ವಿಟ್ಲ: ‘ರಾಗ ದ್ವೇಷವನ್ನು ದೂರ ಮಾಡಿ, ಪ್ರೀತಿ ಭಾವವನ್ನು ತುಂಬಿಕೊಳ್ಳುವ ಕಾರ್ಯವಾಗಬೇಕು. ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿಪಡಿಸುವ ಕಾರ್ಯವನ್ನು ಶ್ರೀಮದ್ಭಾಗವತ ಮಾಡುತ್ತದೆ’ ಎಂದು ಒಡಿಯೂರು ಗುರು ದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ದತ್ತ ಜಯಂತಿ ಮಹೋತ್ಸವ, ದತ್ತ ಮಹಾಯಾಗ ಸಪ್ತಾಹ, ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಹಾಗೂ ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗ್ಗೆ ದತ್ತ ಮಹಾಯಾಗ ಆರಂಭ, ದತ್ತ ಮಾಲಾಧಾರಣೆ, ಮಹಾ ಪೂಜೆ, ಸಾಯಂಕಾಲ ದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ, ರಾತ್ರಿ ರಂಗಪೂಜೆ, ಬೆಳ್ಳಿರಥೋತ್ಸವ ನಡೆಯಿತು. ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ನಡೆಯಿತು. ಸಾದ್ವಿ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಆನಂದ ಶೆಟ್ಟಿ, ಹಿರಣ್ಯ ವೆಂಕಟೇಶ್ವರ ಭಟ್, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ವಜ್ರಮತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ ಇದ್ದರು. ಯಶವಂತ ವಿಟ್ಲ ನಿರೂಪಿಸಿದರು.

ಬದುಕಿನ ಕತ್ತಲನ್ನು ದೂರ ಮಾಡುವ ಕಾರ್ಯ ಗುರು ತತ್ವದ ಮೂಲಕ ನಡಯಬೇಕು. ಮನಸ್ಸಿಗೆ ಸದ್ವಿಚಾರಗಳನ್ನು ನೀಡಿದಾಗ ಉತ್ತಮ ಹಾದಿಯಲ್ಲಿ ನಡೆಯಲು ಸಾಧ್ಯ

- ಗುರುದೇವಾನಂದ ಸ್ವಾಮೀಜಿ ಒಡಿಯೂರು ಗುರು ದೇವದತ್ತ ಸಂಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.