ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಸರಗೋಡು | ಅಪಘಾತ: ವ್ಯಕ್ತಿ ಒಬ್ಬರ ಬಲಿ

Published 2 ಜುಲೈ 2024, 14:09 IST
Last Updated 2 ಜುಲೈ 2024, 14:09 IST
ಅಕ್ಷರ ಗಾತ್ರ

ಕಾಸರಗೋಡು: ಮೊರತ್ತಣೆಯಲ್ಲಿ 2 ಕಾರುಗಳು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಕಲ್ಕಳ ಕುದ್ರೆಪ್ಪಾಡಿ ನಿವಾಸಿ ಅಬೂಬಕ್ಕರ್ ಉಸ್ತಾದ್ (65) ಮೃತಪಟ್ಟವರು.

ಗಂಭೀರ ಗಾಯಗೊಂಡಿದ್ದ ಅವರನ್ನು ಸಾರ್ವಜನಿಕರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟರು. ಅವರು ಕಲ್ಕಳ, ವರ್ಕಾಡಿ ಗಾಂದಿನಗರ, ಮದಕಳ ಸಹಿತ ವಿವಿಧ ಮಸೀದಿಗಳಲ್ಲಿ ಖತೀಬ್ ಆಗಿ ಸೇವೆಸಲ್ಲಿಸಿದ್ದರು. ಅವರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.

ವಸತಿಗೃಹದಲ್ಲಿ ಆತ್ಮಹತ್ಯೆ

ಕಾಸರಗೋಡು: ನಗರದ ವಸತಿಗೃಹವೊಂದರದಲ್ಲಿ ಚೆಂಗಳ ಕನಿಯಡ್ಕ ರಹಮತ್ ನಗರ ನಿವಾಸಿ ಹಸೈನಾರ್ (33) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಸೋಮವಾರ ಮಧ್ಯಾಹ್ನ ವಸತಿಗೃಹದಲ್ಲಿ ಕೊಠಡಿ ಪಡೆದಿದ್ದರು. ಮಂಗಳವಾರವಾದರೂ ಬಾಗಿಲು ತೆರೆಯದಿದ್ದಾಗ, ವಸತಿಗೃಹದ ಸಿಬ್ಬಂದಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಅಸೈನಾರ್ ಅವರು ಟಿಪ್ಪರ್ ಲಾರಿ ಚಾಲಕರಾಗಿದ್ದರು. ಮಾಹಿನ್ ಕುಟ್ಟಿ-ನಫೀಝಾ ದಂಪತಿ ಪುತ್ರ.

ಕುಸಿದು ಬಿದ್ದು ಸಾವು

ಕಾಸರಗೋಡು: ಮೊಮ್ಮಗಳ ವಿವಾಹ ನಡೆದ ಕೆಲವೇ ತಾಸುಗಳ ಬಳಿಕ ಅಜ್ಜ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕೋಳಿಚ್ಚಾಲ್ ನಿವಾಸಿ ಉಮ್ಮರ್ (69) ಮೃತಪಟ್ಟವರು. ಮೊಮ್ಮಗಳ ಮದುವೆಯಲ್ಲಿ ಭಾಗಿಯಾಗಿ ಮನೆಗೆ ಮರಳಿದ್ದ ಅವರು ಕುಸಿದು ಬಿದ್ದಿದ್ದರು. ಮನೆಮಂದಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು. ಅವರು ಕೋಳಿಕ್ಕಾಲ್‌ನ ಬಟ್ಟೆ ಮಳಿಗೆಯ ಮಾಲೀಕರಾಗಿದ್ದರು. ಹಿಂದೆ ಷಾರ್ಜಾದ ದೈರ್ ಎಂಬಲ್ಲಿ ಸೂಪರ್ ಮಾರ್ಕೆಟ್ ಹೊಂದಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.

ಮದ್ಯ ಸಹಿತ ಬಂಧನ

ಕಾಸರಗೋಡು: ಮೀಂಜ ತೊಟ್ಟತ್ತೋಡಿ ಎಂಬಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 16.660 ಲೀ. ಮದ್ಯ ಸಹಿತ ಚಿಗುರುಪಾದೆ ನಿವಾಸಿ ಪುರಂದರ ಶೆಟ್ಟಿ ಎಂಬಾತನನ್ನು ಅಬಕಾರಿ ದಳ ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT