ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

250 ದಿನಸಿ ಕಿಟ್ ವಿತರಣೆ

Last Updated 3 ಜುಲೈ 2021, 2:13 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ನಿಂದ ತೊಂದರೆ ಎದುರಿಸುತ್ತಿರುವ ಕುಟುಂಬಗಳಿಗೆ ನೆರವಾಗಲು ವಿವಿಧ ಸಂಸ್ಥೆಗಳ ಮೂಲಕ ಬಡವರಿಗೆ ದಿನಸಿ ಪದಾರ್ಥಗಳು ಹಾಗೂ ತರಕಾರಿಗಳನ್ನು ನೀಡಲಾಗುತ್ತಿದೆ ಎಂದು ಹೆಲ್ಪೇಜ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಪ್ರಕಾಶನ್ ಹೇಳಿದರು.

ಇನ್ಫೆಂಟ್ ಮೆರೀಸ್ ಕಾನ್ವೆಂಟ್‌ನ ಸೇಂಟ್ ಜೋಸೆಫ್ ಪ್ರಶಾಂತ್ ನಿವಾಸ್ ಆವರಣದಲ್ಲಿ ಸುಮಾರು 250 ದಿನಸಿ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ಹೆಲ್ಪೇಜ್ ಇಂಡಿಯಾ ಸಂಸ್ಥೆ, ಸೇಂಟ್ ಜೋಸೆಫ್ ಪ್ರಶಾಂತ್ ನಿವಾಸ್ ಮತ್ತು ಸ್ಪಂದನಾ ಟ್ರಸ್ಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅಕ್ಕಿ, ತೊಗರಿ ಬೇಳೆ, ಗೋಧಿ ಹಿಟ್ಟು, ಸಕ್ಕರೆ, ಉಪ್ಪು, ಎಣ್ಣೆ, ಸೋಪ್, ಅರಿಸಿನ ಹುಡಿ, ಸಾಂಬಾರು ಹುಡಿ, ಫಿನಾಯಿಲ್ ಹಾಗೂ ಮಾಸ್ಕ್ ಸೇರಿ ನಾಲ್ಕೈದು ಜನರಿರುವ ಒಂದು ಕುಟುಂಬಕ್ಕೆ ಒಂದೂವರೆ ತಿಂಗಳು ಬಳಸಬಹುದಾದ ದಿನಸಿ ವಸ್ತುಗಳ ಕಿಟ್‍ಗಳನ್ನು ನೀಡಲಾಯಿತು.

ಇನ್ಫೆಂಟ್ ಮೆರೀಸ್ ಕಾನ್ವೆಂಟ್‌ನ ಮುಖ್ಯಸ್ಥೆ ಭಗಿನಿ ಸಿಲ್ವಿಯಾ ಫರ್ನಾಂಡಿಸ್, ಸ್ಪಂದನಾ ಟ್ರಸ್ಟ್ ಆಡಳಿತಾಧಿಕಾರಿ ಭಗಿನಿ ಹೆಲೆನ್ ಫರ್ನಾಂಡಿಸ್, ಮಹಾನಗರ ಪಾಲಿಕೆ ಸದಸ್ಯೆ ಜೆಸಿಂತಾ ಆಲ್ಫ್ರೆಡ್, ಸಿಸ್ಟರ್ ಡೊರತಿ ಸಲ್ಡಾನ ಇದ್ದರು. ಸಂಯೋಜಕ ವಿಕ್ಟರ್ ವಾಸ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT