ಸೋಮವಾರ, ಮೇ 23, 2022
20 °C

ದಂಪತಿ ಮೇಲೆ ಹಲ್ಲೆ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅತ್ತಾವರದ ಬಳಿ ದಂಪತಿ ಹಾಗೂ ಮಗುವಿನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಿಶ್ವನಾಥ್ ಮತ್ತು ಮಧುಸೂದನ್ ಬಂಧಿತರು. ಅತ್ತಾವರದ ಅಂಬಿಕಾ ಮ್ಯಾನ್ಶನ್ ಅಪಾರ್ಟ್‌ಮೆಂಟ್‌ ಬಳಿ ಕಸ ಹಾಕುವ ವಿಷಯಕ್ಕೆ ಸಂಬಂಧಿಸಿ ಮೇ 4ರಂದು ಬಿಪುಲ್ ಕುಮಾರ್ ಎಂಬುವವರ ಮೇಲೆ, ಬಿಶ್ವನಾಥ್, ಮಧುಸೂದನ್, ಅಮೃತಾ, ರಾಜೇಶ್, ನೀರಜ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಬಿಶ್ವನಾಥ ಮತ್ತು ಅಮೃತಾ ದಂಪತಿ ಸೇರಿ, ಹೊರಗಿನಿಂದ ಜನರನ್ನು ಕರೆಸಿ ಬಡ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. 

ಬಿಪುಲ್‌ಕುಮಾರ್ ದಂಪತಿ ಮತ್ತು ಅವರ 8 ವರ್ಷದ ಮಗುವಿನ ಮೇಲೆ ಕೂಡ ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಇತರ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.