ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯುಮೋನಿಯಾ ರೋಗಿಗೆ ಯಶಸ್ವಿ ಚಿಕಿತ್ಸೆ: ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡದ ಸಾಧನೆ

Last Updated 11 ಜೂನ್ 2021, 4:08 IST
ಅಕ್ಷರ ಗಾತ್ರ

ಮಂಗಳೂರು: ತೀವ್ರವಾದ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದ ರೋಗಿಗೆ ಇಲ್ಲಿನ ಕೆಎಂಸಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನೀಡಿದೆ.

62 ವರ್ಷದ ರಘುವೀರ್ ಅವರು 6 ದಿನಗಳಿಂದ ಜ್ವರ, 2 ದಿನಗಳಿಂದ ಉಸಿರಾಟದ ತೊಂದರೆ, ಕಫ ಸಹಿತ ಕೆಮ್ಮಿನಿಂದ ಬಳಲುತ್ತಿದ್ದರು. ಅವರನ್ನು ಏಪ್ರಿಲ್ 29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಆ ವ್ಯಕ್ತಿಯನ್ನು ಪರೀಕ್ಷಿಸಿದಾಗ ಅವರಲ್ಲಿ ಉಸಿರಾಟದ ಏರಿಳಿತವು 45 ರಷ್ಟು ಮತ್ತು ಹೃದಯ ಬಡಿತವು 120 ರಷ್ಟಿತ್ತು, ಸ್ಯಾಚುರೇಷನ್ ಸುಮಾರು 72-75 ರಷ್ಟಿದ್ದು, ನಾವು ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಸಿಟಿ ಸ್ಕ್ಯಾನ್ ವರದಿಯ ಸ್ಕೋರ್ 22/25 ಇತ್ತು. ಇದರಿಂದ ಇದು ತೀವ್ರ ಕೋವಿಡ್ ನ್ಯುಮೋನಿಯಾ ಎಂಬುದು ನಮಗೆ ತಿಳಿಯಿತು’ ಎಂದು ಕೆಎಂಸಿ ಆಸ್ಪತ್ರೆಯ ಆಂತರಿಕ ಔಷಧಿಯ ವಿಭಾಗದ ಡಾ. ಬಸವಪ್ರಭು ತಿಳಿಸಿದ್ದಾರೆ.

‘ತಕ್ಷಣವೇ ಅವರನ್ನು ಐಸಿಯುಗೆ ವರ್ಗಾಯಿಸಿ, 10 ಲೀಟರ್ ಆಮ್ಲಜನಕ, ರೆಮ್‌ಡೆಸಿವಿರ್, ಸ್ಟೀರಾಯ್ಡ್‌ಗಳು ಮತ್ತು ಹೆಪ್ರಾನಿನ್‌ಗಳೊಂದಿಗೆ ಎನ್‍ಆರ್‌ಬಿಎಂ ಪ್ರಾರಂಭಿಸಿದೆವು. 2-3 ದಿನಗಳವರೆಗೆ ಅವರಿಗೆ ಆಮ್ಲಜನಕದ ಅವಶ್ಯಕತೆ ಅತಿ ಹೆಚ್ಚಿತ್ತು. ನಂತರ ಅವರಿಗೆ ಸ್ಯಾಚುರೇಷನ್ ಕಾಪಾಡಿಕೊಳ್ಳಲು ಆಗಲಿಲ್ಲ. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಯಿತು’ ಎಂದು ಹೇಳಿದ್ದಾರೆ.

‘ಆ ವ್ಯಕ್ತಿಗೆ ಕೋವಿಡ್ ನೆಗೆಟಿವ್ ಬಂದಿದ್ದರಿಂದ ಅವರನ್ನು ಕೋವಿಡ್ ಅಲ್ಲದ ವಾರ್ಡ್‌ಗೆ ಸ್ಥಳಾಂತರಿಸಿ, ವಿಶೇಷವಾಗಿ ಉಸಿರಾಟದ ಫಿಸಿಯೋಥೆರಪಿ ಮುಂದುವರಿಸಲಾಯಿತು. 10 ದಿನಗಳಲ್ಲಿ ಅವರು ಚೇತರಿಸಿಕೊಂಡರು. 1-2 ಲೀಟರ್ ಆಮ್ಲಜನಕದೊಂದಿಗೆ ಅವರಲ್ಲಿ ಶೇ 95 ರಿಂದ ಶೇ 96 ರಷ್ಟು ಸ್ಯಾಚುರೇಷನ್‌ ಕಾಯ್ದುಕೊಳ್ಳಲು ಸಾಧ್ಯವಾಯಿತು. ಮೇ ಕೊನೆಯ ವಾರದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಸದ್ಯಕ್ಕೆ ಮನೆಯ ಕೋಣೆಯಲ್ಲಿ ಶೇ 94 ರಿಂದ ಶೇ 95ರಷ್ಟು ಸ್ಯಾಚುರೇಷನ್ ಕಾಯ್ದುಕೊಂಡಿದ್ದಾರೆ’ ಎಂದು ಡಾ.ಬಸವಪ್ರಭು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT