ಮಂಗಳೂರು: ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನೂ ಬದಲಾಯಿಸಬೇಕು ಎಂಬ ಕೂಗೆದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು’ ಜಿಲ್ಲೆ ಎಂದು ಬದಲಾಯಿಸಬೇಕು ಎಂದು ‘ಮಂಗಳೂರು ಜಿಲ್ಲೆ ತುಳು ಪರ ಹೋರಾಟ ಸಮಿತಿ’ ಒತ್ತಾಯಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗಳು ನಿಯೋಗವು ಮನವಿ ಸಲ್ಲಿಸಿದೆ. ಒಂದು ತಾಲ್ಲೂಕಿನ ಹೆಸರನ್ನು ಇಡೀ ಜಿಲ್ಲೆಗೆ ಅನ್ವಯಿಸಿದರೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಮೊದಲಾದ ಪ್ರದೇಶಗಳ ಐತಿ ಹಾಸಿಕ ಅಸ್ಮಿತೆಯನ್ನು ಕಡೆಗಣಿಸಿದಂತಾಗುತ್ತದೆ ಎಂದು ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ಜಿಲ್ಲೆಯ ಹೆಸರು ಬದಲಾವಣೆಯಿಂದ ಏನೂ ಸಾಧಿಸಿದಂತಾಗದು, ಅದರ ಬದಲು ಕೋಮುವಾದ, ನಿರುದ್ಯೋಗ, ಉದ್ಯೊಗಕ್ಕಾಗಿ ವಲಸೆಯಂತಹ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂಬ ಪ್ರತಿ ವಾದೂ ಹುಟ್ಟಿಕೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಈಗ ಇದೇ ಚರ್ಚೆ.

ಕೆನರಾ ಶಬ್ದ ಪೂರ್ತಿ ವಸಾಹತುಶಾಹಿ ಬಳಕೆ. ಪೋರ್ಚುಗಲ್ ಭಾಷೆಯಲ್ಲಿ 'ಕನ್ನಡ' ಉಚ್ಚಾರಣೆ ಇಲ್ಲದ ಕಾರಣ ಅಥವಾ ಈ ಭಾಗದ ಜನರ ಸಾಮಾನ್ಯ ಭಾಷೆಯನ್ನು ಪರಿಗಣಿಸಿ 'ಕನ್ನಡ' ಕೆನರಾ ಆಯಿತು ಎಂಬ ವಾದ ಇದೆ. ಕೆನರಾ ಶಬ್ದದಿಂದಲೆ 'ದಕ್ಷಿಣ ಕನ್ನಡ' ಮತ್ತು' ಉತ್ತರ ಕನ್ನಡ' ಹುಟ್ಟಿಕೊಂಡಿದೆ ಎಂದು ಅಭಿಪ್ರಾಯ ಪಡುತ್ತಾರೆ ಇತಿಹಾಸ ತಜ್ಞ ಪ್ರೊ. ಸುರೇಶ್ ರೈ.

‘ಆಳುಪರ ಶಾಸನಗಳಲ್ಲಿ ಮಂಗಳಪುರ ಎಂದು ಇದೆ. ವಿಜಯನಗರ ಶಾಸನದಲ್ಲಿ ಮಂಗಳೂರು ಹಾಗೂ ಬಾರ್ಕೂರು ರಾಜ್ಯಗಳೆಂಬ ಹೆಸರು ಇದ್ದ ಉಲ್ಲೇಖಗಳಿವೆ. ಚಾರಿತ್ರಿಕವಾಗಿ ನೋಡುವುದಾದರೆ ಕೆನರಾ ಎಂಬ ಹೆಸರಿಗಿಂತ ಮಂಗಳೂರು ಹಳೆಯದು’ ಎನ್ನುತ್ತಾರೆ ಅವರು.

‘ವಿಜಯ ನಗರದ ಆಳ್ವಿಕೆ ಕಾಲದಲ್ಲೂ ಕಾರ್ಕಳ, ಮೂಡುಬಿದಿರೆ, ವೇಣೂರು, ಪುತ್ತಿಗೆಯ ಜೈನ ಅರಸರು ಸ್ವತಂತ್ರವಾಗಿಯೇ ಇದ್ದರು. ಅವರು ಮಂಗಳೂರು ರಾಜ್ಯದ ಭಾಗ ಆಗಿರಲಿಲ್ಲ ಎಂಬುದೂ ಸತ್ಯ. ಅವರ ಹಾಗೂ ವಿಜಯನಗರ ಜೊತೆ ಕೊಡುಕೊಳ್ಳುವ ಅನ್ಯೋನ್ಯ ಸಂಬಂಧವಿತ್ತು. ಅವರಿಗೆ ಮಾನ್ಯತೆಯನ್ನು ಕಲ್ಪಿಸಿದ್ದು ವಿಜಯನಗರವೇ. ಆದರೆ ಅವರಿಗೆ ಆಂತರಿಕ ಆಳ್ವಿಕೆ ನಡೆಸುವ ಸ್ವಾತಂತ್ರ್ಯ ಇತ್ತು. ಈ ಸ್ಥಳೀಯ ಅರಸರು ವಿಜಯನಗರದ ಸಾರ್ವಭೌಮತೆಯನ್ನು ಗೌರವಿಸಿದ್ದರು. ಅಂದರೆ ಈ ಭಾಗದಲ್ಲಿ ವಿಜಯನಗರದ ಆಡಳಿತ ವಿಕೇಂದ್ರಿಕರಣ ಇತ್ತೆ ಹೊರತು ಅಧಿಕಾರದ ವಿಕೇಂದ್ರೀಕರಣ ವಲ್ಲ.ಅಂದರೆ ಸ್ಥಳೀಯ ಅರಸರು ವಿಜಯನಗರದ ಸಾರ್ವಭೌಮತೆಯನ್ನು ಮೀರುವಂತಿರಲಿಲ್ಲ. ಅವರವರೊಳಗೆ ಕಲಹ ಆದಾಗ ವಿಜಯನಗರ ಅರಸರೇ ಬಂದು ಬಗೆಹರಿಸಿದ ಉಲ್ಲೇಖಗಳಿವೆ. ಮಧ್ಯಕಾಲೀನ ತುಳುನಾಡಿನ ಸಂರಚನೆಯನ್ನು ಸರಳ ರೇಖಾತ್ಮಕವಾಗಿ ನೋಡಲು ಆಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಆಳುಪರ ಶಾಸನಗಳಲ್ಲದೇ ಇತರ ಕೆಲವು ಚಾರಿತ್ರಿಕ ದಾಖಲೆಗಳಲ್ಲಿ ಮಂಗಳೂರಿನ ಉಲ್ಲೇಖಗಳಿವೆ. ಪಾಂಡ್ಯರ ರಾಜ ಚೆಟ್ಟಿಯಾನ್ ಕಾಲದಲ್ಲಿ ಮಂಗಳಾಪುರಂ (ಕ್ರಿ.ಶ 715 ), ಗ್ರೀಕ್ ಪ್ರವಾಸಿಗ ಕೋಸ್ಮಾಸ್ ಇಂಡಿಕೋಪ್ಲೀಸ್ಟಸ್ ‘ಮ್ಯಾಂಗರೂತ್’ ಎಂದು ಉಲ್ಲೇಖಿಸಿದ್ದ. ಪ್ಲಿನಿ ಮತ್ತು ಟಾಲೆಮಿಯಂತಹ ರೋಮನ್ ಬರಹಗಾರರು ನಿಟ್ರಿಯಸ್/ನಿಟ್ರೆ ಹಾಗೂ ಮಗನೂರ್ ಎಂಬ ಪದ ಬಳಸಿದ ಉಲ್ಲೇಖಗಳಿವೆ ಎಂದು ಅವರು ತಿಳಿಸಿದರು.

ಬ್ರಿಟಿಷರ ಆಳ್ವಿಕೆ ಈ ಪ್ರದೇಶದಲ್ಲಿ ನೇರವಾಗಿ ಆರಂಭವಾಗಿದ್ದು 1799ರಲ್ಲಿ . ಈ ಸಂದರರ್ಭದಲ್ಲಿ ಸುಳ್ಯ, ಸಂಪಾಜೆ ಪ್ರದೇಶಗಳು ಕೊಡಗಿನ ರಾಜನ ಆಳ್ವಿಕೆಗೆ ಒಳಪಟ್ಟವು. 1830 ರ ದಶಕದಲ್ಲಿ ಕೊಡಗನ್ನು ಬ್ರಿಟಿಷ್ ಆಕ್ರಮಿಸಿ ದಾಗ ರಾಜಪ್ರಭುತ್ವ ಹೋಗಿ ವಸಾಹತುಶಾಹಿ ಆಡಳಿತ ಬಂದಾಗ ಈ ಪ್ರದೇಶದ ಜನರು ಕೊಡಗಿನ ಜೊತೆಗಿನ ಭಾವನಾತ್ಮಕ ಸಂಬಂಧ ತಪ್ಪಿತು. ಬ್ರಿಟಿಷ್ ರು ಈ ಪ್ರದೇಶಗಳನ್ನು ಮಂಗಳೂರಿನ ವ್ಯಾಪ್ತಿಗೆ ಸೇರಿಸಿದರು. ಕೊಡಗಿನ ಜತೆ ಭಾವನಾತ್ಮಕ, ಅರ್ಥಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಆ ಪ್ರದೇಶಗಳ ಜನರು ಮಂಗಳೂರಿನ ಜೊತೆ ಗುರುತಿಸಿಕೊಳ್ಳಲು ಇಷ್ಟಪಡಲಿಲ್ಲ. ಈ ಕಾರಣಕ್ಕೆ ಹಾಗೂ ಭೂಕಂದಾಯದ ವಿಚಾರಕ್ಕೆ ಕೂಟ್ ದಂಗೆಗಳು, (1830-31) ಅಮರ ಸುಳ್ಯ ದಂಗೆ (1836-37) ನಡೆದ ಉದಾಹರಣೆ ಇದೆ’ ಎಂದರು.

‘ಜನ ಸಾಮಾನ್ಯರಿಗೆ ತೊಂದರೆ’

ಹೊಸ ಜಿಲ್ಲೆಯನ್ನು ರಚಿಸುವಾಗ ಹೆಸರಿಡುವುದು ಬೇರೆ ಹಾಗೂ ಜಿಲ್ಲೆಯ ಹೆಸರನ್ನು ಬದಲಾಯಿಸುವುದು ಬೇರೆ. ಜಿಲ್ಲೆಯ ಹೆಸರು ಬದಲಾಯಿಸಿದರೆ ಪಾಸ್ಪೋರ್ಟ್ ಪ್ಯಾನ್ ಕಾರ್ಡ್ ರೇಷನ್ ಕಾರ್ಡ್ ಮತದಾರರ ಗುರುತಿನಚೀಟಿ ಶೈಕ್ಷಣಿಕ ದಾಖಲೆ ಕಂದಾಯ ದಾಖಲೆಗಳೆಲ್ಲದರಲ್ಲೂ ಜಿಲ್ಲೆಯ ಹೆಸರು ಬದಲಾಗಬೇಕಾಗುತ್ತದೆ. ಇದಕ್ಕೆಲ್ಲ ಕಚೇರಿಗೆ ಜನರೇ ಅಲೆಯಬೇಕು. ಇದಕ್ಕೆ ತಗಲುವ ಶುಲ್ಕವನ್ನು ಜನರೇ ಭರಿಸಬೇಕು. ಡಿಜಿಟಲ್ ಯುಗದಲ್ಲಿ ಹೆಸರು ಬರೆಯುವಾಗ ಒಂದು ಅಕ್ಷರ ತಪ್ಪಾದರೂ ಅದನ್ನು ಸರಿಪಡಿಸಲು ಹರಸಾಹಸಪಡಬೇಕಾದ ಸ್ಥಿತಿ ಇದೆ. ಹಾಗಾಗಿ ಜಿಲ್ಲೆಯ ಹೆಸರು ಬದಲಾಯಿಸುವ ಬದಲು ಇಲ್ಲಿನ ಸೌಹರ್ದಯುತ ವಾತಾವರಣ ರೂಪಿಸುವುದಕ್ಕೆ ಶ್ರಮಿಸಬೇಕಾದುದು ಈಗಿನ ತುರ್ತು ದಿನೇಶ್ ಹೆಗ್ಡೆ ಉಳೇಪಾಡಿ ವಕೀಲರು

‘ದಕ್ಷಿಣ ಕನ್ನಡಕ್ಕಿಂತ ಮಂಗಳೂರು ಹೆಸರೇ ಸೂಕ್ತ’

ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡುವುದು ಇತಿಹಾಸದ ದೃಷ್ಟಿಯಿಂದ ಒಳ್ಳೆಯದು.‘ಮಂಗಳೂರು’ ಹೆಸರಿಗೆ ಚಾರಿತ್ರಿಕ ಹಿನ್ನೆಲೆ ಇದೆ. ಇಡೀ ಜಿಲ್ಲೆಯನ್ನು ಪ್ರತಿನಿಧಿಸುವ ಶಕ್ತಿ ಇದೆ. ಅದು ಈ ಪ್ರದೇಶವನ್ನು ಚೆನ್ನಾಗಿ ಪ್ರತಿನಿಧಿಸುತ್ತದೆ. ಹಾಗಾಗಿ ಹೆಸರು ಬದಲಾವಣೆಗಾಗಿ ನಡೆಯುವ ಹೋರಾಟಕ್ಕೆ ನಡೆಯುತ್ತಿರುವ ಸಿದ್ಧತೆಯನ್ನು ತಪ್ಪು ಎನ್ನಲಾಗದು. ‘ತುಳು ಭಾಷೆ ನಮ್ಮ ಗುರುತು. ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಅತಿ ಪ್ರಾಚೀನ ಭಾಷೆ ಎನ್ನುತ್ತಾರೆ ಭಾಷಾ ಶಾಸ್ತ್ರಜ್ಞರು. ಈ ಭಾಷೆ ಕ್ಷೀಣಿಸುತ್ತಿದ್ದು ಮೂಲ ಸಾರವನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಿಸುತ್ತಿದೆ. ಜಿಲ್ಲೆಯ ಹೆಸರಿಗಾಗಿ ಹೋರಾಟ ಮಾಡುವವರಿಗೆ ನನ್ನ ಸಲಹೆ ಇಷ್ಟೇ. ಇಂತಹ ಹೋರಾಟ ತುಳು ಭಾಷೆಯನ್ನು ಎತ್ತಿ ಹಿಡಿಯಬೇಕು. ಇಷ್ಟೇ ಉತ್ಸಾಹವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳುವನ್ನು ಸೇರಿಸುವ ವಿಚಾರದಲ್ಲೂ ತೋರಿಸಬೇಕು ತುಕಾರಾಮ ಪೂಜಾರಿ ಇತಿಹಾಸ ತಜ್ಞ

‘ಇಡೀ ಜಿಲ್ಲೆಯನ್ನು ಮಂಗಳೂರು ಪ್ರತಿನಿಧಿಸದು’

‘ಜಿಲ್ಲೆಯ ಹೆಸರು ತುಳುವನ್ನು ಪ್ರತಿನಿಧಿಸಬೇಕು ಎನ್ನುವುದಾದರೆ 'ಮಂಗಳೂರು' ಎನ್ನುವುದು ಕನ್ನಡ ಹೆಸರು. 'ದಕ್ಷಿಣ ಕನ್ನಡ' ಎನ್ನುವುದೂ ಕನ್ನಡ ಹೆಸರೇ. ಏನು ವ್ಯತ್ಯಾಸ ಆದ ಹಾಗಾಯಿತು. ಕರ್ನಾಟಕದ ಬಹುತೇಕ ಜಿಲ್ಲೆಗಳು ಜಿಲ್ಲಾ ಕೇಂದ್ರದ ಹೆಸರಿನಿಂದ ಗುರುತಿಸಿಕೊಳ್ಳುತ್ತವೆ ಆದ್ದರಿಂದ ಮಂಗಳೂರು ಜಿಲ್ಲೆ ಆಗಬೇಕು ಎನ್ನುವುದಾದರೆ ಕೊಡಗು ಜಿಲ್ಲೆ ಮಡಿಕೇರಿ ಜಿಲ್ಲೆ ಎಂದೂ ಉತ್ತರ ಕನ್ನಡವು ಕಾರವಾರ ಜಿಲ್ಲೆ ಎಂದೂ ಆಗಬೇಡವೆ’

‘ಜಿಲ್ಲಾ ಕೇಂದ್ರದ ಹೆಸರಿನಿಂದಲೇ ಗುರುತಿಸಿಕೊಳ್ಳುವ ಜಿಲ್ಲೆಗಳು ಯಾಕೆ ಹಾಗೆ ಎಂದರೆ ಅಲ್ಲಿನ ಜನರು ಅದನ್ನು ಒಪ್ಪಿಕೊಂಡಿದ್ದಾರೆ. ನಾವು ಅದನ್ನು ಒಪ್ಪಿಲ್ಲ. ಮಂಗಳೂರು ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವುದಿಲ್ಲ. ವಿಜಯ ನಗರದ ಕಾಲದಲ್ಲಿ ಮಂಗಳೂರು ರಾಜ್ಯ ಅಥವಾ ಮಂಗಳೂರು ದೇಶ ಎಂತಲೂ ಬಾರ್ಕೂರು ರಾಜ್ಯ ಅಥವಾ ಬಾರ್ಕೂರು ದೇಶ ಎಂತಲೂ ಕರೆಯುತ್ತಿದ್ದರು.

ಆದರೆ ಅದು 'ತುಳು ನಾಡು' ಎನ್ನುವ ಪ್ರಧಾನ ಐಡೆಂಟಿಟಿಯನ್ನು ಗುರುತಿಸಿದ ನಂತರ ಉಪ ಘಟಕವಾಗಿ ಮಂಗಳೂರು ರಾಜ್ಯ ಬಾರ್ಕೂರು ರಾಜ್ಯ ಎಂದು ಗುರುತಿಸಿದ್ದೇ ಹೊರತು ಮಂಗಳೂರನ್ನು ಮಾತ್ರ ಪ್ರಧಾನವಾಗಿಸಿದ್ದಾಗಿರಲಿಲ್ಲ. ಶೇ 48ರಷ್ಟು ತುಳು ಭಾಷಿಕರು ಈಗಿದ್ದಾರೆ. ವಿಜಯ ನಗರದ ಕಾಲದಲ್ಲೂ ತುಳುವೇ ಇಲ್ಲಿನ ಮುಖ್ಯ ಭಾಷೆಯಾಗಿತ್ತು. ಆದರೆ ವಿಜಯನಗರದ ಕಾಲದಲ್ಲೂ ತುಳುನಾಡಿನ ಅಧಿಕೃತ ಭಾಷೆ ಕನ್ನಡವೇ ಆಗಿತ್ತು. ಅಲ್ಲದೆ ತುಳು ನಾಡಿನ ಆಳುಪ ಅರಸರು ಕನ್ನಡ ಶಾಸನವನ್ನೂ ಹಾಕಿಸಿದ್ದಾರೆ. ವಿಜಯನಗರದ ಕಾಲದಲ್ಲಿ ತುಳುನಾಡು ಕನ್ನಡವು 'ಕನ್ನಡದ ದಕ್ಷಿಣ' ಎಂದು ಗುರುತಿಸಲ್ಪಟ್ಟಿತ್ತು. ಅಂದರೆ ವಿಜಯನಗರದ ದಕ್ಷಿಣದ ಕೊನೆ ಎಂಬರ್ಥದಲ್ಲಿ ಈ ಪ್ರಯೋಗ ಇತ್ತು. 'ಕನ್ನಡದ ದಕ್ಷಿಣ' ವು 'ದಕ್ಷಿಣ ಕನ್ನಡ' ಎಂದು ಆದದ್ದರಲ್ಲಿ ಸಮಸ್ಯೆ ಏನಿದೆ.

'ದಕ್ಷಿಣ ಕನ್ನಡ' ಪದದಲ್ಲಿರುವ 'ಕನ್ನಡ' ಕ್ಕೆ ವಿರೋಧ ಇದೆ ಆದರೆ 'ಮಂಗಳೂರು' ಎನ್ನುವ ಕನ್ನಡ ಪದಕ್ಕೆ ವಿರೋಧ ಇಲ್ಲ ಎನ್ನುವುದು ತಾರ್ಕಿಕ ಸಮಂಜಸತೆ ಇಲ್ಲದ ವಾದವಾಗಿದೆ. 'ಕನ್ನಡದ ದಕ್ಷಿಣ' ಎನ್ನುವುದು ವಿಜಯ ನಗರ ಕಾಲದ ಪರಿಕಲ್ಪನೆಯೆ ಹೊರತು ರಾಜ್ಯ ಪುನರ್ವಿಂಗಡಣೆಯದ್ದಲ್ಲ. ರಾಜ್ಯ ಪುನರ್ವಿಂಗಡಣೆಯ ಕಾಲದಲ್ಲಿ 'ದಕ್ಷಿಣ ಕನ್ನಡ' ಎನ್ನುವುದಿದ್ದರೆ ಚಾಮರಾಜನಗರ ಜಿಲ್ಲೆಯನ್ನು ಹಾಗೆ ಕರೆಯಬೇಕಾಗಿತ್ತು. ಬದಲು ಐತಿಹಾಸಿಕವಾಗಿ 'ಕನ್ನಡದ ದಕ್ಷಿಣ' ಪರಿಕಲ್ಪನೆಯನ್ನು 'ದಕ್ಷಿಣ ಕನ್ನಡ' ಎಂದು ಬಳಸಿದ್ದು ಅರ್ಥಪೂರ್ಣವಾಗಿದೆ. ಅಲ್ಲದೆ ದಕ್ಷಿಣ ಕನ್ನಡದ ಕನ್ನಡಕ್ಕೆ ಒಂದು ಅನನ್ಯತೆ ಇದೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೂ ದಕ್ಷಿಣ ಕನ್ನಡದ ಕೊಡುಗೆ ಬಹಳವಿದೆ. ಆದ್ದರಿಂದ ದಕ್ಷಿಣ ಕನ್ನಡ ಪದ ಎನ್ನುವ ಹೆಸರೇ ಸೂಕ್ತ. ಇದರ ಹೊರತಾಗಿ ಮಂಗಳೂರು ಜಿಲ್ಲೆ ಎಂದು ಪ್ರತಿಪಾದಿಸುವವರಿಗೆ ಬೇರೆ ಕಾರಣಗಳಿದ್ದರೆ ಅದನ್ನು ಮನವರಿಕೆ ಮಾಡಿಕೊಡಬೇಕು ಹೊರತು ಹರಿಹಾಯಲು ಬರುವುದಲ್ಲ. ಹರಿಹಾಯುವಿಕೆಯು ವೈಚಾರಿಕ ಟೊಳ್ಳುತನವನ್ನಷ್ಟೆ ಸೂಚಿಸುತ್ತದೆ ಅರವಿಂದ ಚೊಕ್ಕಾಡಿ ವಿದ್ವಾಂಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.