ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಕೋಸ್ಟಲ್ ಫಿಲ್ಮ್‌ ಅವಾರ್ಡ್ಸ್ 2024' 16ರಂದು

Published 13 ಜೂನ್ 2024, 3:21 IST
Last Updated 13 ಜೂನ್ 2024, 3:21 IST
ಅಕ್ಷರ ಗಾತ್ರ

ಮಂಗಳೂರು: ಸ್ಯಾಂಡಿಸ್‌ ಕಂಪನಿ ವತಿಯಿಂದ ನೀಡುವ ‘ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್‌ ಅವಾರ್ಡ್ಸ್ 2024’  ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ 16 ರಂದು ಸಂಜೆ 3ರಿಂದ ಮೂಲ್ಕಿಯ ಸುಂದರರಾಮ ಶೆಟ್ಟಿ ಸಮಾವೇಶ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ  ವ್ಯವಸ್ಥಾಪಕ ನಿರ್ದೇಶಕ ಸಂದೇಶ್‌ ರಾಜ್‌ ಬಂಗೇರ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2023ರಲ್ಲಿ ತೆರೆ ಕಂಡಿರುವ  11 ಸಿನಿಮಾಗಳು ಈ ಸಲದ ಸ್ಪರ್ಧೆಯಲ್ಲಿವೆ. ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ‘ವರ್ಸಟೈಲ್ ಆಕ್ಟರ್’ ಪ್ರಶಸ್ತಿಯೂ ಸೇರಿದಂತೆ ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಜೀವಮಾನ ಸಾಧನೆಗಾಗಿ ಪ್ರಶಸ್ತಿಗೆ ಸಿನಿಮಾ ನಿರ್ದೇಶಕ‌ ನಟ, ಸಾಹಸ ನಿರ್ದೇಶಕರಾಗಿ ದುಡಿದ ರಾಮ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದರು.

‘ಸತತ ಮೂರನೇ ವರ್ಷ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಉಡುಪಿ –ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಕನ್ನಡ ಸಿನಿಮಾ ನಟ ವಿಜಯ ರಾಘವೇಂದ್ರ, ಪೃಥ್ವಿ ಅಂಬ‌ರ್, ನಟಿ ಸೋನಲ್ ಮೊಂತೆರೊ, ಹಿನ್ನೆಲೆ ಗಾಯಕಿ ಅನುರಾಧಾ ಭಟ್, ನಟ ಸಿದ್ದು ಮೂಲಿಮನೆ, ತುಳು ಸಿನಿಮಾ ನಟ ರೂಪೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ತುಳು ಚಿತ್ರರಂಗದವರಿಂದ ನೃತ್ಯ, ಹಾಸ್ಯ ಕಾರ್ಯಕ್ರಮ ಹಾಗೂ ರಸಮಂಜರಿ ನಡೆಯಲಿವೆ. ಕಾರ್ಯಕ್ರಮಕ್ಕೆ ಆಸಕ್ತರಿಗೆ ಉಚಿತ ಪ್ರವೇಶವಿದೆ’ ಎಂದರು.

ತುಳು ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ‘ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ತುಳು ಸಿನಿಮಾ ರಂಗಕ್ಕೆ, ಅದರಲ್ಲೂ ತಾಂತ್ರಿಕ ಸಿಬ್ಬಂದಿಗೆ ಉತ್ತೇಜನ ನೀಡಲಿದೆ. ಪ್ರಶಸ್ತಿ ಸಿಗಲಿ, ಸಿಗದೇ ಇರಲಿ, ಇರಲಿ; ತುಳು ಸಿನಿಮಾ ರಂಗದ ಎಲ್ಲ ಕಲಾವಿದರು, ತಂತ್ರಜ್ಞರು ಇದರಲ್ಲಿ ಭಾಗವಹಿಸಬೇಕು’ ಎಂದು ಕೋರಿದರು. 

ಸ್ಯಾಂಡಿಸ್‌ ಕಂಪನಿಯ ಕಾರ್ತಿಕ ರೈ, ಪ್ರೇಮ್‌ ಶೆಟ್ಟಿ, ಯಶರಾಜ್ ಹಾಗೂ ಸಾತ್ವಿಕ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT