ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕನಗರ: ಎರಡು ಹೆಬ್ಬಾವುಗಳ ರಕ್ಷಣೆ

Published 19 ಫೆಬ್ರುವರಿ 2024, 4:54 IST
Last Updated 19 ಫೆಬ್ರುವರಿ 2024, 4:54 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಅಶೋಕನಗರದಲ್ಲಿ ಕೋಡಿಕಲ್‌ಗೆ ಹೋಗುವ ರಸ್ತೆ ಬಳಿ ಪಾಳು ಬಾವಿಯಲ್ಲಿದ್ದ ಎರಡು ಹೆಬ್ಬಾವುಗಳನ್ನು ಉರಗಪ್ರೇಮಿಗಳ ತಂಡವು ರಕ್ಷಣೆ ಮಾಡಿದೆ.

‘ಅಶೋಕ ನಗರದ ಪಾಳು ಬಾವಿಯನ್ನು ಮುಚ್ಚಿ ಕಟ್ಟಡ ನಿರ್ಮಿಸುವ ಸಿದ್ಧತೆ ನಡೆದಿತ್ತು. ಕಾರ್ಮಿಕರು ಬಾವಿಯಲ್ಲಿ ಹೆಬ್ಬಾವು ಇರುವುದನ್ನು ನೋಡಿ ನಮ್ಮ ಗಮನಕ್ಕೆ ತಂದಿದ್ದರು. ನಾವು ಸ್ಥಳಕ್ಕೆ ಹೋಗಿ ನೋಡಿದಾಗ, ಬಾವಿಯೊಳಗೆ ಮೂರು ಹೆಬ್ಬಾವುಗಳಿರುವುದು ಕಂಡು ಬಂತು. ನಾನು, ಜೀತ್‌ ಮಿಲನ್‌ ಹಾಗೂ ಅಜಯ್‌ ಕುಲಾಲ್‌  ಸೇರಿ ಎರಡು ಹೆಬ್ಬಾವುಗಳನ್ನು ಶನಿವಾರ ಸಂರಕ್ಷಣೆ ಮಾಡಿದ್ದೇವೆ’ ಎಂದು ಭುವನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಹೆಬ್ಬಾವು 8.5 ಅಡಿ ಹಾಗೂ ಇನ್ನೊಂದು 7.5 ಅಡಿ ಉದ್ದವಿತ್ತು. ಎರಡೂ ಹಾವುಗಳನ್ನು ಕಾಡಿಗೆ ಬಿಟ್ಟಿದ್ದೇವೆ. ಬಾವಿಯಲ್ಲಿ ಇನ್ನೂ ಒಂದು ಹೆಬ್ಬಾವು ಉಳಿದುಕೊಂಡಿದೆ. ಕಾಣಸಿಕ್ಕರೆ ಅದನ್ನು ಸಂರಕ್ಷಣೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT