ಮಂಗಳೂರು: ಬ್ಯಾಂಕಿಂಗ್ ವ್ಯವಸ್ಥೆಯ ನ್ಯೂನತೆ ಬಳಸಿ ಸೈಬರ್ ವಂಚಕರು ಹೇಗೆಲ್ಲ ಆರ್ಥಿಕ ಅಪರಾಧ ನಡೆಸುತ್ತಾರೆ, ಅದನ್ನು ತಡೆಯಲು ಬ್ಯಾಂಕ್ ಸಿಬ್ಬಂದಿ ಕೈಗೊಳ್ಳಬಹುದಾದ ಕ್ರಮಗಳೇನು? ಇಂತಹ ಆರ್ಥಿಕ ಅಪರಾಧ ತಡೆಯುವಲ್ಲಿ ಬ್ಯಾಂಕಿಂಗ್ ಹಾಗೂ ಪೊಲೀಸ್ ಇಲಾಖೆಯ ಹೊಣೆಗಳೇನು...

ಇಲ್ಲಿನ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರಿ ರಂಗದ ಬ್ಯಾಂಕ್ ಸಿಬ್ಬಂದಿಗಾಗಿ ಸೋಮವಾರ ಏರ್ಪಡಿಸಿದ್ದ ಸೈಬರ್ ಅಪರಾಧಗಳ ನಿಯಂತ್ರಣ ಕ್ರಮಗಳ ಕುರಿತ ಸಂವಾದ ಬೆಳಕು ಚೆಲ್ಲಿತು.

ತರಹೇವಾರಿ ಸೈಬರ್ ಅಪರಾಧಗಳ ಬಗ್ಗೆ ವಿವರಿಸಿದ ದ.ಕ. ಜಿಲ್ಲಾ ಅಪರಾಧ ತಡೆ ವಿಭಾಗದ ಡಿವೈಎಸ್ಪಿ ಮಂಜುನಾಥ್, ‘ಸೈಬರ್ ವಂಚನೆ ಬಗ್ಗೆ ನಮಗೆಲ್ಲ ಗೊತ್ತಿದೆ. ಯಾರೋ ಬುದ್ಧಿಗೇಡಿಗಳು ಈ ರೀತಿ ವಂಚನೆಗೆ ಒಳಗಾಗುತ್ತಾರೆ ಎಂದು ಉಡಾಫೆ ಮಾಡದಿರಿ. ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎಂಜಿನಿಯರ್ಗಳು ವೈದ್ಯರು, ಉಪನ್ಯಾಸಕರೂ ಡಿಜಿಟಲ್ ಅರೆಸ್ಟ್ನಂತಹ ವಂಚನೆಗೆ ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಎಷ್ಟೇ ಬುದ್ದಿವಂತ ವ್ಯಕ್ತಿಯೂ ಒತ್ತಡಕ್ಕೆ ಒಳಗಾಗಲೇ ಬೇಕಾದ ಸ್ಥಿತಿಯನ್ನು ವಂಚಕರು ನಿರ್ಮಿಸುತ್ತಾರೆ. ಅವರು ಭಾವನಾತ್ಮಕವಾಗಿ ಒಡ್ಡುವ ಒತ್ತಡದ ತೀವ್ರತೆ ಆ ಮಟ್ಟದಲ್ಲಿರುತ್ತದೆ’ ಎಂದರು.

‘ಡಿಜಿಟಲ್ ಅರೆಸ್ಟ್ಗೆ ಒಳಗಾಗಿ ಖಾತೆಯಿಂದ ಭಾರಿ ಮೊತ್ತದ ಹಣವನ್ನು ಹಿಂಪಡೆಯಲು ಬರುವ ವ್ಯಕ್ತಿಯ ಮುಖ ಚಹರೆಯಲ್ಲೇ ಆತ ಒತ್ತಡ ಎದುರಿಸುವುದು ಎದ್ದುಕಾಣಿಸುತ್ತದೆ. ಬ್ಯಾಂಕಿನ ಸಿಬ್ಬಂದಿ ಸ್ವಲ್ಪವೇ ವಿವೇಚನೆ ಬಳಸಿದರೂ ಅದನ್ನು ತಡೆಯಬಹುದು’ ಎಂದರು

‘ಸೈಬರ್ ವಂಚಕರ ಕೈಗೆ ಜನಸಾಮಾನ್ಯರ ಬ್ಯಾಂಕ್ ಖಾತೆಗಳ ವಿವರ ಸೇರುವಲ್ಲಿ ಬ್ಯಾಂಕಿಂಗ್ ಸಿಬ್ಬಂದಿಯ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಕಾದಿದೆ’ ಎಂದರು.

‘ಸೈಬರ್ ಸಮರ ಗೆಲ್ಲಬೇಕಾದರೆ ಪೊಲೀಸರು ಹಾಗೂ ಬ್ಯಾಂಕಿಂಗ್ ಸಿಬ್ಬಂದಿ ಯೋಧರಾಗಬೇಕಿದೆ. ಇದರ ನಿಯಂತ್ರಣಕ್ಕಾಗಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾಗಿದೆ. ವಂಚನೆ ಗಮನಕ್ಕೆ ಬಂದ ತಕ್ಷಣವೇ ಸಹಾಯವಾಣಿ 1930ಕ್ಕೆ ಅಥವಾ 112ಕ್ಕೆ ಕರೆ ಮಾಡಿ’ ಎಂದರು.

ದ.ಕ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಎಸ್., ‘ಅಪರಾಧ ತಡೆಯಲು ಕೈಗೊಳ್ಳಬೇಕಾದ ಮಾರ್ಗಸೂಚಿ ಪಾಲಿಸದ ಬ್ಯಾಂಕ್, ಮಳಿಗೆಗಳ ವಿರುದ್ಧ 2017ರ ಕರ್ನಾಟಕ ಸಾರ್ವಜನಿಕ ಸುರಕ್ಷತೆ ಜಾರಿ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು. ಅದಕ್ಕೆ ಅವಕಾಶ ಕಲ್ಪಿಸದೇ ಅಪರಾಧ ತಡೆಯಲು ಪೊಲೀಸರ ಜೊತೆ ಕೈ ಜೋಡಿಸಿ’ ಎಂದರು.

ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಪಿ ರವಿಶಂಕರ್, ಡಿವೈಎಸ್ಪಿಗಳಾದ ವಿಜಯ ಪ್ರಸಾದ್, ರೋಹಿಣಿ ಸಿ.ಕೆ., ಅರುಣ್ ನಾಗೇಂದ್ರ, ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಮೋನಪ್ಪ ಶೆಟ್ಟಿ ಎಕ್ಕಾರು, ಸಿಇಒ ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಎಚ್ .ಎನ್., ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ನ ಟ್ರಸ್ಟಿ ಮೇಘರಾಜ್ ಜೈನ್ ಭಾಗವಹಿಸಿದ್ದರು.

ಬ್ಯಾಂಕ್ಗಳಲ್ಲಿ ಹೈ–ರೆಸೊಲ್ಯೂಷನ್ ಸಿಸಿಟಿವಿ ಕ್ಯಾಮೆರಾ ಕಡ್ಡಾಯ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಬ್ಯಾಂಕ್ ಶಾಖೆಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಬೇಕು

‘ಬೇಲಿಯೇ ಎದ್ದು ಹೊಲ ಮೇಯದಿರಲಿ’ ‘ಬ್ಯಾಂಕ್ ಅಧಿಕಾರಿಗಳು ಸಮಯ ಪ್ರಜ್ಞೆಯಿಂದ ಅನೇಕ ಆರ್ಥಿಕ ಅಪರಾಧಗಳನ್ನು ತಡೆದ ಉದಾಹರಣೆ ಜಿಲ್ಲೆಯಲ್ಲಿದೆ. ಕೆಲವು ಬ್ಯಾಂಕ್ಗಳ ಅಧಿಕಾರಿಗಳೇ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿ ಜೈಲು ಸೇರಿರುವುದು ಕಳವಳದ ಸಂಗತಿ. ಬೇಲಿಯೇ ಎದ್ದು ಹೊಲ ಮೇಯುವುದಕ್ಕೆ ಅವಕಾಶ ಕಲ್ಪಿಸಬಾರದು’ ಎಂದು ಅಪರಾಧ ತಡೆ ವಿಭಾಗದ ಡಿಸಿಪಿ ರವಿಶಂಕರ್ ತಿಳಿಸಿದರು.

‘ಸೈಬರ್ ಗುಲಾಮಗಿರಿ– ಎಚ್ಚರವಾಗಿರಿ’ ‘ಉದ್ಯೋಗ ಕೊಡಿಸುವ ಆಮಿಷ ವೊಡ್ಡಿ ಇಲ್ಲಿಂದ ಯುವಜನರನ್ನು ಥಾಯ್ಲೆಂಡ್ ವಿಯೆಟ್ನಂ ಕಾಂಬೊಡಿಯಾ ಮ್ಯಾನ್ಮಾರ್ನಂತಹ ದೇಶಗಳಲ್ಲಿ ಸೈಬರ್ ಗುಲಾಮಗಿರಿಗೆ ತಳ್ಳಲಾಗುತ್ತಿದೆ. ಪಾಸ್ಪೋರ್ಟ್ ಕಿತ್ತುಕೊಂಡಿರುವುದರಿಂದ ಅವರು ತವರಿಗೆ ಮರಳಲು ಸಾಧ್ಯವಾಗುತ್ತಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ 1ಲಕ್ಷಕ್ಕೂ ಅಧಿಕ ಭಾರತೀಯರು ವಿದೇಶಗಳಲ್ಲಿ ಈ ಜಾಲದಲ್ಲಿ ಸಿಲುಕಿರುವ ಸಾಧ್ಯತೆ ಇದೆ’ ಎಂದು ಡಿಸಿಪಿ ರವಿಶಂಕರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.