ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಋಣ ಸಮಾಜಕ್ಕೆ ಅರ್ಪಿಸಿ : ಪ್ರಕಾಶ್ ಶೆಟ್ಟಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟ
Last Updated 5 ಡಿಸೆಂಬರ್ 2022, 5:29 IST
ಅಕ್ಷರ ಗಾತ್ರ

ಮೂಲ್ಕಿ: ಸಮಾಜದಿಂದ ಪಡೆದ ಋಣವನ್ನು ಮರಳಿ ಸಮಾಜಕ್ಕೆ ಅರ್ಪಿಸಿದಾಗ ಮಾತ್ರ ಜೀವನ ಸಾರ್ಥಕ ಎಂದು ಉದ್ಯಮಿ ಪ್ರಕಾಶ್ ಶೆಟ್ಟಿ ಹೇಳಿದರು.

ಇಲ್ಲಿ ಭಾನುವಾರ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕನ್ಯಾಸ ಸದಾಶಿವ ಶೆಟ್ಟಿ ಅವರು ಶಿಕ್ಷಣ, ಬಡವರ್ಗದ ಮನೆ ದುರಸ್ತಿ, ಹೆಣ್ಣು ಮಕ್ಕಳ ಮದುವೆ, ವೈದ್ಯಕೀಯ, ಕ್ರೀಡಾ ನೆರವುಗಳು ಸೇರಿದಂತೆ ಒಟ್ಟು ₹40 ಲಕ್ಷದ ಸೇವಾ ಯೋಜನೆಗಳನ್ನು ವಿತರಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ, ಪಿ ಕಮಲಾಕ್ಷ ಆಚಾರ್, ಡಾ. ಪ್ರಭಾಕರ ಜೋಷಿ, ಗುಡ್ಡ ಪಾಣಾರ, ಎಂ. ಎ. ನಾಯ್ಕ್, ಸರಪಾಡಿ ಅಶೋಕ ಶೆಟ್ಟಿ, ಎಂ. ನಾರಾಯಣ, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಯುವವಾಹಿನಿಯ ರಾಜೇಶ್, ದೇವಿದಾಸ ಶೆಟ್ಟಿ, ಕ್ರೀಡಾಪಟು ಅಶ್ವಿನಿ ಅಕ್ಕುಂಜೆ ಅವರನ್ನು ಸನ್ಮಾನಿಸಲಾಯಿತು. ಕಾಂತಾರ ಸಿನಿಮಾದ ಸ್ಥಳೀಯ ಕಲಾವಿದರನ್ನು ಗೌರವಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಶುಭ ಹಾರೈಸಿದರು.
ಪಟ್ಲ ಫೌಂಡೇಷನ್ ಟ್ರಸ್ಟ್‌ ಸಹಯೋಗದೊಂದಿಗೆ ಪಾವಂಜೆ ಯಕ್ಷಗಾನ ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.

ಕಟೀಲು ದೇವಳದ ಲಕ್ಷ್ಮೀ ನಾರಾಯಣ ಆಸ್ರಣ್ಣ, ಒಕ್ಕೂಟದ ನಿರ್ದೇಶಕ ತೋನ್ಸೆ ಆನಂದ ಶೆಟ್ಟಿ, ಪಟ್ಲ ಫೌಂಡೇಷನ್ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಕರ್ನಿರೆ ವಿಶ್ವನಾಥ ಶೆಟ್ಟಿ, ಮನೋಹರ ಶೆಟ್ಟಿ ಬಪ್ಪನಾಡು, ಅರವಿಂದ ಪೂಂಜಾ, ರತ್ನಾಕರ ಶೆಟ್ಟಿ ಮೂಮಡ್ಕೂರು, ಸುಭಾಶ್ ಶೆಟ್ಟಿ, ಯೋಗೀಶ್ ಕೊಟ್ಯಾನ್, ಸಂತೋಷ್‌ ಕುಮಾರ್ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ, ಉಳ್ಳೂರು ಮೋಹನ್ ದಾಸ ಶೆಟ್ಟಿ, ಪ್ರವೀಣ್ ಭೋಜಶೆಟ್ಟಿ, ಸದಾಶಿವ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ಸುದೇಶ್ ಕುಮಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT