ವೈದ್ಯರ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನಾವೆಲ್ಲರೂ ಒಂದು ಕ್ಷಣ ತಡೆದು, ಚಿಂತನೆ ಮಾಡೋಣ ಮತ್ತು ವೈದ್ಯಕೀಯ ವಿಜ್ಞಾನವಲ್ಲದೇ ಅದರ ಮಹತ್ವವನ್ನು ನೆನಪಿಸಿಕೊಳ್ಳೋಣ. ವಿಜ್ಞಾನ ಮತ್ತು ಮಾನವೀಯತೆ ಇವೆರಡನ್ನೂ ಒಗ್ಗೂಡಿಸುವ ಕ್ಷೇತ್ರಗಳಲ್ಲಿ ಪ್ರಮುಖವಾದದ್ದು ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್. ಇದು ಕೇವಲ ಶಸ್ತ್ರಚಿಕಿತ್ಸೆ ಅಲ್ಲ. ಡಯಾಲಿಸೀಸ್ಗೆ ಬಂಧಿಯಾಗಿದ್ದ, ಅನಿಶ್ಚಿತ ಭವಿಷ್ಯದೊಂದಿಗೆ ಬದುಕುತ್ತಿದ್ದ ರೋಗಿಗೆ ಹೊಸ ಜೀವ ನೀಡುವ ಪುನರ್ಜನ್ಮವಾಗಿದೆ.

ಭಾರತವು ಕಳೆದ ಕೆಲ ದಶಕಗಳಲ್ಲಿ ನೆಫ್ರೋಲಾಜಿ ಮತ್ತು ಟ್ರಾನ್ಸ್ಪ್ಲಾಂಟೇಶನ್ ವೈದ್ಯಕೀಯದಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಇತರರೊಂದಿಗೆ ಹೋಲಿಸಿದರೆ ನಾವು ಇಂದು ಕಡಿಮೆ ವೆಚ್ಚದಲ್ಲಿ, ಉತ್ತಮ ಗುಣಮಟ್ಟದ ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್ ಮಾಡುವ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. ಈ ಸಾಧನೆಯ ಹಿಂದಿರುವ ಶಕ್ತಿಗಳು ನಮ್ಮ ವೈದ್ಯರು, ನರ್ಸ್ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಬೆಂಬಲ ಸಿಬ್ಬಂದಿ.

ಕಿಡ್ನಿ ವೈಫಲ್ಯ - ಒಂದು ಕಠೋರ ಸತ್ಯ

ವಿಶ್ವದಾದ್ಯಂತ ಕ್ರೋನಿಕ್ ಕಿಡ್ನಿ ಡಿಸೀಸ್ (CKD) ಮರಣಕಾರಕ ಕಾರಣಗಳಲ್ಲಿ ಒಂದಾಗಿದೆ. ಭಾರತದಲ್ಲಿ ಪ್ರತಿದಿನವೂ ಹತ್ತನೇ ವ್ಯಕ್ತಿಗೆ ಇದು ಪ್ರಭಾವ ಬೀರುತ್ತಿದೆ. ಡಯಾಬಿಟಿಸ್, ಹೈಪರ್ಟೆನ್ಷನ್ ಹಾಗೂ ಜನಸಂಖ್ಯೆಯ ವೃದ್ಧಿಯಿಂದ ಇದರ ಪ್ರಮಾಣ ಇನ್ನೂ ಹೆಚ್ಚುತ್ತಿದೆ. ಬಹುತೇಕರಿಗೆ ಡಯಾಲಿಸಿಸ್ ಒಂದು ನಿತ್ಯದ ಅಂಶವಾಗಿ ಮಾರ್ಪಟ್ಟಿದೆ. ಆದರೆ ಇದು ಜೀವ ಉಳಿಸಬಹುದು, ಜೀವನದ ಗುಣಮಟ್ಟವನ್ನಷ್ಟೆ ಮರಳಿ ನೀಡಲಾಗದು. ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್ ಮಾತ್ರವೇ ಅಂತಿಮ ವಿಧಾನವಾಗಿ ಉಳಿದಿದೆ.

ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್: ಜೀವಮಾನಕ್ಕೆ ಹೊಸ ಅವಕಾಶ

ಯಶಸ್ವಿ ಟ್ರಾನ್ಸ್ಪ್ಲಾಂಟೇಶನ್ನೊಂದಿಗೆ, ರೋಗಿಗಳು ಡಯಾಲಿಸೀಸ್ ಬಂಧನದಿಂದ ಮುಕ್ತರಾಗುತ್ತಾರೆ. ಕೆಲಸಕ್ಕೆ ಮರಳುವುದು, ಕುಟುಂಬ ಆರಂಭಿಸುವುದು, ಪ್ರವಾಸ ಮಾಡುವುದು, ಇವೆಲ್ಲವೂ ಮತ್ತೆ ಸಾಧ್ಯವಾಗುತ್ತದೆ. ಶಕ್ತಿ, ಆತ್ಮವಿಶ್ವಾಸ, ಗೌರವ ಎಲ್ಲವೂ ಮರಳಿ ಬರುತ್ತದೆ. ಜೀವಂತ ಸಂಬಂಧಿಯಿಂದ ಅಥವಾ ಬ್ರೇನ್ ಡೆಡ್ ದಾನಿಯಿಂದ ಲಭಿಸಿದ ಕಿಡ್ನಿ, ಬೇರೊಬ್ಬರ ಬದುಕಿಗೆ ಜೀವ ನೀಡುವ ನಿಸ್ವಾರ್ಥ ಪ್ರೀತಿಯ ಸಂಕೇತವಾಗುತ್ತದೆ.

ಇದು ಸುಲಭಯಾನವಲ್ಲ, ಶಸ್ತ್ರಚಿಕಿತ್ಸಾ ನಿಖರತೆ, ನೈತಿಕ ಸ್ಪಷ್ಟತೆ, ರೋಗನಿರೋಧಕ ತಂತ್ರಜ್ಞಾನ ಹಾಗೂ ಹಲವು ಕ್ಷೇತ್ರಗಳ ಸಾಮೂಹಿಕ ಪ್ರಯತ್ನ ಬೇಕಾಗುತ್ತದೆ. ವಿಜ್ಞಾನ ಮತ್ತು ದಯೆಯ ಸಮ್ಮಿಳನವಿದು.

ಮಂಗಳೂರಿನ ಇಂಡಿಯಾನ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯಲ್ಲಿ ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್ ಕೇಂದ್ರವು ಉತ್ತಮತೆಯ ಮಾದರಿಯಾಗಿ ಬೆಳೆದಿದೆ. ಹಲವು ಯಶಸ್ವಿ ಶಸ್ತ್ರಚಿಕಿತ್ಸೆಗಳು ನೈತಿಕ ಆಧಾರಿತ ಕ್ರಮಗಳು, ತಾಂತ್ರಿಕ ಕೌಶಲ್ಯ ಮತ್ತು ಕಾಳಜಿಯೊಂದಿಗೆ ನಡೆದ ಮತ್ತು ನಂತರದ ಪಾಲನೆ ಇದನ್ನು ಹೆಗ್ಗಳಿಕೆಯ ಘಟನೆಯಾಗಿಸಿದೆ.

ನಮ್ಮ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ವಿದೇಶಿ ರೋಗಿಗೆ ಟ್ರಾನ್ಸ್ಪ್ಲಾಂಟೇಶನ್ ಮೂಲಕ ನಾವು ಐತಿಹಾಸಿಕ ಸಾಧನೆ ಮಾಡಿದ್ದೆವು. ಈ ಯಶಸ್ಸು ನಮ್ಮ ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ವಿಶ್ವಮಟ್ಟದ ನಂಬಿಕೆ ತರಿಸಲು ಕಾರಣವಾಯಿತು. ಇದರಿಂದ ಇತ್ತೀಚೆಗೆ ಪ್ರದೇಶದಿಂದಲೂ (ವಿಶೇಷವಾಗಿ ಟ್ರಾನ್ಸ್ಪ್ಲಾಂಟ್ ತಂತ್ರಜ್ಞಾನ ಇಲ್ಲದ ಅಥವಾ ಬಹಳ ದುಬಾರಿ ದೇಶಗಳಿಂದ) ಹೆಚ್ಚಿನ ರೋಗಿಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಕೇವಲ ಕರ್ನಾಟಕದವರಿಗಲ್ಲ, ಭಾರತೀಯ ವೈದ್ಯಕೀಯ ಸೇವೆಯ ಪ್ರಾಮಾಣಿಕತೆ, ಗುಣಮಟ್ಟ ಮತ್ತು ಕಡಿಮೆ ವೆಚ್ಚದ ಪರಂಪರೆಯನ್ನು ಮುಂದುವರಿಸುತ್ತಿರುವೆವು.

ಸವಾಲುಗಳು

ಯಶಸ್ಸಿನ ನಡುವೆಯೂ ಹಲವು ಸವಾಲುಗಳು ನಮ್ಮ ಮುಂದಿವೆ. ಭಾರತದಲ್ಲಿ ಅಂಗಾಂಗ ದಾನ ಕುರಿತು ಅರಿವು ಇನ್ನೂ ಕಡಿಮೆ. ಭಯ, ಅಂಧಶ್ರದ್ಧೆ ಮತ್ತು ತಿಳಿವಳಿಕೆಯ ಕೊರತೆಯು ದಾನ ಕಾರ್ಯವನ್ನು ಹಿಮ್ಮೆಟ್ಟಿಸುತ್ತಿವೆ. ವೈದ್ಯರು, ಮಾಧ್ಯಮಗಳು, ನೀತಿ ನಿರ್ಮಾಪಕರು ಮತ್ತು ಸಮಾಜ ಎಲ್ಲರೂ ಅಂಗಾಂಗ ದಾನದ ಬಗ್ಗೆ ಸಂವಾದ ಮಾಡಬೇಕು.

ಆರೋಗ್ಯ ವಿಮೆ ವ್ಯಾಪ್ತಿಯ ವಿಸ್ತರಣೆ, ಸರ್ಕಾರದ ಬೆಂಬಲ, ಶಸ್ತ್ರಚಿಕಿತ್ಸೆಯ ನಂತರದ ಔಷಧ ಬಳಕೆ ಮತ್ತು ಸೋಂಕು ನಿಯಂತ್ರಣದ ಮೇಲೆ ಹೆಚ್ಚಿನ ಬಂಡವಾಳ ಹೂಡಿಕೆ ಅಗತ್ಯ. ಇಂಡಿಯಾನ ಆಸ್ಪತ್ರೆಯಲ್ಲಿ ಈಗ ಡಿಜಿಟಲ್ ಫಾಲೋ-ಅಪ್ ವ್ಯವಸ್ಥೆಯನ್ನೂ ರೂಪಿಸುತ್ತಿದ್ದೇವೆ, ದೂರದ ರಾಜ್ಯಗಳಿಂದ ಬಂದ ರೋಗಿಗಳಿಗೂ ಉತ್ತಮದ ರೀತಿಯಲ್ಲಿ ಸಂಪರ್ಕ ಇರಲಿ ಎಂಬುದಕ್ಕಾಗಿ.

ನಾವು ಏನು ಮಾಡಬಹುದು?

ವೈದ್ಯರ ದಿನ ಕೃತಜ್ಞತೆಯ ದಿನ. ಇದು ಕೇವಲ ಆಚರಣೆಯ ದಿನವಾಗದೆ, ನಮ್ಮ ಕರ್ತವ್ಯದ ದಿನವೂ ಆಗಲಿ. ಹೆಚ್ಚು ಟ್ರಾನ್ಸ್ಪ್ಲಾಂಟೇಶನ್ಗಳು, ಹೆಚ್ಚು ಅರಿವು, ಹೆಚ್ಚುನೈತಿಕತೆ, ಹೆಚ್ಚು ಜೀವ ಉಳಿಸಿ.

ಪ್ರತಿಯೊಬ್ಬ ವೈದ್ಯರೂ ಈ ಸಂದೇಶ ಓದುತ್ತಿದ್ದರೆ, ನಿಮ್ಮ ಪ್ರತಿಯೊಂದು ಪರೀಕ್ಷೆ, ಔಷಧ ಅಥವಾ ಶಸ್ತ್ರಚಿಕಿತ್ಸೆಯ ಹಿಂದೆ ಒಬ್ಬ ಜೀವ ಇರ್ತಾನೆ, ಅವನ ಬದುಕು ಬದಲಾಯಿಸಬಹುದು.

ಎಲ್ಲಾ ವೈದ್ಯ ವೃಂದಕ್ಕೆ ವೈದ್ಯರ ದಿನದ ಶುಭಾಶಯಗಳು. ನಮ್ಮ ಸೇವೆ, ಸ್ಪೂರ್ತಿ ಮತ್ತು ಉಪಕಾರದ ಮಾರ್ಗದಲ್ಲಿ ಮುಂದುವರೆಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.