ಮಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಬ್ ಇನ್‌ಸ್ಪೆಕ್ಟರ್ ಜ್ಯೋತಿ ಬಾಯಿ (33) ಅವರು ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಬುಧವಾರ ಮುಂಜಾನೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಜ್ಯೋತಿ ಅವರು 2010ನೇ ತಂಡದ ಅಧಿಕಾರಿ. ಅವರ ಪತಿ ಓಂಬೀರ್ ಸಿಂಗ್ ಪರ್ಮಾರ್ ಅವರು ಮಂಗಳೂರು ರಿಫೈನರೀಸ್ ಆ್ಯಂಡ್ ಪೆಟ್ರೊ ಕೆಮಿಕಲ್ಸ್ (ಎಂಆರ್‌ಪಿಎಲ್) ಸಂಸ್ಥೆಯಲ್ಲಿ ಸಹಾಯಕ ಕಮಾಂಡಂಟ್ ಆಗಿದ್ದಾರೆ. ಅವರಿಬ್ಬರೂ ರಾಜಸ್ತಾನದ ಭರತಪುರ ಜಿಲ್ಲೆಯವರು.

‘ಕೌಟುಂಬಿಕ ಕಾರಣದಿಂದಾಗಿ ಜ್ಯೋತಿ ಅವರು ಬುಧವಾರ ಬೆಳಿಗ್ಗೆ 6ರಿಂದ 6.15ರ ನಡುವೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.

‘ಆತ್ಮಹತ್ಯೆಗೆ ಯತ್ನಿಸುವ ಮುನ್ನ ಜ್ಯೋತಿ ಅವರು ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ, ‘ಕ್ಷಮಿಸು ಅಮ್ಮಾ. ನಾನು ಸ್ವಇಚ್ಛೆಯಿಂದಲೇ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದೇನೆ. ಯಾರೂ ನನಗೆ ಒತ್ತಡ ಹಾಕಿಲ್ಲ’ ಎಂದು ಹಿಂದಿಯಲ್ಲಿ ಬರೆದು ದಿನಾಂಕವನ್ನೂ ನಮೂದಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.