ಕಾರ್ಕಳ (ಉಡುಪಿ): ತಾಲ್ಲೂಕಿನ ನಲ್ಲೂರು ಪಾಜೆಗುಡ್ಡೆ ಎಂಬಲ್ಲಿ ಸೋಮವಾರ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ, ತಂದೆ ಮತ್ತು ಮೂವರು ಮೂರು ಮಕ್ಕಳು ಮೃತಪಟ್ಟಿದ್ದಾರೆ.
ಸುರೇಶ್ ಆಚಾರ್ಯ (36), ಮಕ್ಕಳಾದ ಸುಮಿಕ್ಷಾ (7), ಸುಶ್ಮಿತಾ (5), ಸುಶಾಂತ್ (2) ಮೃತಪಟ್ಟವರು. ಸುರೇಶ್ ಅವರ ಪತ್ನಿ ಮೀನಾಕ್ಷಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಲಾರಿ ಚಾಲಕನ ಅತಿ ವೇಗ, ಅಜಾರೂಕತೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಾರಿ ಚಾಲಕ ಹೇಮಂತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.