ಗುರುವಾರ , ಮೇ 6, 2021
23 °C

ಸಂಸದ ಕಚೇರಿಯಲ್ಲಿ ಕೊರೊನಾ ಸಹಾಯವಾಣಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಂಸದರಾಗಿರುವ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಕಚೇರಿಯಲ್ಲಿ ‘ಕೊರೊನಾ ಸಹಾಯವಾಣಿ ಕೇಂದ್ರ’ ತೆರೆಯಲಾಗಿದೆ.

ನಳಿನ್‌ಕುಮಾರ್ ಅವರು ತಮ್ಮ ಕಚೇರಿಯನ್ನು ಸಹಾಯವಾಣಿ ಕೇಂದ್ರವನ್ನಾಗಿ ಘೋಷಿಸಿದ್ದಾರೆ. ಈ ಸಂಬಂಧ ಪ್ರಮುಖರ ಸಭೆ ಕರೆದ ಅವರು, ಕೇಂದ್ರ ನಿರ್ವಹಣೆಗೆ ಸಮಿತಿಯನ್ನು ರಚಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಜನರು ಈ ಸಮಿತಿ ಪ್ರಮುಖರನ್ನು ಸಂಪರ್ಕಿಸಬಹುದು. ಸಮಿತಿ ಮೇಲ್ವಿಚಾರಕರಾಗಿ ಶಾಸಕ ಡಿ. ವೇದವ್ಯಾಸ ಕಾಮತ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ ತಿಳಿಸಿದ್ದಾರೆ.

ಕೊರೊನಾ ಸಹಾಯವಾಣಿ ಕೇಂದ್ರದ ಸಂಪರ್ಕ ಸಂಖ್ಯೆ: 0824 2448888 / 0824 2950445, ಮೊಬೈಲ್–9483496726 / 8762632174, ನಿತಿನ್ ಕುಮಾರ್ (9448467540), ಸುಧೀರ್ ಶೆಟ್ಟಿ ಕಣ್ಣೂರು (9844022213), ಆಸ್ಪತ್ರೆಗಳ ಮಾಹಿತಿಗಾಗಿ –ಕದ್ರಿ ಮನೋಹರ್ ಶೆಟ್ಟಿ (7892871122), ಸುಜನ್ ದಾಸ್ ಕುಡುಪು (9902695471), ಡಾ.ಅಣ್ಣಯ್ಯ ಕುಲಾಲ್ (9448012028), ಡಾ.ಜಿ.ಕೆ.ಭಟ್ (9448475196), ಆಂಬುಲೆನ್ಸ್ ಮಾಹಿತಿಗಾಗಿ– ಭರತ್ (8197804176), ಶೈಲೇಶ್ (9916204219), ಲಸಿಕೆ ಮಾಹಿತಿಗಾಗಿ– ದಿವಾಕರ್ ಪಾಂಡೇಶ್ವರ (9845182462), ಜಗದೀಶ್ ಶೆಟ್ಟಿ (9844095369), ಸಂದೀಪ್ ಗರೋಡಿ (7353632469) ವೆಂಟಿಲೇಟರ್‌ ಮಾಹಿತಿಗಾಗಿ–ಸಂಜಯ್ ಪ್ರಭು (9845072564), ಸತೀಶ್ ಕುಂಪಲ (9341205203), ಜಿತೇಂದ್ರ ಕೊಟ್ಟಾರಿ (9620432499), ಔಷಧಗಳ ಮಾಹಿತಿಗಾಗಿ– ಭಾಸ್ಕರಚಂದ್ರ ಶೆಟ್ಟಿ (7795700999), ಜಮಾಲ್ (9880310618), ಆಯುಷ್ಮಾನ್ ಭಾರತ್ ಕಾರ್ಡ್ ಮಾಹಿತಿಗೆ – ಸಂಜಯ್ ಪ್ರಭು (9845072564), ರಾಧಾಕೃಷ್ಣ
(9845054799), ಅಂತ್ಯಸಂಸ್ಕಾರ ಸೇವೆಗೆ– ಗಣೇಶ್ ಕುಲಾಲ್ (9844423697), ರಘು ಸಾಲ್ಯಾನ್
(9845007074) ಅವರನ್ನು ಸಂಪರ್ಕಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು