ಗುರುವಾರ , ಮೇ 28, 2020
27 °C

ಇಎಸ್ಐ ಯೋಜನೆಯಡಿ ಪರಿಹಾರ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇಎಸ್‌ಐ ಯೋಜನೆಯ ವ್ಯಾಪ್ತಿಗೆ ಒಳಪಡುವ ನೌಕರರು ಹಾಗೂ ಉದ್ಯೋಗದಾತರಿಗೆ ಕೆಲವೊಂದು ಪರಿಹಾರ ಕ್ರಮಗಳನ್ನು ಘೋಷಿಸಲಾಗಿದೆ.

ಯೋಜನೆಯ ವ್ಯಾಪ್ತಿಗೆ ಒಳಪಡುವ ನೌಕರರಿಗೆ ರಾಜೀವ್ ಗಾಂಧಿ ಶ್ರಮಿಕ ಕಲ್ಯಾಣ ಯೋಜನೆ (ಆರ್‌ಜಿಎಸ್‌ಕೆವೈ) ಮತ್ತು ಅಟಲ್ ಭೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ (ಎಬಿವಿಕೆವೈ) ಯೋಜನೆಯಡಿ ಆದಾಯ ಭದ್ರತೆ ಒದಗಿಸಲಾಗುತ್ತಿದೆ. ಕೈಗಾರಿಕಾ ವಿವಾದ ಅಧಿನಿಯಮ 1947 ಅನ್ವಯ ಉದ್ಯೋಗಿಗಳಾಗಿದ್ದು, ಇಎಸ್‌ಐ ಕಾಯ್ದೆಗೊಳಪಟ್ಟಿರುವ ನೌಕರರು ಉದ್ಯೋಗರಹಿತರಾಗಿದ್ದಲ್ಲಿ ಅವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ.

ಎಬಿವಿಕೆವೈ ಅಡಿಯಲ್ಲಿ ಸೌಲಭ್ಯ ಪಡೆಯಲು, ಇಎಸ್‌ಐ ಯೋಜನೆಯಡಿ ಬರುವ ನೌಕರರು ಇಎಸ್‌ಐಸಿಯ ಐಪಿ ಪೋರ್ಟಲ್ ಮೂಲಕ ತಮ್ಮ ಕ್ಲೈಮ್ ಅನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

ಉದ್ಯೋಗದಾತರಿಗೆ ವಿನಾಯ್ತಿ: ಅಕ್ಟೋಬರ್ - 2019 ರಿಂದ ಮಾರ್ಚ್ -2020 ರವರೆಗಿನ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಇಎಸ್‌ಐ ವಂತಿಗೆಯನ್ನು ಮೇ 11 ರ ಬದಲು ಜೂನ್‌ 11 ರವರೆಗೆ ಸಲ್ಲಿಸಲು ಉದ್ಯೋಗದಾತರಿಗೆ ಅನುಮತಿ ನೀಡಲಾಗಿದೆ ಎಂದು ಇಎಸ್‌ಐ ಮಂಗಳೂರು ಕಚೇರಿಯ ಪ್ರಭಾರ ಉಪ ನಿರ್ದೇಶಕ ಎಸ್. ಸಿವರಾಮಕೃಷ್ಣನ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು