ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ: ರಸ್ತೆಯಲ್ಲೇ ಸಾಗುವ ಕಾಡುಕೋಣ ಹಿಂಡು

Published 19 ಸೆಪ್ಟೆಂಬರ್ 2023, 13:44 IST
Last Updated 19 ಸೆಪ್ಟೆಂಬರ್ 2023, 13:44 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಬಳ್ಪದ ಕೇನ್ಯ ಗ್ರಾಮದ ವಿಷ್ಣುನಗರದ ಬಳಿ ಕಾಡುಕೋಣಗಳ ಹಿಂಡು ಪ್ರತಿದಿನ ದಾರಿಹೋಕರಿಗೆ ಕಾಣಸಿಗುತ್ತಿದ್ದು, ಕೆಲವು ದಿನಗಳಿಂದ ಜನರಿಗೆ ಹಾಯಲು ಬರುತ್ತಿರುವುದಾಗಿ ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ಪಂಜ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ ಅವರು ದ್ವಿಚಕ್ರ ವಾಹನದಲ್ಲಿ ಈ ದಾರಿಯಲ್ಲಿ ಬರುತ್ತಿರುವಾಗ ಸುಮಾರು 10 ಕಾಡು ಕೋಣಗಳಿದ್ದ ಗುಂಪು ದಾಳಿಗೆ ಮುಂದಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಅವರು ಈ ಬಗ್ಗೆ ಪಂಜ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆ ಸಿಬ್ಬಂದಿಗಳು ಬೆಳಿಗ್ಗೆ ಮತ್ತು ಸಂಜೆ ವೇಳೆ ಈ ಸ್ಥಳದಲ್ಲಿ ಮೊಕ್ಕಾಂ ಹೂಡಿ ಮುಂಜಾಗ್ರತೆ ವಹಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಹಲವು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿ, ಕಾಡುಕೋಣಗಳ ಹಿಂಡನ್ನು ಈ ಭಾಗದಿಂದ ಓಡಿಸಲು ಇಲಾಖೆ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT