ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯಲ್ಲಿ ಪರಂಪರೆಯ ಏಕೀಕರಣದೊಂದಿಗೆ ಸಾಮರಸ್ಯದ ಸ್ಥಾಪನೆ: ಕೆ.ಎಂ.ಕೃಷ್ಣಭಟ್

Published 22 ಜನವರಿ 2024, 15:10 IST
Last Updated 22 ಜನವರಿ 2024, 15:10 IST
ಅಕ್ಷರ ಗಾತ್ರ

ಪುತ್ತೂರು: ಅಯೋಧ್ಯೆಯಲ್ಲಿ ಪರಂಪರೆಯ ಏಕೀಕರಣದೊಂದಿಗೆ ಸಾಮರಸ್ಯದ ಸ್ಥಾಪನೆಯಾಗಿದ್ದು, ಶ್ರೀರಾಮನ ಆದರ್ಶಗಳನ್ನು ನಮ್ಮೊಳಗೆ ಅಳವಡಿಸಿಕೊಂಡು, ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ನಾಡಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ.ಕೃಷ್ಣಭಟ್ ಹೇಳಿದರು.

ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸ್ನಾತಕ ವಿಭಾಗದ ಸಹಯೋಗದಲ್ಲಿ ಹತ್ತು ದಿನ ನಡೆದ ಶ್ರೀರಾಮೋತ್ಸವದ ಸಮಾರೋಪದಲ್ಲಿ ಸೋಮವಾರ ಅವರು ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ, ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ.ಎನ್., ಕಾಲೇಜು ಪರೀಕ್ಷಾಂಗ ಕುಲಸಚಿವ ಎಚ್.ಜಿ.ಶ್ರೀಧರ್, ಕಾಲೇಜಿನ ಕಚೇರಿ ಸಹಾಯಕ ಮೋಹನ್ ಮಾತನಾಡಿದರು.

ಕಾಲೇಜಿನ ವಸತಿ ನಿಲಯದ ಪಾಕ ತಜ್ಞರಾದ ಅಶೋಕ, ಮೋಹನ್ ಎಚ್., ಕಂಪ್ಯೂಟರ್ ಟೆಕ್ನಿಷಿಯನ್ ಪುನೀತ್ ಅರಸೀಕೆರೆ ಅವರನ್ನು ಗೌರವಿಸಲಾಯಿತು.

ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿನಿ ಶುಭದಾ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಕಾರದೊಂದಿಗೆ ಮೂಡಿ ಬಂದ ‘ಎತ್ತಿ ಕೊಂಡಾಡಿ ರಾಮ ನಿನ್ನ’ ಎಂಬ ಆಲ್ಬಂ ಸಾಂಗ್ ಬಿಡುಗಡೆಗೊಳಿಸಲಾಯಿತು. ಆಶಿತಾ ಸ್ವಾಗತಿಸಿದರು. ಸ್ವಾತಿ ವಂದಿಸಿದರು. ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಹರಿಪ್ರಸಾದ್ ಈಶ್ವರಮಂಗಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT