ಶನಿವಾರ, ಮೇ 28, 2022
24 °C

ಕೋವಿಡ್‌–19| ‘ಮಿಸ್‌–ಸಿ’ ಕಾಣಿಸಿಕೊಂಡ ಬಾಲಕಿ 24 ದಿನಗಳ ನಂತರ ಸಂಪೂರ್ಣ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್‌–19 ಹಾಗೂ ಮಿಸ್‌–ಸಿ (ಮಲ್ಪಿ ಸಿಸ್ಟಂ ಇನ್‌ಫ್ಲಾಮೆಟರಿ ಸಿಂಡ್ರೋಮ್) ಕಾಣಿಸಿಕೊಂಡ 16 ವರ್ಷದ ಬಾಲಕಿಗೆ ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕಾಣಿಸಿಕೊಂಡ ಮಿಸ್- ಸಿ ಮೊದಲ ಪ್ರಕರಣವಿದು ಎನ್ನಲಾಗಿದೆ. ಬಾಲಕಿ ಉಸಿರಾಟದ ಸಮಸ್ಯೆಯಿಂದಾಗಿ ಜೂನ್ 16 ರಂದು ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದಳು. ಕೋವೀಡ್ ಚಿಕಿತ್ಸೆ ನೀಡಿದ ಅನಂತರ ನ್ಯುಮೋನಿಯ, ಶ್ವಾಸಕೋಶದ ಸಮಸ್ಯೆ, ಮಿದುಳಿನ ಸಮಸ್ಯೆ, ಹಿಮೋಗ್ಲೋಬಿನ್ ಸಮಸ್ಯೆ ಸೇರಿದಂತೆ ಕೆಲವೊಂದು ಸಮಸ್ಯೆ ಕಾಣಿಸಿಕೊಂಡಿತ್ತು. ತೀವ್ರನಿಗಾ ಘಟಕದ ವೈದ್ಯರು, ನಿರಂತರ ನಿಗಾ ವಹಿಸುವ ಮೂಲಕ 24 ದಿನಗಳ ಚಿಕಿತ್ಸೆಯ ನಂತರ ಆಕೆ ಗುಣಮುಖಳಾಗಿದ್ದಾಳೆ.

ತೀವ್ರ ನಿಗಾ ಘಟಕದ ತಂಡ ಹಾಗೂ ಆಸ್ಪತ್ರೆಯ ವೈದ್ಯರು 13 ದಿನಗಳ ಕಾಲ ಐಸಿಯುನಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದ್ದಾರೆ. ಈ ಪೈಕಿ ಎಂಟು ದಿನ ಬಾಲಕಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಕೋವಿಡ್–19 ಜೊತೆಗೆ ಹಲವು ಸಮಸ್ಯೆಗಳೂ ಕಾಣಿಸಿಕೊಂಡಿದ್ದವು. ಹೀಗಾಗಿ ಮಿಸ್‌–ಸಿ ಪ್ರಕರಣವಾಗಿ ಪರಿಗಣಿಸಿ ನಾವು ಚಿಕಿತ್ಸೆ ನೀಡಿದೆವು ಎಂದು ವೆನ್ಲಾಕ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಶರತ್‌ ಬಾಬು ತಿಳಿಸಿದ್ದಾರೆ.

ಮಕ್ಕಳಲ್ಲಿ ಕೋವಿಡ್‌–19 ದೃಢವಾದ ನಂತರ ನಾಲ್ಕು ವಾರಗಳ ಬಳಿಕ ಅವರಲ್ಲಿ ಮಿಸ್‌–ಸಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಾವು ಇದೇ ಮಾದರಿಯ ಚಿಕಿತ್ಸೆಯನ್ನು ನೀಡಲು ಆರಂಭಿಸಿದೆವು. ಬಾಲಕಿಯ ಚೇತರಿಕೆಯ ಪ್ರಮಾಣವೂ ಹೆಚ್ಚಾಗಿತ್ತು. 24 ದಿನಗಳ ಬಳಿಕ ಬಾಲಕಿ ಸಂಪೂರ್ಣ ಚೇತರಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು