ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಪಿ.ಯು. ವಿದ್ಯಾರ್ಥಿಗಳಿಗಾಗಿ ‘ಅಲೋಶಿಯಸ್ ಫೆಸ್ಟ್’ 31ರಂದು

Published 29 ಆಗಸ್ಟ್ 2024, 5:18 IST
Last Updated 29 ಆಗಸ್ಟ್ 2024, 5:18 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸೇಂಟ್‌ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ‘ಅಲೋಶಿಯಸ್ ಫೆಸ್ಟ್’ ಅನ್ನು ಇದೇ 31ರಂದು ಬೆಳಿಗ್ಗೆ 9ರಿಂದ ಆಯೋಜಿಸಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಪರಿಗಣಿತ  ವಿಶ್ವವಿದ್ಯಾಲಯದ ಕುಲಪತಿ ಫಾ.ಪ್ರವೀಣ್ ಮಾರ್ಟಿಸ್, ‘ಸಂಸ್ಥೆಯ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿ, ಸಿನಿಮಾ ನಟಿ ಮಾನ್ವಿತಾ ಕಾಮತ್ ಉದ್ಘಾಟಿಸುವರು. ಸೇಂಟ್‌ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಸೇರಾ ಫೆಲಿಕ್ಸ್  ಅವರು ರಚಿಸಿರುವ ‘ಎ ಕ್ರೈ, ಹರ್ಡ್ ಆಸ್ ಎ ಸಾಂಗ್’ ಕೃತಿ ಲೋಕಾರ್ಪಣೆಗೊಳ್ಳಲಿದೆ’ ಎಂದರು.

ಕಾರ್ಯಕ್ರಮ ಸಹ ಸಂಯೋಜಕಿ ಭವ್ಯಾ ಶೆಟ್ಟಿ, ‘ಹಬ್ಬಗಳ ಹಬ್ಬ’ ಹಾಗೂ ‘ಸಾಂಸ್ಕೃತಿಕ ಹಬ್ಬ’ ಎಂಬ ಎರಡು ವಿಭಾಗಗಳಲ್ಲಿ ಅಲೋಶಿಯಸ್ ಫೆಸ್ಟ್ ನಡೆಯಲಿದೆ. ‘ಹಬ್ಬಗಳ ಹಬ್ಬ’ದಲ್ಲಿ ಒಟ್ಟು 31 ಶೈಕ್ಷಣಿಕ ಸ್ಪರ್ಧೆಗಳಿ ಹಾಗೂ  ಕಲಾ, ವಾಣಿಜ್ಯ, ವಿಜ್ಞಾನ, ಬಿಸಿಎ, ಬಿಬಿಎ, ಬಿವೋಕ್ ಹಾಗೂ ವಿಜ್ಞಾನ ಪ್ರದರ್ಶನಗಳು ನಡೆಯಲಿವೆ. ಸಾಂಸ್ಕೃತಿಕ ಹಬ್ಬಗಳ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ, ಮುಖದಲ್ಲಿ ಚಿತ್ರಕಲೆ, ಮೆಹೆಂದಿ, ಕಸದಿಂದ ರಸ ಮತ್ತಿತರ ವೈವಿಧ್ಯಮಯ ಸ್ಪರ್ಧೆಗಳು ಇರಲಿವೆ’ ಎಂದರು.

‘ಸಮಾರೋಪದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಭಾಗವಹಿಸಲಿದ್ದಾರೆ. ಗೋವಾ, ಕೇರಳ ಹಾಗೂ ಕರಾವಳಿಯಿಂದ 30 ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕ  ರೇಜಿ ಜಾನ್, ಸಾಂಸ್ಕೃತಿಕ ಕಾರ್ಯದರ್ಶಿ ಅದ್ವಿಕಾ ಶೆಟ್ಟಿ, ವಿದ್ಯಾರ್ಥಿ ನಾಯಕ ವ್ಯಾನ್ಸ್ ಡಿಸೋಜ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT