ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು| ಜಪ್ಪಿನಮೊಗರು ಗಣೇಶೋತ್ಸವಕ್ಕೆ ಸಿದ್ಧತೆ

Published 3 ಸೆಪ್ಟೆಂಬರ್ 2024, 15:38 IST
Last Updated 3 ಸೆಪ್ಟೆಂಬರ್ 2024, 15:38 IST
ಅಕ್ಷರ ಗಾತ್ರ

ಮಂಗಳೂರು: ಜಪ್ಪಿನಮೊಗರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 16ನೇ ವರ್ಷದ ಗಣೇಶೋತ್ಸವವು ಸೆ.6ರಿಂದ 8ರ ವರೆಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ನಾಗೇಂದ್ರ ಕುಮಾರ್ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಅವರು, ‘ಸೆ.6ರಂದು ಸಂಜೆ 4 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಗಣೇಶ ಮೂರ್ತಿಯನ್ನು ಮಂಟಪಕ್ಕೆ ತರಲಾಗುವುದು. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ರಾತ್ರಿ 9ರಿಂದ ದೇವಿದಾಸ್ ಕಾಪಿಕಾಡ್ ರಚಿಸಿ, ನಿರ್ದೇಶಿಸಿರುವ ‘ಏಲ್ಲಾ ಗ್ಯಾರಂಟಿ ಅತ್ತ್..!’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.7ರ ಬೆಳಿಗ್ಗೆ 7 ಗಂಟೆಗೆ ವಿಠಲದಾಸ ತಂತ್ರಿ ಪೌರೋಹಿತ್ಯದಲ್ಲಿ ದೇವರ ಪ್ರತಿಷ್ಠಾಪನೆ ನಡೆಯಲಿದೆ. 9 ಗಂಟೆಗೆ ಸಭಾ ಕಾರ್ಯಕ್ರಮ, 9.30ಕ್ಕೆ ಹಸಿರು ತೆನೆ ವಿತರಣೆ, 2 ಗಂಟೆಗೆ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಅಭಿನಯದಲ್ಲಿ ‘ತಿರುಮಲೆತ ತಿಮ್ಮಪ್ಪೆ’ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ’ ಎಂದರು.

ಸಂಜೆ 5.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, 7.30ಕ್ಕೆ ಸಾರ್ವಜನಿಕ ರಂಗಪೂಜೆ, ರಾತ್ರಿ 9ರಿಂದ ಕಲಾವತಿ ದಯಾನಂದ ಉಡುಪಿ ತಂಡದಿಂದ ‘ಸಂಗೀತ ಸಂಜೆ’, ಸೆ.8ಕ್ಕೆ ಬೆಳಿಗ್ಗೆ ಮಹಾಗಣಯಾಗ, ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಅನ್ನ ಸಂತರ್ಪಣೆ, 2 ಗಂಟೆಯಿಂದ ‘ತೆಲಿಕೆದ ಕಮ್ಮೆನ’ ತುಳುಹಾಸ್ಯ ಕಾರ್ಯಕ್ರಮ, ಸಂಜೆ 4.30ರಿಂದ ಗಣೇಶಮೂರ್ತಿಯ ಶೋಭಾಯಾತ್ರೆ, ಕಡೆಕಾರ್‌ನಲ್ಲಿ ಜಲಸ್ತಂಭನ ಮಾಡಲಾಗುವುದು ಎಂದರು.

ಉದಯ್ ಕೊಟ್ಟಾರಿ, ಸುಧಾಕರ್, ಶ್ರೀಧರ್ ರಾಜ್ ಶೆಟ್ಟಿ, ಸುಭಾಷ್ ಅಡಪ್ಪ, ಪ್ರಾಣೇಶ್ ರಾವ್,ಬಾಲಕೃಷ್ಣನ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT