ಶುಕ್ರವಾರ, ಜೂನ್ 18, 2021
21 °C

ದ್ವಿತಾಳ ಪ್ರಯೋಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ನಲ್ಲಿ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಇಲ್ಲಿನ ವಿದ್ವಾನ್ ಮಂಜುನಾಥ್ ಅವರು ಭರತನಾಟ್ಯದ ಕೆಲವು ಪರಿಕಲ್ಪನೆಗಳನ್ನು ಇಟ್ಟುಕೊಂಡು ಎರಡು ಕೈಗಳಲ್ಲಿ ಮಾಡಿರುವ ವಿಭಿನ್ನ ತಾಳ ಪ್ರಯೋಗ ಪ್ರತಿಷ್ಠಿತ ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ನಲ್ಲಿ ದಾಖಲಾಗಿದೆ.

ಬಂಟ್ವಾಳ ತಾಲ್ಲೂಖಿನ ನೇರಳಕಟ್ಟೆ ನಿವಾಸಿ ಮಂಜುನಾಥ್ ಅವರು 23 ನಿಮಿಷ 52 ಸೆಕೆಂಡುಗಳಲ್ಲಿ ಮಾಡಿರುವ 20 ವಿಭಿನ್ನ ರೀತಿಯ ದ್ವಿತಾಳ ಪ್ರಯೋಗವು ಶಾಸ್ತ್ರೀಯ ಕಲಾ ಪ್ರಕಾರದಲ್ಲಿ ಮಾಡಿರುವ ಪ್ರಥಮ ಪ್ರಯೋಗವಾಗಿದೆ. ಮೂಡುಬಿದಿರೆ ಆಳ್ವಾಸ್ ಕಾಲೇಜು, ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಅವರು ಪ್ರಸ್ತುತ ಕಲಬುರ್ಗಿಯಲ್ಲಿ ಭರತನಾಟ್ಯ ತರಬೇತಿ ನೀಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.