ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕಾರಿನ ಟೋಲ್ ಶುಲ್ಕ ₹ 200: ತಲಪಾಡಿಯಲ್ಲಿ ಬೆಚ್ಚಿಬಿದ್ದ ಚಾಲಕ

Last Updated 19 ಫೆಬ್ರುವರಿ 2021, 15:28 IST
ಅಕ್ಷರ ಗಾತ್ರ

ಉಳ್ಳಾಲ: ಫಾಸ್ಟ್ ಟ್ಯಾಗ್ ಅಳವಡಿಸದೇ ಇದ್ದಲ್ಲಿ ದುಬಾರಿ ಸುಂಕ ಪಾವತಿಸುವುದು ಹೊಸ ಕಾನೂನು. ಆದರೆ ತಲಪಾಡಿ ಟೋಲ್ ಗೇಟಿನಲ್ಲಿ ಎರಡು ಪಟ್ಟು ಸುಂಕ ಪಾವತಿ ಮಾಡಿ ಗೇಟ್ ದಾಟಿರುವ ಪ್ರಸಂಗ ಇಂದು ನಡೆದಿದೆ.

ಉಪ್ಪಳ ಪಚ್ಚಂಬಳ ನಿವಾಸಿ ಸಂದೇಶ್ ಎಂಬವರು ಮಧ್ಯಾಹ್ನ 11 ಗಂಟೆ ಸುಮಾರಿಗೆ ಮನೆ ಕಡೆಗೆ ಕಾರಿನಲ್ಲಿ ತೆರಳುವ ಸಂದರ್ಭ ಫಾಸ್ಟ್ ಟ್ಯಾಗ್ ಇಲ್ಲದೇ ರೂ. 80 ದುಪ್ಪಟ್ಟು ಸುಂಕ ಪಾವತಿಸಿದ್ದರು. ಬಳಿಕ ಟೋಲ್ ಸಮೀಪದಲ್ಲೇ ಇರುವ ಫಾಸ್ಟ್ ಟ್ಯಾಗ್ ಕೌಂಟರಿನಲ್ಲಿ ಟ್ಯಾಗ್ ಖರೀದಿಸಿದರು. ಅಲ್ಲಿನ ಸಿಬ್ಬಂದಿ ಎರಡು ಗಂಟೆಗಳ ಬಳಿಕ ಫಾಸ್ಟ್ ಟ್ಯಾಗ್ ಚಾಲ್ತಿಗೆ ಬರುವುದಾಗಿ ತಿಳಿಸಿದ್ದಾರೆ. ಎರಡು ಗಂಟೆ ಬಿಟ್ಟು 2 ಗಂಟೆ ಆಸುಪಾಸಿಗೆ ವಾಪಸ್ಸು ಬರುವ ಸಂದರ್ಭ ಮತ್ತೆ ಟೋಲ್ ಸಿಬ್ಬಂದಿ ಸುಂಕ ಕೇಳಿದ್ದಾರೆ. ಅದಾಗಲೇ ದುಪ್ಪಟ್ಟು ಸುಂಕ ಪಾವತಿಸಿರುವುದಾಗಿ ತಿಳಿಸಿ ರಶೀದಿ ತೋರಿಸಿದಾಗ ವಾಹನದ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿ ಸುಂಕ ಪಡೆಯಲಾಗಿತ್ತು. ಆದರೂ ಸುಮ್ಮನಾದ ಸಂದೇಶ್ ತಮ್ಮದಲ್ಲದ ತಪ್ಪಿಗೆ ರೂ.80 ಮತ್ತೆ ಪಾವತಿಸಿದ್ದಾರೆ. ಅಲ್ಲಿಂದ ವಾಪಸ್ಸು ಮಂಗಳೂರಿಗೆ ತಲುಪಿದಾಗ ಮತ್ತೆ ಫಾಸ್ಟ್ ಟ್ಯಾಗ್‌ನಿಂದಲೂ ₹ 40 ಕಡಿತಗೊಂಡಿದೆ. ಇದರಿಂದ ಸಂದೇಶ್ ಒಮ್ಮೆ ಮನೆ ಕಡೆಗೆ ಹೋಗಿಬರಬೇಕಾದರೆ ರೂ. 200 ಅನ್ನು ಪಾವತಿಸಿದಂತಾಗಿದೆ. ಘಟನೆಯಿಂದ ನೊಂದಿರುವ ಅವರು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT