ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಸ್ವಯಂ ರಕ್ತದಾನ ಮಾಡುವ ಮೂಲಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಉದ್ಘಾಟಿಸಿದರು.
ಎ.ಜೆ. ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಮಾತನಾಡಿದ ಅವರು, ‘ಮೋದಿಜೀ ಅವರು ಯುವ ನಾಯಕತ್ವದ ಮೇಲೆ ವಿಶ್ವಾಸ ಇಟ್ಟವರು. ಯುವಮೋರ್ಚಾ ಕಾರ್ಯಕರ್ತರ ಈ ಸಮಾಜಮುಖಿ ಕಾರ್ಯಕ್ರಮವು ನಿಜಕ್ಕೂ ಮೋದಿ ಅವರಿಗೆ ಗೌರವ ಸಲ್ಲಿಸುವ ಕಾರ್ಯವಾಗಿದೆ ಎಂದರು.
ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂದನ್ ಮಲ್ಯ ಮಾತನಾಡಿ, ‘ಮೋದಿ ಅವರ 74ನೇ ಜನ್ಮದಿನದ ಅಂಗವಾಗಿ 74 ಯುನಿಟ್ ರಕ್ತ ಸಂಗ್ರಹಿಸಿ ನೀಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಶಾಸಕ ವೇದವ್ಯಾಸ್ ಕಾಮತ್, ರಾಕೇಶ್ ರೈ, ಮುರಳಿ ಕೊಣಾಜೆ, ನಿತೇಶ್ ಕಲ್ಲೇಗ, ಶಿಶಿರ್ ಪೆರುವಾಡಿ, ಅಶ್ವಿತ್ ಕೊಟ್ಟಾರಿ, ಕುಮಾರ್ ಪ್ರಸಾದ್, ಉಮೇಶ್ ಕುಲಾಲ್, ನಿಶಾನ್ ಪೂಜಾರಿ, ವರುಣ್ ಅಂಬಟ, ಅವಿನಾಶ್ ಸುವರ್ಣ, ನವೀನ್ ರಾಜ್, ಸಾಕ್ಷಾತ್ ಶೆಟ್ಟಿ ಇದ್ದರು.