ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶಿಕ್ಷು ಕಾಯ್ದೆ ಅನುಷ್ಠಾನ: ಜಿಲ್ಲಾಧಿಕಾರಿ ಸೂಚನೆ

Last Updated 12 ಜೂನ್ 2021, 5:19 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರೆಂಟಿಸ್‍ಶಿಪ್ ಆಕ್ಟ್ – 1961 ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದ್ದು,ಜಿಲ್ಲೆಯ ಎಲ್ಲಾ ಉದ್ದಿಮೆಗಳು ವೆಬ್‌ಸೈಟ್‌ https://apprenticeshipindia.org ಮೂಲಕ ದಿನಾಂಕ ಜೂನ್‌ 30 ರೊಳಗೆ ನೋಂದಾಯಿಸಿ, ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಪ್ರಮೋಷನ್ ಸ್ಕೀಮ್ (ಎನ್‌ಎಪಿಸ್‌) ಎಂಬ ಯೋಜನೆಯಲ್ಲಿ ದಾಖಲಿಸಿರುವ ಮಾಹಿತಿಯನ್ನು ಒಡಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದಡಿ ಶಿಶಿಕ್ಷು (ಅಪ್ರೆಂಟಿಸ್‍ಶಿಪ್) ಕಾಯ್ದೆ 1961 ಅನ್ನು ಅನುಷ್ಠಾನಗೊಳಿಸಲಾಗಿದ್ದು, ಉದ್ದಿಮೆಗಳಲ್ಲಿರುವ ಸೌಕರ್ಯಗಳನ್ನು ಉಪಯೋಗಿಸಿ ಯುವಕ-ಯುವತಿಯರಿಗೆ ಕೌಶಲ ತರಬೇತಿ ನೀಡುವುದು, ನುರಿತ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವುದು ಶಿಶಿಕ್ಷು ಕಾಯ್ದೆಯ ಉದ್ದೇಶ ಎಂದಿದ್ದಾರೆ. ‌‌

ಎನ್‌ಎಪಿಸ್‌ ನಿಯಮದಂತೆ ಉದ್ದಿಮೆದಾರರು ಅಪ್ರೆಂಟಿಸ್‍ಶಿಪ್ ತರಬೇತಿಯಲ್ಲಿ ತೊಡಗಿಸಿರುವ ಪ್ರತೀ ಅಭ್ಯರ್ಥಿಗೆ ಮಾಸಿಕ ಪಾವತಿಸುವ ಶಿಷ್ಯ ವೇತನದ (ಸ್ಟೈಪೆಂಡ್) ಶೇ 25 ಅಥವಾ ಮಾಸಿಕ ಗರಿಷ್ಠ ₹1500 ಅನ್ನು ಕೇಂದ್ರ ಸರ್ಕಾರ ಉದ್ದಿಮೆದಾರರಿಗೆ ಮರುಪಾವತಿಸಲಿದೆ. ಮೂಲ ತರಬೇತಿಯ ವ್ಯವಸ್ಥೆಯನ್ನು ಉದ್ದಿಮೆದಾರರೇ ನಡೆಸಿದಲ್ಲಿ ಮೂರು ತಿಂಗಳ ಮೂಲ ತರಬೇತಿಯ ವೆಚ್ಚವನ್ನು ಗರಿಷ್ಠ ₹7500 ಉದ್ದಿಮೆದಾರರಿಗೆ ಕೇಂದ್ರ ಸರ್ಕಾರ ಮರುಪಾವತಿಸಲಿದೆ. ತರಬೇತಿ ಪಡೆಯುತ್ತಿರುವ ಶಿಶಿಕ್ಷು (ಅಪ್ರೆಂಟಿಸ್) ಗಳಿಗೆ ಮಾಸಿಕ ಕನಿಷ್ಠ ₹6,000 (ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ), ಪ್ರತಿ ಐಟಿಐ ಉತ್ತೀರ್ಣ ಅಭ್ಯರ್ಥಿಗೆ ತಿಂಗಳಿಗೆ ₹7,000 ಶಿಷ್ಯವೇತನವನ್ನು ಪಾವತಿಸಬೇಕಾಗುತ್ತದೆ. ಅಪ್ರೆಂಟಿಸ್‍ಶಿಪ್ ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 14 ವರ್ಷ, ಅಪಾಯಕರ ಉದ್ದಿಮೆಯಾಗಿದ್ದರೆ ಕನಿಷ್ಠ ವಯೋಮಿತಿ 18 ವರ್ಷ ಆಗಿರುತ್ತದೆ.

ಶೇ 2.5 ರಿಂದ ಶೇ 15 ರಷ್ಟು ಶಿಶಿಕ್ಷು ತರಬೇತುದಾರರನ್ನು ಆಯ್ಕೆ ಮಾಡಬಹುದಾಗಿದ್ದು, , ಕನಿಷ್ಠ 4 ಮಂದಿ ಉದ್ಯೋಗಿಗಳನ್ನು ಹೊಂದಿರುವ ಉದ್ಯಮ ಸಂಸ್ಥೆಯವರು ಎನ್‌ಎಪಿಸ್‌ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರು. 30 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ನಿರ್ಮಾಣ ಸಂಸ್ಥೆ ಹಾಸ್ಪಿಟಲ್, ರೆಸ್ಟಾರೆಂಟ್‌ಗಳು, ಗೋಡಂಬಿ(ಕ್ಯಾಶ್ಯೂ), ಅಟೋಮೊಬೈಲ್ ಇತ್ಯಾದಿ ಎ ಸಣ್ಣ, ಮಧ್ಯಮ ಹಾಗೂ ಬೃಹತ್ ಉದ್ಯಮ ಸಂಸ್ಥೆಗಳು ಶಿಶಿಕ್ಷು ಕಾಯ್ದೆ 1961 ರಡಿ ನೋಂದಾಯಿಸಬೇಕು.

ಜಿಲ್ಲೆಯ ಎಲ್ಲಾ ಉದ್ದಿಮೆಗಳು ವೆಬ್‌ಸೈಟ್‌https://apprenticeshipindia.org ಮೂಲಕ ಜೂನ್‌ 30 ರೊಳಗೆ ನೋಂದಾಯಿಸಿ, ವಿವರವನ್ನು ವಿವರವನ್ನು ಗೂಗಲ್ ಫಾರ್ಮ್ ಲಿಂಕ್ https://forms.gle/ATh5MZ8ZRFDWjydJ9 ಅಥವಾ ಕ್ಯೂ ಆರ್ ಕೋಡ್ ಮೂಲಕ ದಾಖಲಿಸಬಹುದು. ಅಪ್ರೆಂಟಿಸ್‍ಶಿಪ್ ಪೋರ್ಟಲ್ ಬಗ್ಗೆ ಹೆಚ್ಚಿನ ಮಾಹಿತಿಗಳಿಗೆ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ (8553306561) ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT