ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡಾನೆ ದಾಳಿ: ರೈತರು ಕಂಗಾಲು

Published : 29 ಸೆಪ್ಟೆಂಬರ್ 2024, 14:41 IST
Last Updated : 29 ಸೆಪ್ಟೆಂಬರ್ 2024, 14:41 IST
ಫಾಲೋ ಮಾಡಿ
Comments

ಪುತ್ತೂರು: ತಾಲ್ಲೂಕಿನ ಪೆರ್ನಾಜೆ ಪರಿಸರಕ್ಕೆ ಒಂದು ವಾರದ ಅವಧಿಯಲ್ಲಿ 4 ಬಾರಿ ರಾತ್ರಿ ವೇಳೆ ಕಾಡಾನೆಗಳು ದಾಳಿ ಮಾಡಿ ಕೃಷಿ ಹಾನಿ ಮಾಡಿದ್ದು, ಕೃಷಿಕರು ಕಂಗೆಟ್ಟಿದ್ದಾರೆ.

ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟಕ್ಕೆ ಶನಿವಾರ ರಾತ್ರಿ ದಾಳಿ ಮಾಡಿ ಕಾಡಾನೆಗಳು 10 ತೆಂಗಿನಮರ, 15ಕ್ಕೂ ಅಧಿಕ ಬಾಳೆಗಿಡಗಳು ಹಾಗೂ 2 ದೀವಿ ಹಲಸು ಮರಗಳನ್ನು ನಾಶ ಮಾಡಿವೆ. ಗೋಪಾಲಕೃಷ್ಣ ಕಲ್ಲೂರಾಯ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ, ತೆಂಗು, ಬಾಳೆಗಿಡಗಳನ್ನು ನಾಶ ಮಾಡಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ರಾತ್ರಿ ಗಸ್ತು ತಿರುಗಲು ಪೆರ್ನಾಜೆ ವ್ಯಾಪ್ತಿಗೆ ಬಂದಿದ್ದರು. ಈ ವೇಳೆ ಪೆರ್ನಾಜೆ ಸಮೀಪದ ಸರ್ಜಮೂಲೆ ಎಂಬಲ್ಲಿಗೆ ಕಾಡಾನೆಗಳು ಬಂದಿರುವ ಮಾಹಿತಿಯನ್ನು ಸ್ಥಳೀಯರು ನೀಡಿದ್ದರು. ಸರ್ಜಮೂಲೆಗೆ ತೆರಳಿ ಅಲ್ಲಿಂದ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಿ ತೆರಳಿದ್ದರು. ಆ ಬಳಿಕ ಕಾಡಾನೆಗಳು ಪೆರ್ನಾಜೆ ಪರಿಸರಕ್ಕೆ ಬಂದು ಹಾನಿಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT