29ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಬಿ.ಎಂ. ಹೆಗ್ಡೆ

7

29ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಬಿ.ಎಂ. ಹೆಗ್ಡೆ

Published:
Updated:
Prajavani

ಮಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಡಾ. ಬಿ.ಎಂ. ಹೆಗ್ಡೆ ಅವರು ಇದೇ 29 ರಿಂದ ಆರಂಭವಾಗಲಿರುವ ದಕ್ಷಿಣ ಕನ್ನಡ ಜಿಲ್ಲಾ 23 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಡಾ. ಹೆಗ್ಡೆಯವರು ಮಾಹೆ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾಗಿದ್ದು, ವಿಶ್ವದಾದ್ಯಂತ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ವೈದ್ಯಕೀಯ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿರುವ ಅವರು, ಸಾವಿರಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇತ್ತೀಚಿನ ವಿದ್ಯುನ್ಮಾನ, ಅಂತರ್ಜಾಲ ಮಾಧ್ಯಮಗಳಲ್ಲೂ ವೈದ್ಯಕೀಯ ಜ್ಞಾನ ಪ್ರಸರಣ, ಅಹಾರ ಪದ್ಧತಿಯ ವೈಶಿಷ್ಟ್ಯತೆ, ಮೌಲ್ಯ ಚಿಂತನೆಯ ಉಪನ್ಯಾಸ ನೀಡುತ್ತಿದ್ದಾರೆ.

ಪರಿಷತ್ತಿನ ಪದಾಧಿಕಾರಿಗಳಾದ ಬಿ. ತಮ್ಮಯ್ಯ, ಡಾ ಶ್ರೀನಾಥ್ ಉಜಿರೆ, ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಬಿ.ಐತಪ್ಪ ನಾಯ್ಕ, ಬಂಟ್ವಾಳ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಮೋಹನ ರಾವ್, ಮಹಿಳಾ ಪ್ರತಿನಿಧಿ ಲೀಲಾ ದಾಮೋದರ್, ಸಂಘ ಸಂಸ್ಥೆಗಳ ಪ್ರತಿನಿಧಿ ಜಾನ್ ಚಂದ್ರನ್ ಭಾಗವಹಿಸಿದ್ದ ಸಭೆಯಲ್ಲಿ ಸರ್ವಾಧ್ಯಕ್ಷರ ಆಯ್ಕೆ ಮಾಡಲಾಯಿತು.

ಡಾ.ಬಿ.ಎಂ. ಹೆಗ್ಡೆಯವರ ಸರ್ವಾಧ್ಯಕ್ಷತೆಯಲ್ಲಿ ಇದೇ 29 ರಿಂದ 31 ರವರೆಗೆ ನಗರದ ಪುರಭವನದಲ್ಲಿ ಸಮ್ಮೇಳನವು ನಡೆಯುತ್ತಿರುವುದು ಹೆಮ್ಮೆ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !