ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡೂರು ಶಾಲೆಯಲ್ಲಿ ಪುಸ್ತಕ ವಿತರಣೆ

Published 1 ಸೆಪ್ಟೆಂಬರ್ 2024, 13:39 IST
Last Updated 1 ಸೆಪ್ಟೆಂಬರ್ 2024, 13:39 IST
ಅಕ್ಷರ ಗಾತ್ರ

ಬದಿಯಡ್ಕ: ಪ್ರಣವ್ ಫೌಂಡೇಷನ್‌ ಹಾಗೂ ಆರ್‌ವಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಉಚಿತ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಅಡೂರಿನ ಸರ್ಕಾರಿ ಶಾಲೆಯಲ್ಲಿ ನಡೆಯಿತು.

ಕೇರಳ ರಾಜ್ಯ ಸರ್ಕಾರಿ ಆರೋಗ್ಯ ಸೇವೆಯ ನಿವೃತ್ತ ಉಪನಿರ್ದೇಶಕ ಡಾ.ಕೆ.ರವಿಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.

ಹರೀಶ ಅಧ್ಯಕ್ಷತೆ ವಹಿಸಿದ್ದರು. ಪ್ರಣವ್ ಫೌಂಡೇಷನ್‌ನ ಟ್ರಸ್ಟಿ ಗುರುರಂಜನ ಪುಣಿಂಚತ್ತಾಯ ಮಾಹಿತಿಯನ್ನು ನೀಡಿದರು.

ಒಂದನೇ ತರಗತಿಯ ಸುಮಾರು 76 ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಕುಮಾರಿ, ವಾರ್ಡ್ ಸದಸ್ಯ ಇಕ್ಬಾಲ್, ಸಾಹಿತಿ ವಿಜಯರಾಜ್ ಪುಣಿಂಚತ್ತಾಯ, ಶಾರದಾ ಪಿ., ಶಾಫಿ, ಮುಖಂಡ ಸಿ.ಕೆ.ಕುಮಾರನ್ ಭಾಗವಹಿಸಿದ್ದರು.

ಸುಧಾಮ ಮಾಸ್ಟರ್ ಸ್ವಾಗತಿಸಿದರು, ಗಂಗಾಧರನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT