ಕೃಷ್ಣಮೃಗದ ಚರ್ಮ ಸಾಗಾಟ: ಇಬ್ಬರ ಬಂಧನ

ಗುರುವಾರ , ಜೂಲೈ 18, 2019
29 °C

ಕೃಷ್ಣಮೃಗದ ಚರ್ಮ ಸಾಗಾಟ: ಇಬ್ಬರ ಬಂಧನ

Published:
Updated:

ಮಂಗಳೂರು: ಕೃಷ್ಣಮೃಗದ ಚರ್ಮವನ್ನು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ರೂಗಿಯ ಮೇಶ್ ಮಲ್ಲಪ್ಪ ಯಾದವಾಡ್ ಮತ್ತು ರಾಜು ಬಿರಾದಾರ್ ಎಂಬವರನ್ನು ನಗರ ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. 

ತಣ್ಣೀರುಬಾವಿ ಬಳಿಯ ಕಸಬಾ ಬೇಂಗ್ರೆಯ ಕೂಳೂರಿನ ಕುದುರೆಮುಖ ಜಂಕ್ಷನ್ ಬಳಿ ಗೋಣಿ ಚೀಲ ಹಿಡಿದುಕೊಂಡಿದ್ದ ಆರೋಪಿಗಳು, ಪೊಲೀಸ್ ಜೀಪು ಕಂಡೊಡನೆ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಅವರನ್ನು ಹಿಡಿದು ಗೋಣಿಚೀಲ ಪರಿಶೀಲಿಸಿದಾಗ ಅಕ್ಕಿಯೊಳಗೆ ಕೃಷ್ಣಮೃಗದ ಚರ್ಮ ಇಟ್ಟಿರುವುದು ಪತ್ತೆಯಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !