ಬಂಟ್ವಾಳ: ಇಲ್ಲಿನ ಎಂಜಿನಿಯರಿಂಗ್ ಪದವೀಧರರೊಬ್ಬರಿಗೆ ಇಫ್ಕೊ ಕಂಪನಿಯ ಡೀಲರ್ ಶಿಪ್ ನೀಡುವುದಾಗಿ ಆಮಿಷವೊಡ್ಡಿ ₹ 17.60 ಲಕ್ಷ ಪಡೆದು ವಂಚಿಸಲಾಗಿದೆ.

ಬಂಟ್ವಾಳ ನಿವಾಸಿ ವಿಕ್ರಂ ಪ್ರಭು ಎಂಬುವರಿಗೆ ಡೀಲರ್ ಶಿಪ್ ನೀಡುತ್ತೇವೆ ಎಂದು ನೀಲೇಶ್ ಮಿಶ್ರಾ ಎಂಬ ಹೆಸರಲ್ಲಿ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಕರೆ ಮಾಡಿದ್ದರು. ಅರ್ಜಿ ಫಾರಂ ಕಳುಹಿಸಿ ಆಧಾರ್, ಪಾನ್ ಮತ್ತು ಬ್ಯಾಂಕ್ ವಿವರ ಪಡೆದುಕೊಂಡಿದ್ದರು. ಆರಂಭದಲ್ಲಿ ಹೆಸರು ನೋಂದಣಿ ನೆಪದಲ್ಲಿ ₹ 35ಸಾವಿರ ಪಡೆದು ಬಳಿಕ ಜಿಎಸ್ಟಿ, ಸಾಗಾಟ, ಒಪ್ಪಂದ ಪತ್ರ ಸೇರಿದಂತೆ ಹಂತ ಹಂತವಾಗಿ ₹ 17,60,810 ಕಳುಹಿಸಿದ್ದಾರೆ. ಆ.8ರಂದು ಮತ್ತೆ ಕರೆ ಮಾಡಿ ಆ.11ರಂದು ಮಡಂತ್ಯಾರು ಗೋದಾಮಿಗೆ ಬರುವುದಾಗಿ ತಿಳಿಸಿ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಆರೋಪಿಸಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.