿರುವ ಕೆಲವು ಅಪಾರ್ಟ್ಮೆಂಟ್ ಸಮುಚ್ಚಯಗಳು ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಕೊಳಚೆ ನೀರನ್ನು ಸಂಸ್ಕರಿಸದೆಯೇ ತೋಡಿಗೆ ಹರಿಸುವುದನ್ನು ತಡೆಯಲು ಒಳಚರಂಡಿ ಜಾಲವನ್ನು ಮೇಲ್ದರ್ಜೆಗೇರಿಸುವುದೇ ಪರಿಹಾರ’ ಎಂದರು.

ನಗರದ ಕೆಲವು ಕಡೆ ಹಳೆಯ ಯುಜಿಡಿ ಜಾಲವನ್ನು ಮೇಲ್ದರ್ಜೆಗೇರಿಸಬೇಕಿದೆ. ಕೆಲ ಕಡೆ ಯುಜಿಡಿ ಜಾಲದ ಸಂಪರ್ಕ ಬಿಟ್ಟುಹೋಗಿದ್ದು, ಅಲ್ಲಿ ಹೊಸ ಕೊಳವೆ ಅಳವಡಿಸಬೇಕಿದೆ. ಕೆಲವು ಪ್ರದೇಶಗಳಲ್ಲಿ ಹೊಸತಾಗಿ ಯುಜಿಡಿ ಸೌಕರ್ಯ ಕಲ್ಪಿಸಬೇಕಿದೆ. ಆರು ವರ್ಷಗಳ ಬಳಿಕ ನಗರದ ಅಂದಾಜು ಜನಸಂಖ್ಯೆಯನ್ನು ಆಧರಿಸಿ ಒಳಚರಂಡಿ ಜಾಲ ಸುಧಾರಣೆಯ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಮುಂಬರುವ ಬಜೆಟ್ನಲ್ಲಿ ಇದಕ್ಕೆ ಅನುದಾನವನ್ನು ನೀಡುವಂತೆ ಕೋರಿದ್ದೇವೆ ಎಂದರು.

ಫೋನ್ ಇನ್ ಕಾರ್ಯಕ್ರಮದಲ್ಲಿ 30 ಕರೆಗಳಿಗೆ ಜಿಲ್ಲಾಧಿಕಾರಿ ಉತ್ತರಿಸಿದರು. ಸರ್ಕಾರಿ ಸಿಟಿ ಬಸ್ ಸೌಕರ್ಯ ಇಲ್ಲದಿರುವುದು, ಕಸ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು, ಬೀದಿ ದೀಪ ನಿರ್ವಹಣೆಯಲ್ಲಿ ಅವ್ಯವಸ್ಥೆ, ಮಳೆಗಾಲದಲ್ಲಿ ಮಳೆ ನೀರು ಮನೆಯೊಳಗೆ ನುಗ್ಗುವುದು, ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊ ಟಿಪ್ಪರ್ಗಳಿಂದ ಕಾಂಪ್ಯಾಕ್ಟರ್ ಟ್ರಕ್ಗಳಿಗೆ ಕಸವನ್ನು ರಸ್ತೆ ಬದಿಯಲ್ಲೇ ವರ್ಗಾಯಿಸುವುದರಿಂದ ಎದುರಾಗುವ ದುರ್ವಾಸನೆ ಸಮಸ್ಯೆ, ಕುಡಿಯುವ ನೀರಿನ ಕೊಳವೆ ಅಳವಡಿಸಲು ಅಗೆದ ರಸ್ತೆ ದುರಸ್ತಿಪಡಿಸದಿರುವುದು... ಸೇರಿದಂತೆ ನಗರದ ಹತ್ತು ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ತೋಡಿಕೊಂಡರು.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರ ಅಧಿಕಾರಿಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮೈಮೇಲೆ ಬರುವಂತೆ ವೇಗವಾಗಿ ಸಾಗಿಬರುವ ಸಿಟಿ ಬಸ್ಗಳ ವೇಗ ನಿಯಂತ್ರಿಸಿ ನಗರದ ಕೆಲವೆಡೆ ಪಾದಚಾರಿ ಮಾರ್ಗವೇ ಇಲ್ಲ, ಜನ ನಡೆಯಲು ದಾರಿ ಬಿಡಿ ಕಾವೂರು ಜಂಕ್ಷನ್ ಸಂಚಾರ ದಟ್ಟಣೆ ನಿವಾರಿಸಿ, ಜೀಬ್ರಾ ಕ್ರಾಸಿಂಗ್ ಅಳವಡಿಸಿ

‘10ಕ್ಕೂ ಹೆಚ್ಚು ಕಡೆ ಬೀದಿನಾಯಿ ಆಶ್ರಯತಾಣ’ ‘ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈಚೆಗೆ ನೀಡಿರುವ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬೀದಿ ನಾಯಿಗಳ ಆಶ್ರಯತಾಣ ನಿರ್ಮಿಸಲು ಕ್ರಮ ವಹಿಸಲಾಗಿದೆ. 10ಕ್ಕೂ ಹೆಚ್ಚು ಕಡೆ ಜಾಗ ಗುರುತಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ಪಾಲಿಕೆ ಸಂಬಂಧಿಸಿದಂತೆ ಬೊಂಡಂತಿಲದಲ್ಲಿ 10 ಎಕರೆಯಲ್ಲಿ ಬೀದಿ ನಾಯಿ ಆಶ್ರಯತಾಣ ನಿರ್ಮಿಸುವ ಪ್ರಸ್ತಾವ ಇದೆ. ಅದಲ್ಲದೇ ಮಂಗಳೂರು ಉತ್ತರ ಮಂಗಳೂರು ದಕ್ಷಿಣ ಮೂಲ್ಕಿ ಉಳ್ಳಾಲ ಮುಂತಾದ ಕಡೆಯೂ ಜಾಗ ಗುರುತಿಸಲು ಸೂಚಿಸಿದ್ದೇನೆ’ ಎಂದರು.

ಮಗಳ ಅಂಕಪಟ್ಟಿಗಾಗಿ ಕಣ್ಣೀರಿಟ್ಟ ತಾಯಿ... ‘ನಾನು ಬೇರೆಯವರ ಮನೆಗಳಲ್ಲಿ ಕೆಲಸ ಮಾಡಿಕೊಂಡು ಮಗಳನ್ನು ಓದಿಸುತ್ತಿದ್ದೇನೆ. ಕಲಿಕೆಯಲ್ಲಿ ಮುಂದಿದ್ದ ಆಕೆಯನ್ನು ಸಾಲ ಮಾಡಿ ನಗರದ ಖಾಸಗಿ ಕಾಲೇಜೊಂದರಲ್ಲಿ ಬಿಎಸ್ಸಿ ನರ್ಸಿಂಗ್ಗೆ ಸೇರಿಸಿದ್ದೆ. ಬಳಿಕ ಅವಳಿಗೆ ಸರ್ಕಾರಿ ಕೋಟಾದಡಿ ಸೀಟು ಸಿಕ್ಕಿದ್ದು ಬೇರೆ ಕಾಲೇಜಿಗೆ ಸೇರಿಸಬೇಕಾಯಿತು. ಮೊದಲು ಸೇರಿಸಿದ್ದ ಕಾಲೇಜಿನವರು ₹ 1.50 ಲಕ್ಷ ಶುಲ್ಕ ಪಡೆದಿದ್ದು ಅದನ್ನು ಮರಳಿಸಿಲ್ಲ. ಮಗಳ ಅಂಕಪಟ್ಟಿಯೂ ಸೇರಿದಂತೆ ಮೂಲದಾಖಲೆಗಳನ್ನು ಮರಳಿಸಲು ಸತಾಯಿಸುತ್ತಿದ್ದಾರೆ. ಮಗಳ ಶಿಕ್ಷಣಕ್ಕೆ ಧಕ್ಕೆ ಆಗುತ್ತಿದೆ’ ಎಂದು ಕೊಟ್ಟಾರಚೌಕಿಯ ಮಹಿಳೆಯೊಬ್ಬರು ಕಣ್ಣೀರಿಟ್ಟು ಅಳಲು ತೋಡಿಕೊಂಡರು. ಈ ಕುರಿತು ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಮ್ಮ ಕಚೇರಿ ಸಿಬ್ಬಂದಿಗೆ ಸೂಚಿಸಿದರು.

‘ಮಾರ್ಚ್ ಒಳಗೆ 50 ಎಲೆಕ್ಟ್ರಿಕ್ ಬಸ್’ ‘ನಗರಕ್ಕೆ 100 ಎಲೆಕ್ಟ್ರಿಕ್ ಬಸ್ಗಳು ಮಂಜೂರಾಗಿವೆ. ಇವುಗಳಲ್ಲಿ ಶೇ 50ರಷ್ಟು ಬಸ್ಗಳು 2026ರ ಮಾರ್ಚ್ ಒಳಗೆ ಪೂರೈಕೆ ಆಗಲಿವೆ. ಇನ್ನುಳಿದವು ಆ ಬಳಿಕ ಮೂರು ತಿಂಗಳಲ್ಲಿ ಪೂರೈಕೆ ಆಗಲಿವೆ. ಆ ಬಸ್ಗಳ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.