ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ದೇರಳಕಟ್ಟೆಯಲ್ಲಿ ಆವರಣಗೋಡೆ ಕುಸಿದು 2 ಕಾರು ಜಖಂ

Published 25 ಮೇ 2024, 13:17 IST
Last Updated 25 ಮೇ 2024, 13:17 IST
ಅಕ್ಷರ ಗಾತ್ರ

ಉಳ್ಳಾಲ (ದಕ್ಷಿಣ ಕನ್ನಡ): ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ಬಳಿ ಮರದ ಮಿಲ್‌ನ ಆವರಣ ಗೋಡೆ ಕುಸಿದು ಎರಡು ಕಾರುಗಳು ಜಖಂಗೊಂಡಿದ್ದು, ಒಂದು ಕೈಗಾಡಿ ಶನಿವಾರ ಸಂಜೆ ಹಾನಿಗೊಳಗಾಗಿದೆ.

ಗೋಡೆ ಕುಸಿದ ಸಂದರ್ಭದಲ್ಲಿ ವಾಹನದಲ್ಲಿ ಯಾರೂ ಇಲ್ಲದ ಕಾರಣ ಮತ್ತು ಆವರಣ ಗೋಡೆ ಬದಿಯಲ್ಲಿ ಎರಡೇ ವಾಹನಗಳು ಇದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದಂತಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣಗೋಡೆ ಒದ್ದೆಯಾಗಿತ್ತು. ಯೇನೆಪೋಯ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಕೇರಳದ ಕುಟುಂಬವೊಂದು ಆವರಣ ಗೋಡೆ ಪಕ್ಕ ಕಾರು ನಿಲ್ಲಿಸಿದ್ದರು. ಆವರಣ ಗೋಡೆಯ ಕೆಂಪುಕಲ್ಲುಗಳಡಿ ಸಿಲುಕಿ ಈ ಕಾರುಗಳ ಗಾಜುಗಳು ನಜ್ಜುಗುಜ್ಜಾಗಿವೆ. ಸ್ಥಳದಲ್ಲಿದ್ದ ಬೇಲ್‍ಪುರಿ ಮಾರಾಟದ ಗಾಡಿ ಕಲ್ಲಿನಡಿಗೆ ಸಿಕ್ಕಿ ಸಂಪೂರ್ಣ ಹಾನಿಗೊಂಡಿದೆ. ಬೇಲ್‍ಪುರಿ ಮಾರುವವ ಎರಡು ದಿನಗಳ ಹಿಂದೆ ಸ್ಥಳಕ್ಕೆ ₹ 15 ಸಾವಿರ ಪಾವತಿ ಮಾಡಿ ಆವರಣ ಗೋಡೆ ಪಕ್ಕದಲ್ಲಿ ಕೈಗಾಡಿಯನ್ನು ನಿಲ್ಲಿಸಿದ್ದ. ಆ ಕೈಗಾಡಿ ಕಲ್ಲುಗಳ ಅಡಿ ಸಿಲುಕಿ ಅಪ್ಪಚ್ಚಿಯಾಗಿದೆ.

ವಾಹನಗಳು ಕಡಿಮೆಯಿತ್ತು: ಆಸ್ಪತ್ರೆಗೆ ರೋಗಿಗಳನ್ನು ಕರೆತರುವವರು ಖಾಸಗಿ ಜಾಗದಲ್ಲಿ ಹಣ ಪಾವತಿ ಮಾಡಿ ಕಾರು ನಿಲುಗಡೆ ಮಾಡಲು ವಕಾಶ ಕಲ್ಪಿಸಲಾಗಿತ್ತು. ಪ್ರತೀ ದಿನ ಈ ಜಾಗದ ಪಕ್ಕದಲ್ಲಿರುವ ಮರದ ಮಿಲ್ಲಿನ ಆವರಣಗೋಡೆಯ ಬಳಿ ಆರೇಳು ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಶನಿವಾರ ಇಲ್ಲಿ ಎರಡು ಕಾರುಗಳನ್ನು ಮಾತ್ರ ನಿಲುಗಡೆ ಮಾಡಲಾಗಿತ್ತು. ಆವರಣಗೋಡೆಯ ಇನ್ನೊಂದು ಭಾಗದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಯಾವುದೇ ಹಾನಿ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT