ಮಂಗಳೂರು: ಜಿಲ್ಲೆಯಲ್ಲಿ ಮರಳು ಅಲಭ್ಯತೆಯಿಂದ ನಿರ್ಮಾಣ ಚಟುವಟಿಕೆಗೆ ಸಮಸ್ಯೆಯಾಗಿದೆ ಎಂದು ಕೂಗೆದ್ದಿದೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಅಧಿಕೃತವಾಗಿ ಗುರುತಿಸಿದ ಬ್ಲಾಕ್ಗಳಿಂದ ತೆಗೆದು ದಾಸ್ತಾನು ಮಾಡಿರುವ 27 ಸಾವಿರಕ್ಕೂ ಹೆಚ್ಚು ಟನ್ ಮರಳು ಈಗಲೂ ಲಭ್ಯ!

ಜಿಲ್ಲೆಯಲ್ಲಿ ಪ್ರಸ್ತುತ 25 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೆಲ ವರ್ಷಗಳ ಹಿಂದೆಯೇ ಇ–ಟೆಂಡರ್ ಆಹ್ವಾನಿಸಿ ಅವುಗಳನ್ನು ಗುತ್ತಿಗೆಗೆ ನೀಡಿತ್ತು. ಗುತ್ತಿಗೆಗೆ ಪಡೆದವರ ಸಂಗ್ರಹಾಗಾರದಲ್ಲಿ 27,550 ಟನ್ ಮರಳು ಸಂಗ್ರಹವಿದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಸ್ಯಾಂಡ್ ಬಜಾರ್ ಆ್ಯಪ್ 2025ರ ಮಾರ್ಚ್ 14ರಿಂದ ಮತ್ತೆ ಬಳಕೆಗೆ ಲಭ್ಯ ಇದೆ. ಈ ಆ್ಯಪ್ ಮೂಲಕವೇ ಮರಳನ್ನು ಖರೀದಿಸಬಹುದು. ಇದುವರೆಗೆ ಈ ಆ್ಯಪ್ ಮೂಲಕ 10,911 ಟನ್ ಮರಳು ವಿತರಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮರಳು ಕೊರತೆ ಹೇಗೆ?

ಜಿಲ್ಲೆಯ ನದಿಗಳಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್ಜೆಡ್) ವ್ಯಾಪ್ತಿಯಲ್ಲಿ ಈ ಹಿಂದೆ ಮಳೆಗಾಲದಲ್ಲಿ ವ್ಯಾಪಕವಾಗಿ ಮರಳು ತೆಗೆಯಲಾಗುತ್ತಿತ್ತು. ನುಣುಪಾದ ಈ ಮರಳು ಕಟ್ಟಡ ಕಾಮಗಾರಿಗಳಿಗೆ ಅತ್ಯಂತ ಸೂಕ್ತವಾದುದು. ಮಳೆಗಾಲದಲ್ಲಿ ಸಿಆರ್ಜೆಡ್ ವ್ಯಾಪ್ತಿಯ ನದಿ ನೀರಿನಲ್ಲಿ ಉಪ್ಪಿನಂಶ ಇರುವುದಿಲ್ಲ. ಹಾಗಾಗಿ ಮಳೆಗಾಲದಲ್ಲಿ ತೆಗೆಯುವ ಮರಳಿಗೆ ಉತ್ತಮ ಬೇಡಿಕೆ ಇತ್ತು.

‘ಸಿಆರ್ಜೆಡ್ ಪ್ರದೇಶದಲ್ಲಿ ತೆಗೆಯುವ ಮರಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಕಿನಾರೆಗಳಲ್ಲಿ ಸವಕಳಿ ತಡೆಯಲು ಮರಳು ಮರುಪೂರಣಕ್ಕೆ ಬಳಸಬಹುದು ಎಂದು ಚೆನ್ನೈನ ಹಸಿರು ನ್ಯಾಯಮಂಡಳಿ ಎರಡು ವರ್ಷಗಳ ಹಿಂದೆ ತೀರ್ಪು ನೀಡಿದೆ. ಆ ಬಳಿಕ ಎಲ್ಲೂ ಸಿಆರ್ಜೆಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ನೀಡುತ್ತಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಸಿಆರ್ಜೆಡ್ ಪ್ರದೇಶದಲ್ಲಿ ಹಿಂದೆ ನದಿಗಳಲ್ಲಿ 9 ಕಡೆ ಮರಳು ದಿಬ್ಬಗಳನ್ನು ಗುರುತಿಸಲಾಗಿತ್ತು. ಅವುಗಳಲ್ಲಿ, 3,00,965 ಟನ್ ಮರಳು ಇರಬಹುದೆಂದು ಅಂದಾಜಿಸಲಾಗಿತ್ತು. ಬಳಿಕ 14 ಕಡೆ ಸ್ಥಳಗಳನ್ನು ಗುರುತಿಸಿದ್ದ ಜಿಲ್ಲಾಡಳಿತ 148 ಮಂದಿಗೆ ಮರಳು ತೆಗೆಯಲು ಅವಕಾಶ ನೀಡಿತ್ತು. ಹಸಿರು ನ್ಯಾಯಮಂಡಳಿ ಆದೇಶದ ಬಳಿಕ ಈ ದಿಬ್ಬಗಳಲ್ಲೂ ಮರಳು ತೆಗೆಯಲು ಅವಕಾಶವಿಲ್ಲದಂತಾಯಿತು. ಆದೂ ಕದ್ದುಮುಚ್ಚಿ ಮರಳು ತೆಗೆಯುವ ಪರಿಪಾಟ ಮುಂದುವರಿದಿತ್ತು.

ತಿಂಗಳಿನಿಂದ ಈಚೆಗೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರೂ ಮರಳು ತೆಗೆಯಲು ಹಿಂದೆ ಮುಂದೆ ನೋಡುವ ಸ್ಥಿತಿ ಎದುರಾಗಿದೆ. ಲಾರಿಯಲ್ಲಿ ಮರಳು ಸಾಗಿಸಿದರೆ ಅದನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ ಎಂಬ ಭಯದಿಂದ ಯಾರೂ ಮರಳು ಸಾಗಾಟಕ್ಕೆ ಲಾರಿಯನ್ನೂ ನೀಡುತ್ತಿಲ್ಲ. ದುಪ್ಪಟ್ಟು ದುಡ್ಡು ಕೊಡುತ್ತೇವೆಯೆಂದರೂ ಮರಳು ತಂದು ಹಾಕುವವರಿಲ್ಲ ಎಂದು ಬಿಲ್ಡರ್ ಒಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 25 ಮರಳು ಬ್ಲಾಕ್ಗಳನ್ನು ಜಿಲ್ಲಾಡಳಿತ ಗುರುತಿಸಿತ್ತು. ಅವುಗಳಲ್ಲಿ ತಲಾ ಐದು ವರ್ಷಗಳ ಅವಧಿಗೆ ಮರಳು ತೆಗೆಯುವ ಗುತ್ತಿಗೆಯನ್ನು ಇ–ಟೆಂಡರ್ ಮೂಲಕ ವಹಿಸಲಾಗಿತ್ತು. ಅವುಗಳಲ್ಲಿ 10 ಬ್ಲಾಕ್ಗಳ ಗುತ್ತಿಗೆ ಅವಧಿ ಮುಗಿದಿದೆ. 15 ಬ್ಲಾಕ್ಗಳ ಗುತ್ತಿಗೆ ಈಗಲೂ ಚಾಲ್ತಿಯಲ್ಲಿದೆ. ಈ 25 ಮರಳು ಬ್ಲಾಕ್ಗಳಲ್ಲಿ ವರ್ಷದಲ್ಲಿ ಅಂದಾಜು 5.55 ಲಕ್ಷ ಟನ್ ಮರಳು ಲಭ್ಯ ಇದೆ. ಸುಳ್ಯ, ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ತಾಲ್ಲೂಕುಗಳಲ್ಲಿ ಯಾವುದೇ ಮರಳು ಬ್ಲಾಕ್ಗಳಿಲ್ಲ.

18 ಹೊಸ ಬ್ಲಾಕ್ಗಳಿಗೆ ಶೀಘ್ರ ಟೆಂಡರ್

ಜಿಲ್ಲೆಯಲ್ಲಿ ಒಟ್ಟು 18 ಕಡೆ ಹೊಸತಾಗಿ ಮರಳು ಬ್ಲಾಕ್ಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಇವುಗಳಲ್ಲಿ 2.82 ಲಕ್ಷ ಟನ್ ಮರಳು ಲಭ್ಯಇದೆ ಎಂದು ಅಂದಾಜು ಮಾಡಲಾಗಿದೆ. ಈ ಹೊಸ ಬ್ಲಾಕ್ಗಳ ಮರಳು ಲಭ್ಯವಾದ ಬಳಿಕ ಸಿಆರ್ಜೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧದಿಂದ ಎದುರಾದ ಮರಳಿನ ಕೊರತೆ ನೀಗಬಹುದು ಎಂಬುದು ಅಧಿಕಾರಿಗಳ ನಿರೀಕ್ಷೆ. ಈ 18 ಹೊಸ ಮರಳು ಬ್ಲಾಕ್ಗಳಿಗೆ ಟೆಂಡರ್ ಕರೆದಾಗ ಯಾರೂ ಭಾಗವಹಿಸಿರಲಿಲ್ಲ. ಅಲ್ಪಾವಧಿ ಟೆಂಡರ್ ಕರೆದು ಗುತ್ತಿಗೆದಾರರನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಗಣಿ ಮತ್ತು ಭೂಇಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಂ– ಸ್ಯಾಂಡ್ಗೂ ಬೇಡಿಕೆ ಹೆಚ್ಚಳ ‘ಜಿಲ್ಲೆಯಲ್ಲಿ ಎಂ ಸ್ಯಾಂಡ್ ಉತ್ಪಾದಿಸುವ 18 ಘಟಕಗಳಿವೆ. ಈ ಘಟಕಗಳಲ್ಲಿ 2024–25ರಲ್ಲಿ 1.17 ಲಕ್ಷ ಟನ್ ಎಂ.ಸ್ಯಾಂಡ್ ಉತ್ಪಾದಿಸಲಾಗಿದೆ. 2025ರಲ್ಲಿ ಮೇ ಅಂತ್ಯದವರೆಗೆ 27034 ಟನ್ ಎಂ–ಸ್ಯಾಂಡ್ ಉತ್ಪಾದಿಸಲಾಗಿದೆ. ಹಿಂದೆ ಯಥೇಚ್ಚವಾಗಿ ಮರಳು ಕಡಿಮೆ ದರಕ್ಕೆ ಲಭಿಸುತ್ತಿದ್ದಾಗ ಎಂ–ಸ್ಯಾಂಡ್ ಬಳಕೆಗೆ ಯಾರೂ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಈಗ ಕಟ್ಟಡ ನಿರ್ಮಾಣಕ್ಕೆ ಎಂ–ಸ್ಯಾಂಡ್ ಕೂಡಾ ಬಳಸಲಾಗುತ್ತಿದೆ ಎಂದು ಬಿಲ್ಡರ್ ಒಬ್ಬರು ತಿಳಿಸಿದರು.

ಅಂಕಿ ಅಂಶ 3.44 ಲಕ್ಷ ಟನ್ ಜಿಲ್ಲೆಯಲ್ಲಿ ಗುತ್ತಿಗೆ ಅವಧಿ ಚಾಲ್ತಿಯಲ್ಲಿರುವ 15 ಮರಳು ಬ್ಲಾಕ್ಗಳಲ್ಲಿ ವಾರ್ಷಿಕವಾಗಿ ಲಭ್ಯವಿರುವ ಮರಳು 2.11 ಲಕ್ಷ ಟನ್ ಜಿಲ್ಲೆಯಲ್ಲಿ ಗುತ್ತಿಗೆ ಅವಧಿ ಮುಕ್ತಾಯವಾದ 10 ಮರಳು ಬ್ಲಾಕ್ಗಳಲ್ಲಿ ವಾರ್ಷಿಕವಾಗಿ ಲಭ್ಯವಿರುವ ಮರಳು ಗ್ರಾಫಿಕ್ಸ್ಗೆ ದ.ಕ: ಮರಳು ಬ್ಲಾಕ್ಗಳ ವಿವರ ತಾಲ್ಲುಕು:ಗುತ್ತಿಗೆ ಊರ್ಜಿತದಲ್ಲಿರುವ ಬ್ಲಾಕ್; ಗುತ್ತಿಗೆ ಮುಕ್ತಾಯವಾದ ಬ್ಲಾಕ್; ವಿಸ್ತೀರ್ಣ (ಎಕರೆ ಸೆಂಟ್ಸ್) ಬಂಟ್ವಾಳ;2;–;19.25 ಬೆಳ್ತಂಗಡಿ;3;4;37.17 ಮಂಗಳೂರು;4;–;12.49 ಪುತ್ತೂರು;2;–;13.09 ಕಡಬ;4;6;50.01

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.