ಬಂಟ್ವಾಳ: ಇಲ್ಲಿನ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಚಿಣ್ಣರೋತ್ಸವ ಕಾರ್ಯಕ್ರಮ ಮತ್ತು ಅಕ್ಷರದಾಸೋಹ ಕೊಠಡಿ ಲೋಕಾರ್ಪಣೆ ನಡೆಯಿತು.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅಕ್ಷರದಾಸೋಹ ಕೊಠಡಿ ಉದ್ಘಾಟಿಸಿದರು. ಶ್ರೀ ದುರ್ಗಾ ಚಾರಿಟಬಲ್ ಟ್ರಸ್ಟ್ ಮತ್ತು ಸರ್ಕಾರಿ ಶಾಲೆ ಉಳಿಸಿ-ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ 1200 ವಿದ್ಯಾರ್ಥಿಗಳು ಚಿಣ್ಣರೋತ್ಸವದಲ್ಲಿ ಪಾಲ್ಗೊಂಡು ದೀಪ ನೃತ್ಯ ಸಹಿತ ದೇಶಭಕ್ತಿ ಮತ್ತಿತರ ಸಾಹಸಮಯ ನೃತ್ಯ ಪ್ರದರ್ಶಿಸಿದರು. ರಾಜ್ಯಮಟ್ಟದ ಕಬಡ್ಡಿ ಆಟಗಾರ ಧನುಷ್ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ 603 ಅಂಕ ಗಳಿಸಿದ ವಿದ್ಯಾರ್ಥಿ ಅಖಿಲೇಶ್ ಅವರನ್ನು ಅಭಿನಂದಿಸಲಾಯಿತು.

ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಪಂಜಿಕಲ್ಲು ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಪೂವಪ್ಪ ಮೆಂಡನ್, ಚಿತ್ರಾಕ್ಷಿ, ರೂಪಶ್ರೀ ಲೋಕನಾಥ್, ಪ್ರಮುಖರಾದ ವಿನೋದ್ ಕೊಡ್ಮಾಣ್, ಸುದರ್ಶನ್ ಬಜ, ಶೇಖರ್ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಎಸ್, ಬಾಲಕೃಷ್ಣ ಗೌಡ, ಮುಖ್ಯಶಿಕ್ಷಕ ರಮಾನಂದ ನೂಜಿಪ್ಪಾಡಿ, ಮೌರಿಸ್ ಡಿಸೋಜ, ವಿಜಯ್ ಬೆಂಜನಪದವು, ಶ್ರೀನಿವಾಸ ಪೂಜಾರಿ ನೂಜಂತ್ತೋಡಿ, ಮನ್ಮಥರಾಜ್ ಕಾಜವ, ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಂಚನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.