ಮಂಗಳೂರಿನ ಸೆಂಟ್ರೆಲ್ ರೈಲು ನಿಲ್ದಾಣದ ಪ್ರೀ ಪೇಯ್ಡ್ ರಿಕ್ಷಾ ಕೌಂಟರ್ : ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್.
ಪ್ರೀ ಪೇಯ್ಡ್ ಕೌಂಟರ್‌ಗಳ ಬಗ್ಗೆ ಕೆಲವು ದೂರುಗಳ ಬಂದ ಕಾರಣ ಅವುಗಳನ್ನು ಸಂಚಾರಿ ಪೊಲೀಸರ ಮೂಲಕ ನಿರ್ವಹಣೆ ಮಾಡುವಂತೆ ಹಿಂದೆಯೇ ಆರ್‌ಟಿಒ ಅವರಿಗೆ ಮನವಿ ಮಾಡಲಾಗಿದೆ.
ಅರುಣ್‌ಕುಮಾರ್ ಆಟೊ ಚಾಲಕ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
‘ರೈಲ್ವೆ ಇಲಾಖೆ ಉತ್ತರದ ನಿರೀಕ್ಷೆಯಲ್ಲಿ’
ಎರಡೂ ರೈಲ್ವೆ ನಿಲ್ದಾಣಗಳಲ್ಲಿ ಇರುವ ಪ್ರೀ ಪೇಯ್ಡ್ ಕೌಂಟರ್‌ಗಳು ರೈಲ್ವೆ ಇಲಾಖೆಯ ಜಾಗದಲ್ಲಿವೆ. ಸಂಚಾರಿ ಪೊಲೀಸರಿಂದ ಕೌಂಟರ್ ನಿರ್ವಹಣೆ ಟೋಕನ್ ದರ ಮತ್ತಿತರ ವಿಷಯಗಳ ಕುರಿತು ಈ ಹಿಂದೆಯೇ ಆರ್‌ಟಿಎ ಸಭೆ ನಡೆಸಿ ಚರ್ಚಿಸಲಾಗಿದೆ. ಸಂಚಾರ ಎಸಿಪಿಯವರು ಪಾಲಕ್ಕಾಡ್ ವಿಭಾಗದ ವಿವಿಧ ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಪ್ರೀ ಪೇಯ್ಡ್ ಕೌಂಟರ್‌ಗಳ ಮಾಹಿತಿ ಕಲೆ ಹಾಕಿದ್ದಾರೆ. ರೈಲ್ವೆ ಇಲಾಖೆಯಿಂದ ಉತ್ತರ ಬಂದ ಮೇಲೆ ಆರ್‌ಟಿಎ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಮಲ್ಲಾಡ್ ಪ್ರತಿಕ್ರಿಯಿಸಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪ್ರೀ ಪೇಯ್ಡ್ ಕೌಂಟರ್ ಪ್ರಾರಂಭಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.