ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ: ಸರ್ವಧರ್ಮ ಸಮ್ಮೇಳನ ಇಂದು

Last Updated 22 ನವೆಂಬರ್ 2022, 6:22 IST
ಅಕ್ಷರ ಗಾತ್ರ

ಉಜಿರೆ: ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನವನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಮಂಗಳವಾರ ಸಂಜೆ 5 ಗಂಟೆಗೆ ಉದ್ಘಾಟಿಸುವರು.

ಶಿವಮೊಗ್ಗದ ವಿದ್ವಾಂಸ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಬಸ್ತಿಕಟ್ಟೆ ಚರ್ಚ್‌ ಧರ್ಮಗುರು ಮಾರ್ಸೆಲ್ ಪಿಂಟೊ, ವಿಜಯಪುರದ ಹಾಸಿಂಪೀರ ಇ ವಾಲೀಕರ ಮತ್ತು ಮೂಡುಬಿದ್ರೆಯ ಮುನಿರಾಜ ರೆಂಜಾಳ ಉಪನ್ಯಾಸ ನೀಡುವರು.

ವಸ್ತುಪ್ರದರ್ಶನ: ಲಕ್ಷದೀಪೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ವಸ್ತುಪ್ರದರ್ಶನದಲ್ಲಿ ಸಮಾರು 200ಕ್ಕೂ ಹೆಚ್ಚು ಮಳಿಗೆಗಳಿದ್ದು, ಪ್ರಮುಖ ಆಕರ್ಷಣೆಯಾಗಿದೆ. ಜಾನಪದ ಕಲಾವಿದರು (ಕೊಂಬು, ಕಹಳೆ, ಕರಗ, ಕಂಸಾಳೆ) ಇತ್ಯಾದಿ ಕಲಾ ಸೇವೆಯೂ ಅನುರಣಿಸುತ್ತಿವೆ. ಬುಧವಾರ ರಾತ್ರಿ ಸಾಹಿತ್ಯ ಸಮ್ಮೇಳನ ಹಾಗೂ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ. ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ.

ಕೆರೆಕಟ್ಟೆ ಉತ್ಸವ: ಭಾನುವಾರ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ದೇವಸ್ಥಾನದ ಅಂಗಣದಲ್ಲಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಇರಿಸಿ 16 ಸುತ್ತು ಜಾಗಟೆ, ಶಂಖ, ನಾದಸ್ವರ, ಡೋಲು ಮತ್ತು ಸಂಗೀತದೊಂದಿಗೆ ಪ್ರದಕ್ಷಿಣೆ ನೆರವೇರಿತು.
ಬಳಿಕ ಗಜಪಡೆ ಮತ್ತು ಗೊಂಬೆಗಳ ಮೆರವಣಿಗೆಯೊಂದಿಗೆ ಕೆರೆಕಟ್ಟೆಗೆ 5 ಸುತ್ತು ಪ್ರದಕ್ಷಿಣೆ ನಂತರ ಕೆರೆಕಟ್ಟೆಯಲ್ಲಿ ಸಂಗೀತ, ನಾಗಸ್ವರ ಮೂಲಕ ಪೂಜಾ ವಿಧಿ-ವಿಧಾನ ನಡೆಯಿತು. ಭಕ್ತರು ಹಣತೆ ದೀಪ ಹಚ್ಚಿ ಸಂಭ್ರಮಿಸಿದರು. ಬಳಿಕ ದೇವರನ್ನು ಬೆಳ್ಳಿ ರಥದಲ್ಲಿ ವಿರಾಜಮಾನಗೊಳಿಸಿ ಮಂಗಳಾರತಿ ಬಳಿಕ ದೇಗುಲ ಸುತ್ತ ಪ್ರದಕ್ಷಿಣೆ ಹಾಕಿ ಗುಡಿಗೆ ಕರೆ ತರುವ ಮೂಲಕ ಕೆರೆಕಟ್ಟೆ ಉತ್ಸವ ಪೂರ್ಣಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT